ಪ್ರಕಾಶ್ ರೈ -ಕಿಶೋರ್ ಕುಮಾರ್ ಹುಲಿರವರ ಮಾತುಗಳಲ್ಲಿ

0
1232

ಕನ್ನಡದ ಹೆಮ್ಮೆಯ ನಟ, ರಾಷ್ಟ್ರ ಪ್ರಶಸ್ತಿ ವಿಜೇತ, ಜಾತಿ, ಧರ್ಮ, ಭಾಷೆಗಳ ಮೀರಿ, ರಾಜ್ಯಗಳ ನಡುವೆ ಹಾರ್ದಿಕ ಸಂಬಂಧಗಳ ಸೇತುವಾದ ಪ್ರಕಾಶ್ ರೖರವರನ್ನು ನಾವು ನಡೆಸಿಕೊಂಡ ಬಗೆ ಅವಮಾನಕರ. ರೖತರ ಬೇರಾವ ಸಮಸ್ಯೆಗೂ ಪರಿಹಾರ ಹುಡುಕದ ನಮಗಿಂತ ಬಹಳ ಚೆನ್ನಾಗೇ ರೖತರ ಸಮಸ್ಯೆಗಳ ಬಗ್ಗೆ ಅರಿವು ಸ್ವತಃ ಭೂಮಿಗಿಳಿದು ದುಡಿವ ರೖತರಾದ ಪ್ರಕಾಶ್ ರೖರವರಿಗೆ ಇದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನರಿತು ಕದಡಿದ ಪರಿಸ್ಥಿತಿಯ ದುರುಪಯೋಗ ಮಾಡಲಿಚ್ಛಿಸದ ರೖರವರ ಅಪರೂಪದ ನಿಲುವು ಶ್ಲಾಘನೀಯ.

14485056_10209292056492527_149160280589770058_n

ಲಾಭ ನಷ್ಟಗಳ ಗಣನೆಗೆ ತೆಗೆದು ಕೊಳ್ಳದೇ ಕನ್ನಡಕ್ಕೆ ಸದಭಿರುಚಿಯ ಚಲನಚಿತ್ರಗಳನ್ನು ಬಿಡದೇ ನಿರ್ಮಿಸುತ್ತಿರುವ ರೖರವರ ಸಿನಿಮಾಗಳನ್ನು ಅಗೌರವದಿಂದ ಕಾಣುವ ಯಾವುದೇ ನೖತಿಕ ಹಕ್ಕು ನಮಗಿಲ್ಲ.

ಇನ್ನು ಅವರ ಸಾಮಾಜಿಕ ಬದ್ಧತೆಯ ಬಗ್ಗೆ ತಿಳಿಯಬೇಕೆಂದರೆ ಬಂಡೀಪುರದ ಕಾಡು, ಹುಲಿಗಳು, ಆನೆಗಳು, ಆದಿವಾಸಿಗಳನ್ನು ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಕಾಪಾಡಿ ಸ್ವಂತ ಖರ್ಚಿನಲ್ಲಿ ಮಾಡುತ್ತಿರುವ ಕೆಲಸವನ್ನೊಮ್ಮೆ ನೋಡಿಬರಬೇಕು. ಅವರು ಮಣ್ಣಿಗಿಳಿದು ಕೆಲಸ ಮಾಡುವುದ ನೋಡಿ ಬರಬೇಕು.

ಕಿಶೋರ್ ಅವರ FB ಸ್ಟೇಟಸ್