ಬಹು ಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ನಿಧಾನ!!

0
680

ಬಹುಕೋಟಿ ನಕಲಿ ಛಾಪಾ ಕಾಗದದ ಹಗರಣದ ಆರೋಪಿ ಕರೀಮ್​ ಲಾಲ್​ ತೆಲಗಿ, ಗುರುವಾರ (ಅ.26) ಮಧ್ಯಾಹ್ನ 4 ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಲಗಿ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.  ಇನ್ನು ಕರೀಮ್​ ಲಾಲ್​ ತೆಲಗಿ ಸಾವನ್ನಪ್ಪಿರುವ ಬಗ್ಗೆ ಆತನ ಅಳಿಯ ಸ್ಪಷ್ಟನೇ ನೀಡಿದ್ದಾನೆ.

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ, ವಾಂತಿ, ಭೇದಿ‌ ನಿಲ್ಲದೇ ಇದ್ದಾಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಮರ್ಜೆನ್ಸಿ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ತೆಲಗಿಯನ್ನು ಅಕ್ಟೋಬರ್ 16ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ  ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು..ಸೋಮವಾರ ರಾತ್ರಿ 8 ಗಂಟೆಯಿಂದ ತೆಲಗಿ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆ ತೆಲಗಿ ಕುಟುಂಬಸ್ಥರು ಆಸ್ಪತ್ರೆಯಲ್ಲೆ ಮೊಕ್ಕಂ ಹೂಡಿದ್ದರು.

ಕರೀಮ್​ ಲಾಲ್​ ತೆಲಗಿರ ಬಹುಕೋಟಿ ಹಗರಣ, 2001ರಲ್ಲಿ ಬೆಳಕಿಗೆ ಬಂದಿತ್ತು. 2004ರಲ್ಲಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ನೀಡಿತ್ತು. ಇನ್ನು ಈ ಬಗ್ಗೆ ಸಿಬಿಐ ವಿಶೇಷ ನ್ಯಾಯಾಲಯ, 30 ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಅಲ್ಲದೆ ತೆಲಗಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಕಳೆದ 16 ವರ್ಷಗಳಿಂದ ಕರೀಮ್​ ಲಾಲ್​ ತೆಲಗಿ ಪರಪ್ಪನ್​​ ಅಗ್ರಹಾರ ಜೈಲಿನಲ್ಲಿದ್ದರು. ಇವನ ಸಹಚರರ ವಿರುದ್ಧ ದೆಹಲಿ, ಅಹಮದಾಬಾದ್, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಇನ್ನೂ ವಿಚಾರಣೆಯ ಹಂತದಲ್ಲಿವೆ.