ಕೆಜಿಎಫ್ 2′ ಆಡಿಷನ್ಸ್‌ಗೆ ಜನ ಜಾತ್ರೆ; ಕಿಲೋ ಮೀಟರ್​ ಉದ್ದ ಆಡಿಷನ್​ ಸಾಲಿನಲ್ಲಿ ನಿಂತಿರುವ ಹೊಸ ಪ್ರತಿಭೆಗಳು..

0
507

ಸ್ಯಾಂಡಲ್‍ವುಡ್‌ನಲ್ಲಿ ಅಷ್ಟೇ ಅಲ್ಲದೆ, ಇಡೀ ದೇಶದಾದ್ಯಂತ ಕುತೂಹಲ ಮೂಡಿಸಿರುವ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’. ಈ ಚಿತ್ರ ಸಾಕಷ್ಟು ಕುತೂಹಲದ ಜೊತೆಗೆ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸಿನಿಮಾ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿದ್ದು ಕೆಜಿಎಫ್ ಭಾಗ ಎರಡರಲ್ಲಿ ಜನಸಾಮಾನ್ಯರಿಗೂ ನಟಿಸುವ ಅವಕಾಶವಿದೆ ಎಂದು ಚಿತ್ರತಂಡ ಪ್ರಕಟಣೆ ಹೊರಡಿಸಿತ್ತು. ಅದರಂತೆ 8 ರಿಂದ 16 ವರ್ಷದ ಹುಡುಗರು ಹಾಗೂ 25ಕ್ಕೂ ಹೆಚ್ಚು ವಯಸ್ಸಾದ ಪುರುಷರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 26ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ತನಕ ಆಡಿಷನ್ಸ್ ನಡೆಯಲಿದೆ. ಡೈಲಾಗ್ ಹೇಳಲು ಕೇವಲ ಒಂದು ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಆಯ್ಕೆಯಾದವರಿಗೆ ಕೆಜಿಎಫ್ 2 ಚಿತ್ರದಲ್ಲಿ ನಟಿಸುವ ಅವಕಾಶ ಸಿಗಲಿದೆ. ಎನ್ನುವ ಮಾಹಿತಿಯನ್ನು ಕೂಡ ನೀಡಿತ್ತು.

Also read: ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಕೆಜಿಎಫ್ ಸಿನಿಮಾದ ಭಾಗ 2 ರಲ್ಲಿ ಸಾಮಾನ್ಯರಿಗೂ ನಟಿಸುವ ಅವಕಾಶ, ಆಡಿಶನ್ ವಿವರ ಇಲ್ಲಿದೆ ನೋಡಿ!!

ಹೌದು ಇಂದು ಕೆಜಿಎಫ್ ಸಿನಿಮಾದ ಕೆಜಿಎಫ್​ 2’ ಚಿತ್ರದ ಆಡಿಷನ್​ ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್​ ಡಿಜಿಟಲ್​ ಆಡಿಟೋರಿಯಂನಲ್ಲಿ ಆಡಿಷನ್​ ನಡೆದಿದ್ದು ಖ್ಯಾತ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ನೂರಾರು ಜನರು ಬೆಳಗ್ಗೆಯಿಂದಲೇ ಈ ಆಡಿಟೋರಿಯಂ ಬಳಿ ಕಾದು ನಿಂತಿದ್ದು. ಬಿರು ಬಿಸಿಲನ್ನೂ ಲೆಕ್ಕಿಸದೆ ಜನ ಸಾಗರವೇ ಹರಿದುಬಂದಿದೆ. ಕಿ.ಮೀಗಟ್ಟಲೆ ಕ್ಯೂ ನಿಂತ ಜನ ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ನೋಡಿದ ಜನರು ಬರಿ ಆಡಿಷನ್ಸ್ ಗೆ ಇಷ್ಟೊಂದು ಜನ ಎಂದರೆ ಸಿನಿಮಾದ ಕಥೆ ಹೇಗೆ ಎಂದು ವಿಚಾರದಲ್ಲಿ ಮುಳುಗಿದ್ದಾರೆ.

ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ತನಕ ಆಡಿಷನ್ಸ್ ನಡೆಯಲಿದೆ. ಡೈಲಾಗ್ ಹೇಳಲು ಕೇವಲ ಒಂದು ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಆಯ್ಕೆಯಾದವರಿಗೆ ಕೆಜಿಎಫ್ 2 ಚಿತ್ರದಲ್ಲಿ ನಟಿಸುವ ಅವಕಾಶ ಸಿಗಲಿದೆ. ಈ ಸಲ ಹಲವು ಹೊಸ ಪ್ರತಿಭೆಗಳಿಗೆ ಚಿತ್ರದಲ್ಲಿ ಅವಕಾಶ ನೀಡಲು ಚಿತ್ರತಂಡ ಮುಂದಾಗಿದೆ. ಈ ಸಂಬಂಧ ಆಡಿಷನ್ಸ್‌ಗೆ ಕರೆ ನೀಡಲಾಗಿದೆ. ಇದಕ್ಕೆ ಹೆಚ್ಚಿನ ಸ್ಪಧನೆ ಸಿಕ್ಕಿದ್ದು ಕೆಜಿಎಫ್ ಚಾಪ್ಟರ್ 1 ಸಿನಿಮಾದ ಪ್ರಭಾವವೋ ಏನೋ, ಕೆಜಿಎಫ್ 2 ಸಿನಿಮಾದಲ್ಲಿ ಅಭಿನಯಿಸಲು ಸಾಕಷ್ಟು ಮಂದಿ ಆಸಕ್ತಿ ತೋರಿದ್ದಾರೆ.

Also read: ಗೆದ್ದ ಕೆಜಿಎಫ್’ ನೋಡಿದ ಅಭಿಮಾನಿಗಳ ಮಾತು; ಹೊರ ದೇಶಗಳಲ್ಲಿ ಎರಡೇ ಘಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್, ಮತ್ತಷ್ಟು ಕುತೂಹಲ ಮೂಡಿಸಿದ ಕೆಜಿಎಫ್..

ಕೆಜಿಎಫ್ ತಯಾರಿ ಹೇಗಿದೆ?

ಚಾಪ್ಟರ್​ 2’ನಲ್ಲಿ ರಾಕಿಂಗ್​ ಸ್ಟಾರ್ ಯಶ್​ ಜತೆಗೆ ಬಾಲಿವುಡ್​ ತಾರೆಯರಾದ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ಸಹ ನಟಿಸಲಿದ್ದಾರೆ. ಹಾಗಾಗಿ, ಈ ಸಿನಿಮಾದಲ್ಲಿ ನಟಿಸಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಕೆಲಸಗಳು ಬಿರುಸಾಗಿ ಸಾಗಿವೆ. ಯಶ್ ಚುನಾವಣಾ ಪ್ರಚಾರದಿಂದ ರಿಲ್ಯಾಕ್ಸ್ ಆಗಿದ್ದು ಚಿತ್ರತಂಡದಲ್ಲಿ ಹೊಸ ಹುರುಪು ತುಂಬಿದೆ. ಇಷ್ಟು ದಿನಗಳ ಕಾಲ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಯಶ್ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈಗ ಮತ್ತೆ ಕೆಜಿಎಫ್ ಸಿನಿಮಾದತ್ತ ತಲೆ ಹಾಕಿದ್ದು, ಈಗಾಗಲೇ ಹಾಡಿನ ರೆಕಾರ್ಡಿಂಗ್‌ ಕೆಲಸ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಒಟ್ಟಾರೆಯಾಗಿ ಚಿತ್ರೀಕರಣ ಪ್ರಾರಂಭದಲ್ಲೇ ಹವಾ ಎಬ್ಬಿಸಿರುವ ಕೆಜಿಎಫ್ ಮುಂದೆ ಯಾವ ರೀತಿಯ ಸುದ್ದಿ ಮಾಡುತ್ತೆ ಅಂತ ಕಾದು ನೋಡಬೇಕು.