ಬಾಯಲ್ಲಿ ನೀರೂರಿಸುವ ಖಾರ ಮತ್ತು ಪುದಿನಾ ಮಂಡಕ್ಕಿ ಮಾಡುವ ವಿಧಾನ

0
1370

ಖಾರ ಮಂಡಕ್ಕಿ

ಬೇಕಾಗುವ ಸಾಮಗ್ರಿ:

 • ಮಂಡಕ್ಕಿ-5 ಲೀಟರ್,
 • ಅಚ್ಚಖಾರದ ಪುಡಿ-2 ಚಮಚ,
 • ಸಾಸಿವೆ-1 ಚಮಚ,
 • ಎಣ್ಣೆ-1/4 ಕಪ್,
 • ಕಡ್ಲೆಕಾಯಿಬೀಜ-100 ಗ್ರಾಂ,
 • ಹುರಿಗಡಲೆ-100 ಗ್ರಾಂ,
 • ಉಪ್ಪು-ರುಚಿಗೆ,
 • ಸಕ್ಕರೆ-1 ಚಮಚ,
 • ಅರಿಶಿನ-1/2 ಚಮಚ,
 • ಕರಿಬೇವು-1 ಕಂತೆ.

ಮಾಡುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಸಾಸಿವೆ, ಅರಿಶಿನ, ಕಡ್ಲೆಕಾಯಿಬೀಜ, ಹುರಿಗಡಲೆ, ಕರಿಬೇವು ಹಾಕಿ ಕೆಂಪಗೆ ಬಾಡಿಸಿ. ಅಚ್ಚಖಾರದ ಪುಡಿ, ಗರಿಯಿರುವ ಮಂಡಕ್ಕಿ, ಉಪ್ಪು ಸಕ್ಕರೆ ಹಾಕಿ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿದರೆ ರುಚಿರುಚಿಯಾದ, ಗರಿಗರಿಯಾದ ಖಾರಮಂಡಕ್ಕಿ ಕಾಫಿ ಜೊತೆ ಚಳಿಯಲ್ಲಿ ಸವಿಯಲು ರೆಡಿ. (ಕಡ್ಲಕಾಯಿಬೀಜವನ್ನು ಬೇರೆಯಾಗಿ ಎಣ್ಣೆಯಲ್ಲಿ ಹುರಿದು ಬೆರೆಸಿದರೆ ಗರಿಗರಿಯಾಗಿ ಇರುತ್ತದೆ).

ಪುದಿನಾ ಮಂಡಕ್ಕಿ

ಬೇಕಾಗುವ ಸಾಮಗ್ರಿ:

 • ಮಂಡಕ್ಕಿ-2 ಲೀಟರ್,
 • ಪುದಿನಾ-1 ಕಟ್ಟು
 • ಹಸಿಮೆಣಸಿನಕಾಯಿ-10,
 • ಉಪ್ಪು-ರುಚಿಗೆ,
 • ಬೆಳ್ಳುಳ್ಳಿ ಸುಲಿದಿದ್ದು-10,
 • ಸಾಸಿವೆ-1/2 ಚಮಚ,
 • ಕರಿಬೇವು-ಸ್ವಲ್ಪ,
 • ತುರಿದ ಕೊಬ್ಬರಿ-ಸ್ವಲ್ಪ,
 • ಕಡ್ಲಬೇಳೆ-1 ಚಮಚ,
 • ಉದ್ದಿನಬೇಳೆ-1 ಚಮಚ.

ಮಾಡುವ ವಿಧಾನ:
ಬಾಣಲೆಗೆ ಎಣ್ಣೆಹಾಕಿ, ಸಾಸಿವೆ ಸಿಡಿಸಿ ಕಡ್ಲೆಬೇಳೆ, ಉದ್ದಿನಬೇಳೆ ಕೆಂಪಗೆ ಹುರಿದು ಬೆಳ್ಳುಳ್ಳಿ, ಕರಿಬೇವು ಹಾಕಿ ಬಾಡಿಸಿ. ನಂತರ ಹಸಿಮೆಣಸಿನಕಾಯಿ, ಕೊಬ್ಬರಿತುರಿ, ಪುದಿನಾವನ್ನು ಮಿಕ್ಸಿಯಲ್ಲಿ ರುಬ್ಬಿ ಬೆರೆಸಿ ಉಪ್ಪು ಹಾಕಿ, ಮಂಡಕ್ಕಿ ನೀರಿನಲ್ಲಿ ನೆನಸಿ ನೀರನ್ನು ಹಿಂಡಿ ತೆಗೆದು ಹಾಕಿ ಚೆನ್ನಾಗಿ ಬಿಸಿ ಮಾಡಿ. ಬಿಸಿಯಾಗಿರುವಾಗಲೇ ತಿಂದರೆ ತುಂಬಾ ರುಚಿಯಾಗಿರುತ್ತದೆ.