ದೇಶದ ರೈತರು ಮೋದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ, ಲಕ್ಷಾಂತರ ರೈತರು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ, ಯಾಕೆ ಗೊತ್ತಾ?

0
1331

ರೈತರಿಗೆ ಇಲ್ಲಸಲ್ಲದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದ ವಿರುದ್ದ ದೆಹಲಿಯಲ್ಲಿ ಅಖಿಲ ಭಾರತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ 200 ಕ್ಕೂ ‌ಹೆಚ್ಚು ರೈತ ಸಂಘಟನೆಗಳ, ಸುಮಾರು ಸುಮಾರು ಒಂದು ಲಕ್ಷ ರೈತರು ಒಂದುಗೂಡಿ ಅರೆ ಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ಒತ್ತಾಯಿಸಿ ಇಬ್ಬರು ಸಂಸದರು ಖಾಸಗಿ ವಿಧೇಯಕ ಮಂಡಿಸಿದ್ದಾರೆ. ಅದನ್ನು ಚರ್ಚೆ ಮಾಡಲು ಕೇಂದ್ರ ಸರ್ಕಾರಕ್ಕೆ ಪುರುಸೊತ್ತು ಸಿಕ್ಕಿಲ್ಲ.‌ ಇದೆಲ್ಲದರ ಪರಿಣಾಮ ರೈತರೇ ರೊಚ್ಚಿಗೆದ್ದಿದ್ದಾರೆ. ಬೀದಿಗಿಳಿದಿದ್ದಾರೆ. ಇದಕೆಲ್ಲ ಕಾರಣ ಕಳೆದ 15 ವರ್ಷಗಳಿಂದ 3 ಲಕ್ಷಕ್ಕೂ ಹೆಚ್ಚು ಮಂದಿ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2016ರಿಂದ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ವಿವರಗಳನ್ನೇ ಬಯಲು ಮಾಡದೆ ಮತ್ತೊಂದು ಘನಘೋರ ಷೋಷಣೆಗೆ ಮುನ್ನುಡಿ ಬರೆದಿದೆ ಎಂದು ಪ್ರತಿಭಟನೆಯ ಮುಖಂಡರು ತಿಳಿಸಿದ್ದಾರೆ.

ಬೆತ್ತಲೆ ಪ್ರತಿಭಟನೆ:

ಮಾತಿನಮಲ್ಲ ಮೋಡಿಗಾರ, ದಪ್ಪ ಚರ್ಮದ ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸಲೇಬೇಕೆಂದು ತಮಿಳುನಾಡು ರೈತರು ಜಾಥಾದ ಉದ್ದಕ್ಕೂ ಅರಬೆತ್ತಲೆ ಮೆರವಣಿಗೆ ನಡೆಸಿದರು. ಸಂಸತ್ ಮಾರ್ಗದ ಮುಂಭಾಗ ಸಂಪೂರ್ಣ ಬೆತ್ತಲಾಗಿ ಪ್ರತಿಭಟಿಸಿದರು.

ರೈತರ ಬೇಡಿಕೆಗಳೇನು.?

1) ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು 21ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆಯಬೇಕು
2) ನವೆಂಬರ್ 2017ರಲ್ಲಿ ನಡೆದ ಕಿಸಾನ್ ಸಂಸದ್ ನಲ್ಲಿ ಸಿದ್ದಪಡಿಸಲಾದ ರೈತರ ಋಣಭಾರ ಮುಕ್ತ ಸ್ವಾತಂತ್ರ್ಯ ಮಸೂದೆ-2018, ರೈತರ ಕೃಷಿ ಸರಕುಗಳಿಗೆ ಕನಿಷ್ಠ ಬೆಂಬಲ ಬೆಲೆ ಸ್ವಾತಂತ್ರ್ಯ ಮಸೂದೆ-2018 ಜಾರಿಯಾಗಬೇಕು.
3) ಮಸೂದೆ ಮೂಲಕ, ಸಾಲ, ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು.
4) ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕು.
ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ:

ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಈಗ ಉಲ್ಟಾ ಹೊಡೆದಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿ ಸಾಧ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ ಎಂದು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ದ್ವನಿಗೂಡಿಸಿದ ಸಿಎಂ ಕೇಜ್ರಿವಾಲ್ ಮಾತನಾಡಿ ಸರ್ಕಾರ ಐದು ತಿಂಗಳು ಮಾತ್ರ ಉಳಿದಿದ್ದು, ಅಷ್ಟರೊಳಗೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದಿದ್ದರೆ 2019ರ ಚುನಾವಣೆಯಲ್ಲಿ ಕೇಂದ್ರಕ್ಕೆ ರೈತರೇ ಪಾಠ ಕಲಿಸಲಿದ್ದಾರೆ. ಎಂದು ಕೇಜ್ರಿವಾಲ್ ಎಚ್ಚರಿಕೆ ನೀಡಿ ಉದ್ಯಮಿಗಳಿಗೆ ತೋರುತ್ತಿರುವುದರಲ್ಲಿ ಶೇ. 10ರಷ್ಟು ಕಾಳಜಿಯನ್ನು ರೈತರಿಗೆ ನೀಡಿದಿದ್ದರೆ ಈ ಅನ್ನದಾತರು ಬೀದಿಗೆ ಬಂದು ಹೋರಾಡುವ ಅಗತ್ಯವಿರಲಿಲ್ಲ ಎಂದು ಆಪ್ ಮುಖ್ಯಸ್ಥರು ಗುಡುಗಿದರು. ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಗೆ ಭಾರೀ ಬೆಂಬ‌ಲ ವ್ಯಕ್ತವಾಯಿತು. ಹಾಗೆಯೇ ವಕೀಲರು, ವೈದ್ಯರು, ವಿದ್ಯಾರ್ಥಿಗಳು, ಪತ್ರಕರ್ತರು, ಕಲಾವಿದರು, ಸಾಮಾಜಿಕ ಹೋರಾಟಗಾರರು ಭಾಗವಹಿಸಿ ಬೆಂಬಲ ಸೂಚಿಸಿದರು.