ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮದುವೆ ಸಿಡಿ ನನ್ನ ಬಳಿ ಇದೆ; ಪದ್ಮನಾಭ ಪ್ರಸನ್ನಕುಮಾರ, ಇದು ಬರೀ ಪ್ರಚಾರಕ್ಕೋಸ್ಕರ ಮಾಡುತ್ತಿರುವ ಆರೋಪಾನಾ?

0
541

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಕೇರಳದ ಭಗವತಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಅದರ ಸಿ.ಡಿ ನನ್ನ ಬಳಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಭದ್ರತೆ ನೀಡಿದರೆ ಅದನ್ನು ಬಿಡುಗಡೆ ಮಾಡುವೆ’ ಎಂದು ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಬಾಗಲಕೋಟೆಯಲ್ಲಿ ಹೇಳಿದ್ದಾರೆ.


ಅಲ್ಲದೇ ಈ ಹಿಂದೆ ಸಿ.ಡಿ ಬಿಡುಗಡೆ ಮಾಡಲು ಮುಂದಾಗಿದ್ದೆ. ಆಗ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆಗಿನಿಂದಲೂ ಶೋಭಾ ಅವರಿಂದ ನನಗೆ ಜೀವಭಯವಿದೆ. ಹೆದರಿಕೆಯಿಂದ ಕಳ್ಳನಂತೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ಕಾರಿನಿಂದ ಕೆಳಗೆ ಇಳಿದರೆ ಯಾರಾದರೂ ತೊಂದರೆ ಮಾಡಿಯಾರು ಎಂಬ ಆತಂಕ ಕಾಡುತ್ತದೆ. ನನಗೆ ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಕುಟುಂಬದ ಗತಿ ಏನು ಎಂದು ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡ ಪದ್ಮನಾಭ ಕಣ್ಣೀರಿಟ್ಟರು.

ಜೀವ ಭಯದಿಂದ ಕಳ್ಳನಂತೆ ತಲೆತಪ್ಪಿಸಿಕೊಂಡು ಓಡಾಡಬೇಕಿದೆ. ಕಾರಿನಿಂದ ಕೆಳಗೆ ಇಳಿದರೆ ಯಾರಾದರೂ ತೊಂದರೆ ಮಾಡಿಯಾರು ಎಂಬ ಆತಂಕ ಎದುರಿಸುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿಪತ್ರ ಸಲ್ಲಿಸಿ ಭದ್ರತೆ ಸಲ್ಲಿಸುವಂತೆ ಕೋರಿದ್ದೇನೆ. ಆದರೆ ಯಾವುದೇ ಉಪಯೋಗವಿಲ್ಲ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು.

ಇನ್ನು ಯಡಿಯೂರಪ್ಪ ಕೆಜೆಪಿಯಲ್ಲಿಯೇ ಇದ್ದರೆ ಈ ಬಾರಿ ಅಧಿಕಾರಕ್ಕೆ ಬರುತ್ತಿತ್ತು. ಪಕ್ಷದ ದುಸ್ಥಿತಿ ಹಾಗೂ ಯಡಿಯೂರಪ್ಪ ಹಾಳಾಗಲು ಶೋಭಾ ಕರಂದ್ಲಾಜೆ ಅವರೇ ಕಾರಣ ಎಂದು ಆರೋಪಿಸಿದ ಪದ್ಮನಾಭ ಪ್ರಸನ್ನ, ಯಡಿಯೂರಪ್ಪ ಮೂಲತಃ ಒಳ್ಳೆಯ ಮನುಷ್ಯ. ಕರಂದ್ಲಾಜೆಯೇ ಅವರನ್ನು ನಾಶ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.