ಕೆ.ಜಿ.ಎಫ್. ಕನ್ನಡದಲ್ಲಿ ಮಾತ್ರವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ.

0
551

ಬೆಂಗಳೂರು: ಸಂತು ಸ್ಟ್ರೈಟ್ ಫಾವರ್ಡ್ ಚಿತ್ರದ ಬಳಿಕ ‘ರಾಕಿಂಗ್ ಸ್ಟಾರ್’ ಯಶ್ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ಅವರ ‘ಕೆಜಿಎಫ್’ ಚಿತ್ರದ ಪೋಸ್ಟರ್ಗಳು ಕನ್ನಡವಷ್ಟೇ ಅಲ್ಲದೇ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನೇ ಹುಬ್ಬೇರಿಸುವಂತೆ ಮಾಡಿದ್ದವು. ಅದೇ ರೀತಿ ಈಗ ರಿಲೀಸ್ ಆದ ‘ಕೆಜಿಎಫ್’ ಟೀಸರ್ ಸಹ ಇದೀಗ ಸದ್ದು ಮಾಡುತ್ತಿದೆ.

ಕೆಜಿಎಫ್ನ ಚಿಕ್ಕದೊಂದು ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಬರೀ ಕರ್ನಾಟಕದಲ್ಲದೇ ತಮಿಳುನಾಡಿನಾದ್ಯಂತ ಕಮಾಲ್ ಮಾಡಿದೆ. ಅಲ್ಲಿನ ಚಿತ್ರಪ್ರೇಮಿಗಳು ಕೆಜಿಎಫ್ಗೆ ಫಿದಾ ಆಗಿದ್ದಾರೆ.

ಕನ್ನಡ ಸಿನಿಮಾ ಕರ್ನಾಟಕದಲ್ಲಿ ಸದ್ದು ಮಾಡುವುದು ಸಾಮಾನ್ಯ. ಯಶ್ ಜನ್ಮದಿನದಂದು ರಿಲೀಸ್ ಆಗಿರುವ ಕೆಜಿಎಫ್ ಟೀಸರ್ ಕನ್ನಡಾಭಿಮಾನಿಗಳನ್ನು ಫಿದಾ ಆಗಿದ್ದಾರೆ. ಯೂಟ್ಯೂಬ್ ನಲ್ಲೂ ದಾಖಲೆಯ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಇದೀಗ ಹೊರರಾಜ್ಯದಲ್ಲೂ ಕೆಜಿಎಫ್ ಅಲೆ ಎಬ್ಬಿಸಿದೆ.