ಗೆದ್ದ ಕೆಜಿಎಫ್’ ನೋಡಿದ ಅಭಿಮಾನಿಗಳ ಮಾತು; ಹೊರ ದೇಶಗಳಲ್ಲಿ ಎರಡೇ ಘಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್, ಮತ್ತಷ್ಟು ಕುತೂಹಲ ಮೂಡಿಸಿದ ಕೆಜಿಎಫ್..

0
425

ಇಡಿ ದೇಶದ ತುಬೆಲ್ಲ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಹವಾ, ಈ ಸಿನಿಮಾ ಬರಿ ದೇಶದಲ್ಲಿ ಅಷ್ಟೇ ಅಲ್ಲದೆ ಹೊರ ದೇಶಗಳಲ್ಲಿಯೂ ಹವಾ ಎಬ್ಬಿಸಿದ್ದು ಕನ್ನಡ ಚಿತ್ರರಂಗದ ಛಾಪು ಎಲ್ಲಡೆ ಹರಡಿದೆ. ಈ ಸಿನಿಮಾ ಹೊರದೇಶಗಳಲ್ಲಿ ಸುಮಾರು 375 ಥೇಟರ್-ಗಳಲ್ಲಿ ಪ್ರದರ್ಶನವಾಗುತ್ತಿದು. ಆಮೇರಿಕಾ, ಕೆನಡಾ, ಇಟಲಿ, ಜರ್ಮನಿ, ಇಂಗ್ಲೆಂಡ್, ಉಕ್ರೇನ್, ಫಿನ್ ಲ್ಯಾಂಡ್, ಫ್ರಾನ್ಸ್, ನೆದರ್ ಲ್ಯಾಂಡ್ ಸೇರಿ ಸುಮಾರು 20 ದೇಶಗಳಲ್ಲಿ ಕೆಜಿಎಫ್ ತೆರೆಕಂಡಿದ್ದು. ಜರ್ಮನಿಯಲ್ಲೂ ಕೆಜಿಎಫ್ ಪ್ರದರ್ಶನ ವಾಗಲಿದೆ ಜರ್ಮನಿಯಲ್ಲಿ ಬುಕಿಂಗ್ ಓಪನ್ ಆದ ಎರಡೇ ಘಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕೆಜಿಎಫ್ ಕ್ರೇಜ್‌ಗಿರುವ ತಾಕತ್ತು ವಿರೋಧಿ ಭಾಷೆಗಳಿವೆ ಕಾರ ಅರಿದ ಅನುಭವಾಗಿದೆ.


Also read: ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಕ್ಕೆ ವಿರೋಧ ಮಾಡ್ತೀರ, ಈಗ ನಾವು ನಿಮ್ಮ ಡಬ್ಬಿಂಗ್ ಸಿನೆಮಾವನ್ನು ಯಾಕೆ ವಿರೋಧ ಮಾಡಬಾರದು: ತಮಿಳು ಚಿತ್ರೋದ್ಯಮದಿಂದ ಕೆ.ಜಿ.ಎಫ್. ತಂಡಕ್ಕೆ ಪ್ರಶ್ನೆ!

ಕೆಜಿಎಫ್ ನೋಡಿದ ಅಭಿಮಾನಿಗಳ ಮಾತು:

ಬೆಳಗ್ಗೆ ಮೂರುಗಂಟೆಯಿಂದಲೇ ಅನೇಕ ಕಡೆ ಚಿತ್ರ ಪ್ರದರ್ಶನ ಕಂಡಿದ್ದು, ಒಂದು ವಾರದ ಟಿಕೆಟ್​ಗಳು ಈಗಾಗಲೇ ಬುಕಿಂಗ್​ ಮುಗಿದಿದೆ. ಈಗಾಗಲೇ ಸಿನಿಮಾ ನೋಡಿದ ಅಭಿಮಾನಿಗಳು ಯಶ್​ ಅಭಿನಯವನ್ನು ಮೆಚ್ಚಿಕೊಂಡಿದ್ದು, ಅದ್ಭುತ ಎಂದು ಹೇಳುತ್ತಿದ್ದಾರೆ. ಎರಡು ವರ್ಷಗಳ ಶ್ರಮದ ಈ ಚಿತ್ರದಲ್ಲಿ ಅಂತ ವಿಶೇಷತೆ ಏನಿದೆ ಎಂಬ ಪ್ರಶ್ನೆಗೆ ಅಭಿಮಾನಿಗಳು ನೀಡಿದ ಮೆಚ್ಚುಗೆ ಇಲ್ಲಿದೆ ನೋಡಿ.
1. ಅಮ್ಮನ ಆಸೆಯಂತೆ ಪ್ರಬಲ ಶ್ರೀಮಂತನಾಗಿ ಸಾಯಬೇಕು ಎಂಬ ಹುಡುಗನೊಬ್ಬ ಮುಂಬೈ ನಿಂದ ಕೋಲಾರದ ಭೂಗತ ಜಗತ್ತಿಗೆ ಪ್ರವೇಶ ಪಡೆಯುವ ಚಿತ್ರದ ವಿಶೇಷತೆ, ಸಿನಿಮಾದ 155 ನಿಮಿಷಗಳು ಪ್ರತಿಯೊಂದು ಕ್ಷಣವೂ ರೋಚಕವಾಗಿದೆ.
2. ಯಶ್​ ಒಬ್ಬರೇ ಸಿನಿಮಾದ ಹಿರೋ ಎಂಬುದು ಎಲ್ಲರೂ ತಿಳಿದಿರುವುದು. ಆದರೆ ಯಶ್​ ಜೊತೆಗೆ ಮತ್ತೊಬ್ಬ ನಾಯಕ ಕೂಡ ಚಿತ್ರದಲ್ಲಿದ್ದಾರೆ ಅಂತೆ.
3. ಸಾಮಾನ್ಯ ಹುಡುಗನೊಬ್ಬ ಹೇಗೆ ಭೂಗತ ಜಗತ್ತನ್ನು ನಡುಗಿಸುವನಾಗಿ ಬೆಳೆದ ಎಂಬ ಕಿರು ಪರಿಚಯ ಮೊದಲರ್ಧದಲ್ಲಿದೆ. ಈ ಮೂಲಕ ರಾಕಿ ಭಾಯ್​ ಯಾರು, ಆತನ ಗುರಿ ಏನು ಎಂಬುದು ನಿಮಗೆ ತಿಳಿಯಲಿದೆ.


Also read: ವಾಹನ ಸವಾರರೆ ಎಚ್ಚರ; ಪೆಟ್ರೋಲ್ ಪಂಪ್-ಗಳಲ್ಲಿ ನಡೆಯುತ್ತಿದೆ ರಿಮೋಟ್ ಕಂಟ್ರೋಲ್ ಮೋಸ..

4.ಎರಡು ಅವತಾರಣಿಕೆಯಲ್ಲಿ ಬರುವ ಈ ಚಿತ್ರದ ಮೊದಲಭಾಗ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರ ಎಲ್ಲಿಯೂ ಬೋರ್​ ಹೊಡೆಯದಂತೆ ಸಾಗುತ್ತ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಶಾಂತ್​ ನೀಲ್​ ಪ್ರಯತ್ನ ಅದ್ಭುತವಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.
5. ಭೂಗತ ಜಗತ್ತಿನ ರಕ್ತಸಿಕ್ತ ಕಥೆಯಾದ ಈ ಚಿತ್ರದ ಮೊದಲ ಹೈ ಲೈಟ್ಸ್​ ಆ್ಯಕ್ಷನ್​. ಸಿನಿಮಾದ ಪ್ಲಸ್​ ಪಾಯಿಂಟ್​ ಆಗಿರುವ ಈ ಸಾಹಸ ದೃಶ್ಯಗಳಲ್ಲಿ ಯಶ್​ ನೋಡುಗರನ್ನು ಆವರಿಸಿಕೊಳ್ಳುತ್ತಾರೆ. ಈ ದ್ವಿತೀಯಾರ್ಧದಲ್ಲಿ ಖಡಕ್ ಆ್ಯಕ್ಷನ್ ಮೂಡುತ್ತೆ.
6. ಕೆಜಿಎಫ್​ ಎಂದರೆ ಅದು ಯಶ್​ ಮಾತ್ರವಲ್ಲ. ಯಶ್​ ಜೊತೆಗೆ ಸಾಗುವ ಪಾತ್ರಗಳು ಕೂಡ ಚಿತ್ರದ ಪ್ರಮುಖ ಪಾತ್ರಗಳು. ಅಂತಹ ಅನೇಕ ಪಾತ್ರಗಳಿರುವ ಸಿನಿಮಾ ಪ್ರತೀ ಪಾತ್ರದ ಪರಿಚಯವೂ ಇಂಟ್ರಸ್ಟಿಂಗ್ ಆಗಿದೆ.
7. ಕಥೆ ಸಾಗುತ್ತಿದ್ದಂತೆ ಅದರ ಮುಕ್ತಾಯ ಹೀಗೆ ಆಗಬಹುದು ಎಂದು ವೀಕ್ಷಕರು ಒಂದು ಅಂದಾಜಿಗೆ ಬರುತ್ತಾರೆ. ಆದರೆ, ಚಿತ್ರದ ಮುಕ್ತಾಯ ಪ್ರೇಕ್ಷಕನ ಕಲ್ಪನೆಗೆ ಮೀರಿದ್ದಾಗಿದೆ.


Also read: ಕೇಂದ್ರ ಸರ್ಕಾರ ಟ್ರಾಯ್‌ ಮೂಲಕ ಹೊಸ ನಿಯಮ ಜಾರಿ; ಟಿವಿ ವಿಕ್ಷಕರಿಗೆ ಬಾರಿ ದುಬಾರಿಯಾದ ಟಿವಿ ಚಾನೆಲ್-ಗಳು..

8. ಈಗಾಗಲೇ ಚಿತ್ರದ ಎರಡನೇ ಭಾಗ ಕೂಡ ಚಿತ್ರೀಕರಿಸಿದ್ದು, ಚಿತ್ರದ ಮುಕ್ತಾಯ ಎರಡನೇ ಭಾಗದ ಚಿತ್ರೀಕರಣ ಏನಿರಬಹುದು ಎಂದು ಸುಳಿವು ನೀಡುವ ಮೂಲಕ, ಮುಂದಿನ ಕಥೆಗೆ ಮುನ್ನುಡಿ ಬರೆಯುತ್ತಿದೆ. ಇದರಿಂದ ಕೆಜಿಎಫ್ ಚಾಪ್ಟರ್ 2 ಸುಳಿವು ಬರಲಿದೆ.
9. ಕೆಜಿಎಫ್​ ಎಂದರೆ 1951ರಲ್ಲಿ ಸಾಗುವ ಮುಂಬೈ ಹಾಗೂ ಕೆಜಿಎಫ್​ ಅಂಡರ್​ವರ್ಲ್ಡ್​ ಕಥೆ. ಈಗಾಗಲೇ ಕೋಲಾರ ರೌಡಿಗಳ ಬಂದಿರುವ ಕಥೆ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ಈ ಚಿತ್ರ ಕೇವಲ ಕೋಲಾರದ ಯಾವುದೇ ವ್ಯಕ್ತಿ ಕಥೆ ಅಲ್ಲ ಎಂದು ಕೂಡ ಸಿನಿಮಾ ತಂಡ ಹೇಳಿಕೊಂಡು ಬಂದಿದೆ. ಅದೇ ರೀತಿ ಚಿತ್ರ ನೋಡಿದಾಗ ನಮಗೆ ಅದು ಇಂದಿಗೂ ಪ್ರಸ್ತುತ ಇರುವ ಕಥೆ ಎಂಬುದು ಅರಿವಾಗುತ್ತದೆ.
10. ಈ ಸಿನಿಮಾದಲ್ಲಿ ಯಶ್​ ಅದ್ಭುತವಾಗಿ ಪಾತ್ರ ಮಾಡಿದ್ದಾರೆ. ಇದಕ್ಕೆ ಕಾರಣ ನಿರ್ದೇಶಕ ಪ್ರಶಾಂತ್​ ನೀಲ್.​ ಅವರ ಕಥೆ ಇಡೀ ಚಿತ್ರದ ಪ್ರಮುಖ ಹೈಲೈಟ್ಸ್​ ಆಗಿದೆ.
ಒಟ್ಟಾರೆಯಾಗಿ ಕೆಜಿಎಫ್ ಸಿನಿಮಾದ ಪ್ರತಿ ಕ್ಷಣ ರೋಚಕವಾಗಿದೆ. 155 ನಿಮಿಷಗಳು ಎಲ್ಲಿವೋ ಬೋರಿಂಗ್ ಇಲ್ಲ. ಕೆಜಿಎಫ್ ಚಾಪ್ಟರ್ 2 ಕೂಡ ಯಶಸ್ವಿಯಾಗುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿದು ಬಂದಿದೆ.