ಆರೋಗ್ಯಯುತ ಭಾರತಕ್ಕೆ ಮೋದಿ ಗಿಫ್ಟ್ ಮೊಣಕಾಲು ಆಪರೇಷನ್ ಗೆ ದರ ನಿಗದಿ ನಿಯಮ ಉಲ್ಲಂಘನೆ ಆದರೆ ದಂಡ..!

0
569

ಹೌದು ಮೋದಿ ಸರ್ಕಾರದ ಮೊಣಕಾಲು ಆಪರೇಷನ್ ವಿಚಾರದಲ್ಲಿ ಮಹತ್ವದ ಆದೇಶವನ್ನು ಹೊರಡಿಸಿದೆ.
ನಾಲ್ಕು ವಿಧದ ಮಂಡಿ ಚಿಪ್ಪಿನ ಕಸಿಗಳ ದರವನ್ನು ಶೇ.69 ಕಡಿಮೆ ಮಾಡಿದೆ. ನವದೆಹಲಿಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ದರಗಳು ಬುಧವಾರದಿಂದಲೆ ಜಾರಿಗೆ ಬಂದಿವೆ. ಈಗಾಗಲೇ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಬುಧವಾರ ಬಿಲ್ ಮಾಡಿದರೆ ಹೊಸ ದರ ಅನ್ವಯ ಆಗಲಿದೆ ಎಂದು ದೇಶದ ಎಲ್ಲ ಆಸ್ಪತ್ರೆಗಳಿಗೂ ಸೂಚಿಸಿರುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆ ನೀಡಿದ್ದಾರೆ.

ದುಬಾರಿ ದರದಿಂದಾಗಿ ವೈದ್ಯರು ಸಲಹೆ ನೀಡಿದ್ದರೂ ಹಲವರು ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಮಂಡಿಚಿಪ್ಪಿನ ಕಸಿಗಳ ದರ ಇಳಿಸುವುದಾಗಿ ಮಂಗಳವಾರ ಭರವಸೆ ನೀಡಿದ್ದರು.

ಮಂಡಿಚಿಪ್ಪಿನ ಕಸಿ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಶೇ.80-90 ಉತ್ಪನ್ನಗಳು ದೇಶೀಯವಾಗಿ ತಯಾರಾಗುವುದಿಲ್ಲ. ಇವಕ್ಕಾಗಿ ಭಾರತವು ಬಹುರಾಷ್ಟ್ರೀಯ ಕಂಪನಿಗಳನ್ನೇ ಅವಲಂಬಿಸಬೇಕಾಗಿತ್ತು. ಪರಿಸ್ಥಿತಿಯ ಲಾಭ ಪಡೆಯುತ್ತಿದ್ದ ಬಹುರಾಷ್ಟ್ರೀಯ ಕಂಪನಿಗಳು ಮಂಡಿಚಿಪ್ಪಿನ ಕಸಿಗಳನ್ನು ದುಬಾರಿ ಬೆಲೆ ಮಾರಾಟ ಮಾಡುತ್ತಿದ್ದವು. ಹೀಗಾಗಿ, ಸರ್ಕಾರ ಅವುಗಳ ಬೆಲೆ ನಿಯಂತ್ರಿಸಲು ನಿರ್ಧರಿಸಿತು ಎಂದು ಅನಂತಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಔಷಧೀಯ ದರ ನಿಗದಿ ಪ್ರಾಧಿಕಾರ (ಎನ್​ಪಿಪಿಎ) ದರಗಳ ದತ್ತಾಂಶದ ವಿಶ್ಲೇಷಣೆ ನಡೆಸಿ, ಸರ್ಕಾರಕ್ಕೆ ಮಾಹಿತಿ ನೀಡಿತ್ತು. ವರದಿಯಲ್ಲಿ ಭಾರಿ ದರ ವ್ಯತ್ಯಾಸ ಇರುವುದು ಸ್ಪಷ್ಟವಾಗಿತ್ತು. ಇಂತಹ ಲಾಭಕೋರರನು ಮತ್ತು ಆಸ್ಪತ್ರೆಗಳ ಬೇಕಾಬಿಟ್ಟಿ ಬಿಲ್ ಗಳನ್ನೂ ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ.

ಈ ಮೊಣಕಾಲು ಆಪರೇಷನ್ ಗೆ ನಮ್ಮ ಭಾರತದಲ್ಲಿ ಪ್ರತಿವರ್ಷ 1.2 ಲಕ್ಷ ಮಂದಿ ಒಳಗಾಗುತ್ತಾರೆ. ಇದೀಗ ದರ ನಿಯಂತ್ರಣ ಜಾರಿಗೆ ಬಂದಿರುವುದರಿಂದ, ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾದವರೆಲ್ಲರಿಂದ ಒಟ್ಟು 1,500 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಹೇಳಲಾಗಿದೆ.