ಸಿಎಂಗೆ ಸಾಂತ್ವನ ಹೇಳಿದ ಖುಷ್ಬೂ

0
855

ಬೆಂಗಳೂರು: ಪುತ್ರನನ್ನು ಕಳೆದುಕೊಂಡು ದುಃಖದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟಿ ಹಾಗೂ ಕಾಂಗ್ರೆಸ್ನ ವಕ್ತಾರೆ ಖುಷ್ಬೂ ಅವರು ಗುರುವಾರ ಸಾಂತ್ವನ ಹೇಳಿದರು.

ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಖುಷ್ಬೂ, ಸಿಎಂಗೆ ಸಮಾಧಾನ ಹೇಳಿದರು.

ಸಿಎಂ ಗೆ ಸಾಂತ್ವಾನ ಹೇಳಲು ಚನೈನಿಂದ ಬೆಂಗಳೂರಿಗೆ ಬಂದಿದ್ದೇನೆ. ‘ಸಿಎಂ ಪುತ್ರ ರಾಕೇಶ್ ಅಕಾಲಿಕವಾಗಿ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ. ಇದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ’  ಅವರ ಇಡಿ ಕುಟುಂಬಕ್ಕೆ ಇದು ಹೃದಯ ಒಡೆಯುವಂತಹ ಘಟನೆ ಎಂದು ಸಿಎಂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೇನೆ ಎಂದು ಖುಷ್ಬೂ ತಿಳಿಸಿದರು.