ಮೂತ್ರದ ಕಲ್ಲು(Kidney Stone)ಗೆ ಒಂದು ರಾಮಬಾಣ…..

0
13352

ನಾನು ಶ್ರೀನಿವಾಸ್ ಗೌಡ 36ವರ್ಷ,ವೃತ್ತಿಯಲ್ಲಿ ವಾಹನಚಾಲಕನಾಗಿದ್ದು ನನಗೆ ಹಲವಾರು ಬಾರಿ ಕಿಡ್ನಿ ಸ್ಟೋನಿನ ಬಾಧೆಯಿಂದ ತೊಂದರೆಗೊಳಪಟ್ಟಿದ್ದೇನೆ.ಇದಕ್ಕೆ ಸಂಬಂಧ ಪಟ್ಟಂತೆ ಮಂಗಳೂರಿನ ಖ್ಯಾತ ಆಸ್ಪತ್ರೆಗಳಲ್ಲಿ 5ಬಾರಿ ಬೇರೆ ಬೇರೆ ರೀತಿಯ ಶಸ್ತ್ರಚಿಕಿತ್ಸೆ,ಲೇಸರ್ ಚಿಕಿತ್ಸೆಗೆ ಒಳಪಟ್ಟು ಕೂಡಾ ನನಗೆ ವರ್ಷಕ್ಕೊಮ್ಮೆಯಾದರೂ ಕಿಡ್ನಿಸ್ಟೋನಿನ ತೊಂದರೆ ಮರುಕಳಿಸುತ್ತಿತ್ತು.

ಮೂರು ವರ್ಷಗಳ ಹಿಂದೆ ಅಂದರೆ 2013 ನೇ ವರ್ಷದ ಆಗಸ್ಟ್ ತಿಂಗಳಲ್ಲಿ ಪುನಃ ವಾಂತಿ,ವಿಪರೀತ ಸೊಂಟ ನೋವುಗಳು ಬಂದು ಪುತ್ತೂರಿನ ಅಪೋಲೋ ಸ್ಕ್ಯಾನ್ ಸೆಂಟರ್ನಲ್ಲಿ ಸ್ಕ್ಯಾನ್ ಮಾಡಿಸಿದಾಗ ನನಗಾದ ಆಘಾತ ಅಷ್ಟಿಷ್ಟಲ್ಲ. ಕಾರಣ ನಾನು ಎಣಿಸಲಾರದಷ್ಟು ದೊಡ್ಡ ಕಿಡ್ನಿ ಸ್ಟೋನ್ ಅಂದರೆ 45mmನದ್ದು,4mmನದ್ದು- ಎರಡು, 8mmನದ್ದು ಮತ್ತು 16mmನದ್ದು ಒಟ್ಟು 5 ಕಿಡ್ನಿ ಸ್ಟೋನ್ ಗಳು ನನ್ನನ್ನು ಬಾಧಿಸುತ್ತಿತ್ತು.

ಸ್ಕ್ಯಾನಿಂಗ್ ಮಾಡಿಸಿ ಹೊರಗಡೆ ಬಂದಾಗ ನಮ್ಮ ದೂರದ ಸಂಬಂಧಿ ಕೃಷ್ಣಪ್ಪಗೌಡರು ಎದುರಾದರು, ಮತ್ತು ನನ್ನನ್ನು ನೋಡಿಯೇ ಏನಾಗಿದೆ ಎಂದು ಕಾಳಜಿಯಿಂದ ವಿಚಾರಿಸಿದರು. ನನಗೆದುರಾದ ತೊಂದರೆಯನ್ನ ಹೇಳಿದಾಗ,ಅವರು ಹೇಳಿದ್ದು ನಿಜವಾಗಿಯೂ ವೇದವಾಕ್ಯ.

ಅದುವೇ ಇರ್ದೆ ಗ್ರಾಮದ “ದರ್ಭೆ ಸುಬ್ರಹ್ಮಣ್ಯ ಭಟ್ಟರ” ಔಷಧಿಯ ವಿಚಾರ.

ಗೌಡ್ರ ಹೇಳಿಕೆಯ ಪ್ರಕಾರ ಇರ್ದೆಯ ದರ್ಭೆ ಸುಬ್ರಹ್ಮಣ್ಯ ಭಟ್ಟರಲ್ಲಿಗೆ ಹೋಗಿ ವಿಚಾರಿಸಿದಾಗ ಅವರು, ಈಗ ನನ್ನ ಮಗ ಶಶಿಶೇಖರ ಭಟ್ರು ಚಿಕಿತ್ಸೆ ನೀಡುವುದು,ಇರ್ದೆ ಹಾಲಿನ ಡೈರಿಯ ಪಕ್ಕದಲ್ಲಿರುವ ಫಾರ್ಮಸಿಯಲ್ಲಿ,ಅಲ್ಲಿಗೆ ಹೋಗಿ ಔಷಧಿ ತೆಗೆದುಕೊಳ್ಳಲು ತಿಳಿಸಿದರು.

ಭಟ್ರ ಫಾರ್ಮಸಿಗೆ ಹೋಗಿ ಭಟ್ಟರ ಮಗನಿಂದ ಕಿಡ್ನಿಸ್ಟೋನಿನ ಔಷದಿ ಮತ್ತು ಅದಕ್ಕೆ ಸಂಬಂಧಪಟ್ಟಂತಹ ಉಪಚಾರಗಳ ವಿಚಾರವನ್ನು ತಿಳಿದುಕೊಂಡು,ಅವರ ನಿರ್ದೇಶನದಂತೆ, ಔಷಧವನ್ನು ನಿಯಮಿತವಾಗಿ ಸೇವಿಸುತ್ತಾ ಬಂದೆ.ಕೇವಲ 6ದಿನಗಳಲ್ಲಿ ನನಗಿದ್ದ ನೋವು ಇಲ್ಲದಾಯಿತು. ಭಟ್ರ ನಿರ್ದೇಶನದಂತೆ ನಿರಂತರ 4ತಿಂಗಳು ಔಷಧ ಸೇವಿಸಿ ಪುನಃ ಡಿಸೆಂಬರ್ 2013ರಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಆಶ್ಚರ್ಯಕರವಾಗಿ ನನ್ನ ಕಿಡ್ನಿಯಲ್ಲಿದ್ದ ಕಲ್ಲುಗಳು ಚೂರುಚೂರಾಗಿ ಕೇವಲ 5mm ನಿಂದ13mm ಗಾತ್ರಕ್ಕೆ ಬಂದಿದ್ದವು.

ಈ ರಿಪೋರ್ಟನ್ನು ಪುನಃ ಭಟ್ಟರಿಗೆ ತೋರಿಸಿದಾಗ,ಭಟ್ರು ಇನ್ನು ಎರಡುವರೆ ತಿಂಗಳ ಮಾತ್ರೆ(tablet)ಸಾಕು ಕೊನೆಗೆ ಸ್ಕ್ಯಾನಿಂಗ್ ಮಾಡಿಸಿ ನೋಡಿ ಎಂದರು.

ಹಾಗೆಯೇ ಎರಡುವರೆ ತಿಂಗಳ ನಂತರ ಸ್ಕ್ಯಾನಿಂಗ್ ಮಾಡಿಸಿದಾಗ ನನ್ನ ಕಿಡ್ನಿಯಲ್ಲಿ ಒಂದೇ ಒಂದು ಸ್ಟೋನಿನ ಕುರುಹುಗಳು ಇರಲಿಲ್ಲ.

ಆ ನಂತರ ಇಂದಿನವರೆಗೂ ಸುಮಾರು ಎರಡೂವರೆ ವರ್ಷಗಳಿಂದ ನನಗೆ ಕಿಡ್ನಿಸ್ಟೋನ್ ಪುನಃ ಬಂದಿಲ್ಲ.
ಈ ಔಷಧದ ವಿಚಾರವನ್ನು ನಾನು ನನ್ನ ತುಂಬಾ ಸ್ನೇಹಿತರಲ್ಲಿ,ಸಂಬಂಧಿಗಳಲ್ಲಿ ಹಂಚಿಕೊಂಡಿದ್ದೇನೆ ಮತ್ತು ತುಂಬಾ ಜನರನ್ನು ಇರ್ದೆಯ ಭಟ್ಟರಲ್ಲಿಗೆ ಕಳುಹಿಸಿದ್ದೇನೆ.ಅಂತಹ ಎಲ್ಲಾ ಜನರಿಗೂ ಭಟ್ಟರ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಕಿಡ್ನಿಸ್ಟೋನಿಂದಾಗಿ ಬರುವ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.ಆದ್ದರಿಂದ ಈ ವಿಚಾರವನ್ನು ಎಲ್ಲರಿಗೂ ಅನುಕೂಲವಾಗಲಿ ಎಂದು ಇಲ್ಲಿ ಬರೆಯುತ್ತಿದ್ದೇನೆ ಮತ್ತು ನನ್ನ ಸ್ಕ್ಯಾನಿಂಗ್ ರಿಪೋರ್ಟನ್ನು ಹಾಕಿದ್ದೇನೆ.ದಯವಿಟ್ಟು ನಿಮ್ಮ Fb ಮತ್ತು Watsapp ಗಳಲ್ಲಿ ಶೇರ್ ಮಾಡಿ.

***

ಪುತ್ತೂರಿನಿಂದ ಪಾಣಾಜೆ ಬಸ್ಸಿನಲ್ಲಿ ಸುಮಾರು 12 km, ಇರ್ದೆ ಹಾಲಿನ ಡೈರಿ ಬಸ್ ಸ್ಟಾಪ್ ನಲ್ಲಿ ಇಳಿದರೆ ಭಟ್ಟರ ಫಾರ್ಮಸಿ ಸಿಗುತ್ತದೆ.