ಕಿರಿಕ್ ಕೀರ್ತಿ ಸಿನಿಮಾ ರಂಗಕ್ಕೆ ಲಗ್ಗೆ…

0
625

ಸಾಮಾಜಿಕ ಜಾಲತಾನಗಳಲ್ಲಿ ಸದಾ ಕಾಲ ಸಕ್ರೀಯರಾಗಿದ್ದು, ಕನ್ನಡಪರ ಹೋರಾಟವನ್ನು ಮಾಡುತ್ತಿದ್ದ ಕಿರಿಕ್ ಕೀರ್ತಿ ಈಗ ಸಿನಿಮಾ ರಂಗಕ್ಕೆ ಪ್ರವೇಶಿದುತ್ತಿದ್ದಾರೆ, ಕಿರಿಕ್ ಕೀರ್ತೀ ಸಿನಿಮಾದ ನಾಯಕ ನಟನಾಗಿ ಸಿನಿಮಾ ಪ್ರಯಾಣ ಪ್ರಾಂಬಿಸಿದ್ದಾರೆ.

ಪತ್ರಕರ್ತನಾಗಿ ಮತ್ತು ಕನ್ನಡದ ಬಗ್ಗೆ ಕಾಳಜಿ ತೊರುತ್ತ ಮತ್ತು ಕನ್ನಡಪರ ಹೋರಾಟವನ್ನು ಸಾಮಾಜಿಕ ಜಾಲತಾಣದಲ್ಲಿ ಯಲ್ಲಾರ ಗಮನ ಸೆಳೆದಿರುವ ಕೀರ್ತಿ ಕನ್ನಡ ಬಿಗ್ ಬಾಸ್ ಷೋ ಸೀಸನ್ 4ನ ರನ್ನರಫ್ ಆಗಿ ಜನರ ಮನ ಗೆದ್ದಿರುವ ಕೀರ್ತಿ ಈಗ ಹೊಸ ಸಿನಿಮಾ ಹೊಂದಕ್ಕೆ ನಾಯಕನಾಗಿ ಬಣ್ಣ ಹಚ್ಚುತಿದ್ದಾರೆ.

ಕೀರ್ತಿ ಅವರ ಮೊದಲ ಸಿನಿಮಾಕ್ಕೆ ಕಿರಿಕ್ ಕೀರ್ತಿ ಎಂದೇ ಹೆಸರನ್ನು ಇಡಲಾಗಿದ್ದು, ಸುಧೀಂದ್ರ ಅವರು ನಿರ್ಮಾಪಕಾಗಿದ್ದು, ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಡೈರೆಕ್ಟರ್ ಆಗಿ ವರ್ಕ್ ಮಾಡಲಿದ್ದಾರೆ.

ಕೀರ್ತಿ ಯವರು ಸಿನಿಮಾಕ್ಕೆ ತಮ್ಮ ಹೆಸರನ್ನು ಇಟ್ಟಿದ್ದಾರೆ ಈ ಸಿನಿಮಾದಲ್ಲಿ ಕೀರ್ತಿ ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ರೋಮ್ಯಾಂಟಿಕ್ ಮತ್ತು ಕಾಮಿಡಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ನಾಯಕಿ ಇನ್ನು ಅಯ್ಕೆಯಲ್ಲಿದ್ದಾರೆ. ಈ ಸಿನಿಮಾ ಶೂಟಿಂಗ್ ಮಾರ್ಚ್ ನಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.