ಲಾರ್ಡ್ಸ್-ನ ಕಾರ್ಪೋರೇಟ್ ಕ್ರಿಕೆಟ್ ಡೇ ನಲ್ಲಿ ಕಿಚ್ಚನಿಗೆ ವಿಜಯ…!

0
433

ನಟ ಕಿಚ್ಚ ಸುದೀಪ್ ಲಂಡನ್‍ನಲ್ಲಿ ನಡೆದ ಕಾರ್ಪೋರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ ಹಾರಿಸಿದ್ದಾರೆ.

ಮತ್ತು ಲಾರ್ಡ್ಸ್-ನ ಮೈದಾನದಲ್ಲಿ ಉಡುಗೊರೆಯಾಗಿ ವಿಶ್ವದ ಸ್ಟಾರ್ ಕ್ರಿಕೆಟಿಗರ ಸಹಿ ಇರುವ ಬ್ಯಾಟ ಪಡೆದಿದ್ದಾರೆ.

ಸುದೀಪ್‍ಗೆ ಮೇ 11ರಂದು ಕ್ರಿಕೆಟ್ ಕಾಶಿ ಲಾಡ್ರ್ಸ್ ಮೈದಾನದಲ್ಲಿ ಕ್ರಿಕೆಟ್ ಆಡುವ ಅವಾಕಶ ಸಿಕ್ಕಿತ್ತು. ಸುದೀಪ್ ಈ ಟೂರ್ನಿಯಲ್ಲಿ ಭಾಗವಹಿಸುವುದು ಮಾತ್ರವಲ್ಲ ಅಂತಿಮ ಪಂದ್ಯದಲ್ಲಿ ವಿಜಯ ಸಾಧಿಸಿದ್ದಾರೆ.

 

ಮೈದಾನದಲ್ಲಿ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದಕ್ಕೆ, ಹಾಗೂ ಶ್ರೇಷ್ಠ ಆಟಗಾರರನ್ನ ಭೇಟಿ ಮಾಡಿದ ಕ್ಷಣಗಳ ಬಗ್ಗೆ ಸಂತಸ ಹಂಚಿಕೊಂಡಿರೋ ಕಿಚ್ಚ ತಮ್ಮ ಟ್ವಿಟರ್‍ನಲ್ಲಿ ಇದಕ್ಕೆ ಕಾರಣವಾಗಿರೋ ಎಲ್ಲರಿಗೂ ನನ್ನ ಧನ್ಯವಾದ ಎಂದು ಟ್ವಿಟ್ ಮಾಡಿದ್ದಾರೆ.