ವಿಡಿಯೋ: ೧೨ ಅಡಿ ಕಾಳಿಂಗ ಸರ್ಪಕ್ಕೆ ಬಾಟಲಿಯಿಂದ ನೀರು ಕುಡಿಸಿದರು!!!

0
519

ಕಾಳಿಂಗ ಸರ್ಪ ಪ್ರಪಂಚದಲ್ಲೇ ಅತ್ಯಂತ ವಿಷಕಾರಿ ಹಾವು, ಸಾಮಾನ್ಯವಾಗಿ ಮನುಷ್ಯರಿಂದ ಇದು ದೂರ ಇರುತ್ತದೆ. ಆದರೆ ಇತ್ತೀಚಿಗೆ ೧೨ ಅಡಿ ಉದ್ದದ ಕಾಳಿಂಗ ಸರ್ಪ ಬಿಸಿಲಿನ ಬೇಗೆಯಿಂದ ದಾಹವಾಗಿ ನೀರಿನ ಹುಡುಕಾಟದ ಮೇರೆಗೆ ಕರ್ನಾಟಕದ ಕೈಗಾ ಹಳ್ಳಿಗೆ ಬಂದಿತ್ತು.

ಈ ವಿಡಿಯೋನಲ್ಲಿ ನೀವು ನೋಡುವ ಹಾಗೆ ಒಬ್ಬ ಅರಣ್ಯ ಸೇವಾ ಸಿಬ್ಬಂದಿ ಕಾಳಿಂಗ ಸರ್ಪಕ್ಕೆ ಬಾಟಲಿಯಿಂದ ನೀರು ಕುಡಿಸುತ್ತಿದ್ದಾರೆ. ಸರ್ಪವು ಜಿಗಿಯದಂತೆ ತಡೆಯಲು ಒಂದು ಕಡೆ ಕಾಳಿಂಗ ಸರ್ಪದ ಬಾಲವನ್ನು ಹಿಡಿದಿದ್ದಾರೆ. ನೀರು ಕುಡಿಸುತ್ತಿರುವವರು ಕೂಡ ಹಾವು ಹಿಡಿಯುವಲ್ಲಿ ಪರಿಣಿತರಾಗಿದ್ದರೆ, ಬಿಸಿಲಿನ ಬೇಗೆಯಿಂದ ಸರ್ಪವನ್ನು ತಪ್ಪಿಸಲು ಮೊದಲು ಹಾವಿನ ಹೆಡೆಗೆ ನೀರು ಹಾಕುತ್ತಿದ್ದಾರೆ.

ಬಿಸಿಲಿನ ಬೇಗೆ ಕರ್ನಾಟಕದೆಲ್ಲೆಡೆ ಹರಡಿದ್ದು, ಮನುಷ್ಯರು ಮಾತ್ರವಲ್ಲದೆ ಕಾಡಿನ ಪ್ರಾಣಿ ಪಕ್ಷಿಗಳು ಕೂಡ ಬರದಿಂದ ಅತೀವ ಸಂಕಷ್ಟಕ್ಕೆ ಒಳಗಾಗಿವೆ. ವರುಣ ದೈವ ಬೇಗ ಕೃಪೆ ತೋರಿ ಮಳೆ ಬಂದರೆ ಮಾತ್ರ ಈ ಸಂಕಷ್ಟದಿಂದ ಪರಿಹಾರ ಸಾಧ್ಯ..