ಲೋಕಸಭಾ ಚುನಾವಣೆಗೆ ಕರ್ನಾಟಕದ 28 ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಗೊತ್ತಾ??

0
778

ಲೋಕಸಭಾ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಗಿದಿದ್ದು ಏನಿದ್ದರೂ ಪ್ರಚಾರ ಮತ್ತು ಜನರ ಮತ ಸೆಳೆಯುವ ಕೆಲಸದಲ್ಲಿ ಅಭ್ಯರ್ಥಿಗಳು ಮಗ್ನರಾಗಿದ್ದಾರೆ. ಜನರಿಗೂ ಅವರವರ ಅಭ್ಯರ್ಥಿಗಳು ಮತ್ತು ಪಕ್ಷದ ಮೇಲೆ ಅಭಿಮಾನ ವಿರುತ್ತದೆ. ಆದರೆ ದೇಶದ ಭವಿಷ್ಯವನ್ನು ರೂಪಿಸುವ ರಾಜಕಾರಣಿಗಳಿಗೆ ಎಷ್ಟು ಜ್ಞಾನವಿದೆ ಅದರಂತೆ ಯಾವ ಶಿಕ್ಷಣ ಪಡೆದು ರಾಜಕೀಯಕ್ಕೆ ಬಂದಿದ್ದಾರೆ. ಎನ್ನುವುದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ, ಕೆಲವೊಬ್ಬರಿಗೆ ಗೊತ್ತಿದರು ಅವರ ತಾಲೂಕು, ಜಿಲ್ಲೆಯ ಅಭ್ಯರ್ಥಿಗಳ ಬಗ್ಗೆ ಗೊತ್ತಿರುತ್ತದೆ ಆದರೆ ರಾಜ್ಯದಲ್ಲಿ ರಾಜಕೀಯಕ್ಕೆ ಇಳಿದ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಎನ್ನುವುದು ತಿಳಿಯಬೇಕಿದೆ. ಏಕೆಂದರೆ ಓದಲು ಬರೆಯಲು ಬರದ ರಾಜಕಾರಣಿಗಳು ಶಿಕ್ಷಣದ ಮಂತ್ರಿಗಳು, ಗಂಧ ಗಾಳಿ ಗೊತ್ತಿಲ್ಲದ ಅಭ್ಯರ್ಥಿಗಳು ಆರೋಗ್ಯ ಮಂತ್ರಿಗಳು ಆಗಿ ದೇಶದ ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ.

Also read: 2019ರ ಲೋಕಸಭಾ ಚುನಾವಣೆಗೆ ಏನೆಲ್ಲ ಹೊಸ ವಿಧಾನಗಳಿವೆ? ಚುನಾವಣೆಗೆ ಆಯೋಗ ಏನೆಲ್ಲ ಸಿದ್ಧತೆ ಮಾಡಿಕೊಂಡಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಆದಕಾರಣ ಅಭ್ಯರ್ಥಿಗಳು ಯಾವ ರೀತಿಯ ಶಿಕ್ಷಣ ಪಡೆದುಕೊಂಡಿದ್ದಾರೆ ಎನ್ನುವುದು ಬಹುಮುಖ್ಯವಾಗಿ ಯೋಚಿಸಿ ಮತ ಚಲಾಯಿಸುವುದು ಒಳ್ಳೆಯದು. ಅದರಿಂದ ಪ್ರಜ್ಞಾವಂತರ ರಾಜಕೀಯ ವ್ಯವಸ್ಥೆ ತಲೆ ಎತ್ತಿ ನಿಲ್ಲಲು ಸಹಕಾರಿಯಾಗುತ್ತೆ. ಹಾಗಾದ್ರೆ ಈಗಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕರ್ನಾಟಕ ಲೋಕಸಭಾ ಅಖಾಡದ 28 ಕ್ಷೇತ್ರಗಳಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಎಂಬ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ಹಾಗಾದ್ರೆ ಕರ್ನಾಟಕದಿಂದ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಇಲ್ಲಿದೆ ನೋಡಿ.

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

1. ಬೆಂಗಳೂರು ಕೇಂದ್ರ
ಪಿ. ಸಿ. ಮೋಹನ್‌[ಬಿಜೆಪಿ]: ಪಿಯುಸಿ
ರಿಜ್ವಾನ್‌ ಅರ್ಷದ್‌[ಕಾಂಗ್ರೆಸ್]: B.Com
ಪ್ರಕಾಶ್ ರಾಜ್[ಪಕ್ಷೇತರ]: B.Com
2. ಬೆಂಗಳೂರು ದಕ್ಷಿಣ
ತೇಜಸ್ವಿ ಸೂರ್ಯ[ಬಿಜೆಪಿ]: BAL, LLB[ಕಾನೂನು ಪದವಿ]
ಬಿ. ಕೆ. ಹರಿಪ್ರಸಾದ್‌[ಕಾಂಗ್ರೆಸ್]: B.Com
3. ಬೆಂಗಳೂರು ಉತ್ತರ
ಡಿ. ವಿ. ಸದಾನಂದಗೌಡ[ಬಿಜೆಪಿ]: LLB
ಕೃಷ್ಣ ಬೈರೇಗೌಡ[ಕಾಂಗ್ರೆಸ್]: ಅಂತರಾಷ್ಟ್ರೀಯ ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿ
4. ಬೆಂಗಳೂರು ಗ್ರಾಮಾಂತರ
ಅಶ್ವತ್ಥ ನಾರಾಯಣ[ಬಿಜೆಪಿ]: SSLC
ಡಿ.ಕೆ.ಸುರೇಶ್‌[ಕಾಂಗ್ರೆಸ್]: PUC
5. ಮಂಡ್ಯ
ಸುಮಲತಾ ಅಂಬರೀಶ್‌[ಪಕ್ಷೇತರ]: SSLC
ನಿಖಿಲ್ ಕುಮಾರಸ್ವಾಮಿ[ಜೆಡಿಎಸ್]: BBA(ವ್ಯವಹಾರ ಆಡಳಿತದಲ್ಲಿ ಪದವಿ]
6 . ಹಾಸನ
ಎ. ಮಂಜು[ಬಿಜೆಪಿ]: BA, LLB
ಪ್ರಜ್ವಲ್‌ ರೇವಣ್ಣ[ಜೆಡಿಎಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
7. ಮೈಸೂರು-ಕೊಡಗು
ಪ್ರತಾಪ್‌ ಸಿಂಹ[ಬಿಜೆಪಿ]: MCJ(ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ]
ಸಿ.ಎಚ್‌.ವಿಜಯಶಂಕರ್‌[ಕಾಂಗ್ರೆಸ್]: BA
8. ಚಾಮರಾಜನಗರ
ವಿ. ಶ್ರೀನಿವಾಸ ಪ್ರಸಾದ್‌[ಬಿಜೆಪಿ]: MA
ಧ್ರುವ ನಾರಾಯಣ[ಕಾಂಗ್ರೆಸ್]: M.Sc(ಕೃಷಿ ವಿಜ್ಞಾನದಲ್ಲಿ ಪದವಿ]
9. ಉಡುಪಿ
ಶೋಭಾ ಕರಂದ್ಲಾಜೆ[ಬಿಜೆಪಿ]: ಸೋಶಿಯಲ್ ವರ್ಕ್ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಪ್ರಮೋದ್ ಮಧ್ವರಾಜ್[ಜೆಡಿಎಸ್]: ಪಿಯುಸಿ
10. ದಕ್ಷಿಣ ಕನ್ನಡ
ನಳಿನ್‌ ಕುಮಾರ್‌ ಕಟೀಲ್‌[ಬಿಜೆಪಿ]: SSLC
ಮಿಥುನ್‌ ರೈ[ಕಾಂಗ್ರೆಸ್]: BBM(ವ್ಯವಹಾರ ಆಡಳಿತದಲ್ಲಿ ಪದವಿ]
11. ತುಮಕೂರು
ಜಿ. ಎಸ್‌. ಬಸವರಾಜು[ಬಿಜೆಪಿ]: B.Sc, B.L
ಎಚ್‌. ಡಿ. ದೇವೇಗೌಡ[ಜೆಡಿಎಸ್]: ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್
12. ಚಿಕ್ಕಬಳ್ಳಾಪುರ
ಬಿ. ಎನ್‌. ಬಚ್ಚೇಗೌಡ[ಬಿಜೆಪಿ]: B.Sc, BL
ವೀರಪ್ಪ ಮೊಯ್ಲಿ[ಕಾಂಗ್ರೆಸ್]: BA, BL
13. ಕೋಲಾರ
ಮುನಿಸ್ವಾಮಿ[ಬಿಜೆಪಿ]: PUC
ಕೆ. ಎಚ್‌. ಮುನಿಯಪ್ಪ[ಕಾಂಗ್ರೆಸ್]: ಕಾನೂನು ಪದವಿ
14. ಚಿತ್ರದುರ್ಗ
ಎ. ನಾರಾಯಣಸ್ವಾಮಿ[ಬಿಜೆಪಿ]: BA
ಬಿ. ಎನ್‌. ಚಂದ್ರಪ್ಪ[ಕಾಂಗ್ರೆಸ್]: MA[ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ]
15. ಚಿಕ್ಕೋಡಿ
ಅಣ್ಣಾಸಾಹೇಬ್‌ ಜೊಲ್ಲೆ[ಬಿಜೆಪಿ]: PUC
ಪ್ರಕಾಶ್‌ ಹುಕ್ಕೇರಿ[ಕಾಂಗ್ರೆಸ್]: SSLC
16. ಬೆಳಗಾವಿ
ಸುರೇಶ್‌ ಅಂಗಡಿ[ಬಿಜೆಪಿ]: B.Com, LLB
ಡಾ. ವಿರೂಪಾಕ್ಷಪ್ಪ ಸಾಧುನವರ್‌[ಕಾಂಗ್ರೆಸ್]: MBBS
17. ಬಾಗಲಕೋಟೆ
ಗದ್ದಿಗೌಡರ್‌[ಬಿಜೆಪಿ]: BA, LLB
ವೀಣಾ ಕಾಶೆಪ್ಪನವರ್‌[ಕಾಂಗ್ರೆಸ್]: B.Com
18. ವಿಜಯಪುರ
ರಮೇಶ್‌ ಜಿಗಜಿಣಗಿ[ಬಿಜೆಪಿ]: BA
ಡಾ.ಸುನೀತಾ ಚೌವ್ಹಣ್‌[ಜೆಡಿಎಸ್]: Ph.D
19. ಕಲಬುರಗಿ
ಉಮೇಶ್‌ ಜಾಧವ್‌[ಬಿಜೆಪಿ]: MS
ಮಲ್ಲಿಕಾರ್ಜುನ ಖರ್ಗೆ[ಕಾಂಗ್ರೆಸ್]: BA, LLB
20. ರಾಯಚೂರು
ರಾಜಾ ಅಮೇಶ್ವರ ನಾಯಕ್‌[ಬಿಜೆಪಿ]: BA, LLB
ಬಿ. ವಿ. ನಾಯಕ್‌[ಕಾಂಗ್ರೆಸ್]: LLB
21. ಬೀದರ್‌
ಭಗವಂತ ಖೂಬಾ[ಬಿಜೆಪಿ]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ಈಶ್ವರ್‌ ಖಂಡ್ರೆ [ಕಾಂಗ್ರೆಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
22. ಕೊಪ್ಪಳ
ಕರಡಿ ಸಂಗಣ್ಣ[ಬಿಜೆಪಿ]: SSLC
ರಾಜಶೇಖರ್‌ ಹಿಟ್ನಾಳ್‌[ಕಾಂಗ್ರೆಸ್]: PUC
23. ಬಳ್ಳಾರಿ
ವೈ. ದೇವೇಂದ್ರಪ್ಪ[ಬಿಜೆಪಿ]: 7ನೇ ತರಗತಿ
ವಿ. ಎಸ್‌. ಉಗ್ರಪ್ಪ[ಕಾಂಗ್ರೆಸ್]: ಕಾನೂನು ಪದವಿ
24. ಹಾವೇರಿ
ಶಿವಕುಮಾರ್‌ ಉದಾಸಿ[ಬಿಜೆಪಿ]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ದ್ಯಾವನಗೌಡ ಪಾಟೀಲ್‌[ಕಾಂಗ್ರೆಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
25. ಧಾರವಾಡ
ಪ್ರಹ್ಲಾದ್‌ ಜೋಶಿ[ಬಿಜೆಪಿ]: BA
ವಿನಯ್‌ ಕುಲಕರ್ಣಿ[ಕಾಂಗ್ರೆಸ್]: B.Sc
26. ಉತ್ತರ ಕನ್ನಡ
ಅನಂತ ಕುಮಾರ್‌ ಹೆಗಡೆ[ಬಿಜೆಪಿ]: PUC
ಆನಂದ್‌ ಅಸ್ನೋಟಿಕರ್‌[ಜೆಡಿಎಸ್]: MA
27. ದಾವಣಗೆರೆ
ಜಿ.ಎಂ.ಸಿದ್ದೇಶ್ವರ್‌[ಬಿಜೆಪಿ]: SSLC
ಎಚ್‌. ಬಿ. ಮಂಜಪ್ಪ[ಕಾಂಗ್ರೆಸ್]: SSLC
28. ಶಿವಮೊಗ್ಗ
ಬಿ.ವೈ.ರಾಘವೇಂದ್ರ[ಬಿಜೆಪಿ]: BBM
ಮಧು ಬಂಗಾರಪ್ಪ[ಜೆಡಿಎಸ್]: BA.