ಸ್ಮಾರ್ಟ್ ಫೋನ್ ಗಾಗಿ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಕತ್ತುಸೀಳಿ ಕಗ್ಗೊಲೆ

0
904

ಸ್ಮಾರ್ಟ್ ಫೋನ್ ಡೆಲಿವರಿ ಮಾಡಲು ಜಿಮ್ ಗೆ ತೆರಳಿದ್ದ ಫ್ಲಿಪ್ ಕಾರ್ಟ್ ಸಂಸ್ಥೆಯ ಡೆಲಿವರಿ ಬಾಯ್ ನನ್ನು ಕತ್ತು ಸೀಳಿ ಕೊಂದ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಜರುಗಿದೆ.

ಡಿಸೆಂಬರ್ ೯ ರಂದು ಸ್ಮಾರ್ಟ್ ಫೋನ್ ಗೆ ಆರ್ಡರ್ ಮಾಡಿದ್ದ ಜಿಮ್ ತರಬೇತುದಾರನಿಗೆ ತಲುಪಿಸಲು ೨೯ ವರ್ಷದ ನಂಜುಂಡಸ್ವಾಮಿ ತೆರಳಿದ್ದರು. ಆದರೆ ಸ್ಮಾರ್ಟ್ ಫೋನ್ ಗೆ ಹತಾಶಗೊಂಡಿದ್ದ ತರಬೇತುದಾರ ಚಾಕು ಹಿಡಿದು ಕಾಯುತ್ತಿದ್ದ.

ಡೆಲಿವರಿ ಬಾಯ್ ನ ಕತ್ತುಸೀಳಿ ಜಿಮ್ ಗೆ ಹೊಂದಿಕೊಂ ಡಿದ್ದ ಲಿಫ್ಟ್ ನಲ್ಲಿ ಶವವನ್ನು ಇರಿಸಿ ಹೋಗಿದ್ದ. ಈ ಸಂಬಂಧ ಪೊಲೀಸರು ೨೧ ವರ್ಷದ ತರಬೇತುದಾರ ಅರುಣ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

ಅರುಣ್ ಕುಮಾರ್ ಬಳಿ ಸ್ಮಾರ್ಟ್ ಫೋನ್ ಖರೀಸಲು ದುಡ್ಡು ಇರಲಿಲ್ಲ. ಸ್ಮಾರ್ಟ್ ಫೋನ್ ಕೊಡಿಸುವಂತೆ ತಂದೆ ಬಳಿ ಅಲವತ್ತುಗೊಂಡರೂ ತಂದೆ ಸಂಪಾದಿಸಿ ನೀನೆ ಖರೀದಿಸಿಕೊ ಎಂದಿದ್ದಾರೆ.

ಇತ್ತೀಚೆಗಷ್ಟೇ ಜಿಮ್ ಗೆ ಸೇರ್ಪಡೆಗೊಂಡಿದ್ದ ಅರುಣ್ ಕುಮಾರ್, ಹೇಗಾದರೂ ಮಾಡಿ ಸ್ಮಾರ್ಟ್ ಫೋನ್ ಪಡೆಯುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾನೆ. ಡೆಲಿವರಿ ಬಾಯ್ ನನ್ನು ಕೊಂದು ಆತನ ಬಳಿ ಇದ್ದ ೧೨,೦೦೦ ರೂ. ಮತ್ತು ಎಲ್ಲಾ ಸ್ಮಾರ್ಟ್ ಫೋನ್ ಗಳನ್ನು ಎತ್ತುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್ ಲೈನ್ ನಲ್ಲಿ ಸ್ಮಾರ್ಟ್ ಫೋನ್ ಬುಕ್ ಮಾಡಿದ್ದ ಅರುಣ್ ಕುಮಾರ್, ನಂಜುಂಡಸ್ವಾಮಿ ಆಗುತ್ತಿದ್ದಂತೆ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ನಂಜುಂಡಸ್ವಾಮಿಯನ್ನು ಲಿಫ್ಟ್ ಒಳಗೆ ಎಳೆದು ಹಾಕಿ ಕತ್ತು ಸೀಳಿ ಕೊಲೆಗೈದಿದ್ದಾನೆ.

ಎರಡು ದಿನಗಳಿಂದ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ದೂರು ನೀಡಿದ್ದರು. ಕೊನೆಯ ಡೆಲಿವರಿ ಮಾಡಿದ ಜಾಗಕ್ಕೆ ಭೇಟಿ ನೀಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಕೊಲೆಯ ನಂತರ ಅರುಣ್ ಕುಮಾರ್ ಜಿಮ್ ತೆರೆದಿರಲಿಲ್ಲ. ಹಾಗಾಗಿ ಪೊಲೀಸರಿಗೆ ಸುಲಭವಾಗಿ ಸುಳಿವು ಸಿಕ್ಕಿತು.