ಪಾಂಡ್ಯ ಬಳಸುವ ವಾಚ್ ಬೆಲೆ ಎಷ್ಟು ಅಂತ ಕೇಳಿದ್ರೆ ನೀವು ಶಾಕ್ ಆಗುವುದು ಗ್ಯಾರೆಂಟಿ..!

0
228

ಬಲಗೈ ಬ್ಯಾಟ್ಸ್ಮನ್ ವಿಶ್ವದ ಅತ್ಯಂತ ಶ್ರೀಮಂತ ಆಲ್ರೌಂಡರ್ ಎಂಬುದರಲ್ಲಿ ಸಂಶಯವೇ ಇಲ್ಲ. ಹೌದು.. ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರು. ಪಾಂಡ್ಯ ಕಳೆದ ವರ್ಷ 24.87 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದಾರೆ. ಬಾಲ್ಯದಲ್ಲಿ ಕಡುಬಡತನವನ್ನು ಎದುರಿಸಿದ್ದ ಭಾರತ ತಂಡದ ಆಲ್ರೌಂಡರ್, ಕ್ರಿಕೆಟ್ನಲ್ಲಿ ಯಶಸ್ವಿಯಾದ ಬಳಿಕ ವಿಲಾಸಿ ಜೀವನವನ್ನು ಸಾಗಿಸುತ್ತಿದ್ದಾರೆ. ಅದರಂತೆ ತಾವು ಉಪಯೋಗಿಸುವ ವಸ್ತುಗಳು ಅತ್ಯಂತ ದುಬಾರಿಯಾಗಿವೆ. ಅದರಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವ ವಾಚ್ ಅನ್ನು ಪಾಂಡ್ಯ ಬಳಿ ಇದೆ.

ಇತ್ತೀಚೆಗಷ್ಟೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಂತ ದುಬಾರಿ ವಾಚ್ ಹಾಕಿಕೊಂಡಿರುವ ಫೋಟೊವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದರು. ಕಾಸ್ಮೊಗ್ರಾಫ್ ಡೇಟೋನಾ ಕಂಪನಿಯ ವಾಚ್ ಅದಾಗಿದ್ದು, ಇದರ ಬೆಲೆ ಸುಮಾರು 8,60,700 ರೂ. ಗಳಾಗಿತ್ತು. ಆದರೆ, ಹಾರ್ದಿಕ್ ಪಾಂಡ್ಯ ಅವರ ವಾಚ್ ಬೆಲೆ ಅದಕ್ಕಿಂತ ದುಬಾರಿಯಾಗಿದೆ. ಆಲ್ರೌಂಡರ್ ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಲವು ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಶ್ವಾನಗಳೊಂದಿಗೆ ಹಾಗೂ ಅಡುಗೆ ಮಾಡುತ್ತಿರುವ ಫೋಟೊಗಳಲ್ಲಿ ಅವರ 18ಕೆ ಬಂಗಾರದ ರೊಲೆಕ್ಸ್ ಓಯಿಸ್ಟಾರ್ ಪರ್ಪೆಚ್ಯೂಲ್ ಡೇಟೋನಾ ಕಾಸ್ಮೊಗ್ರಾಫ್ ದುಬಾರಿ ವಾಚ್ ಕೈಗೆ ಕಟ್ಟಿರುವುದು ಎದ್ದು ಕಾಣುತ್ತಿತ್ತು. ಅಮರಿಕದಲ್ಲಿ ಈ ವಾಚ್ ತುಂಬಾ ಪ್ರಸಿದ್ದಿಯನ್ನು ಪಡೆದಿದೆ. ವಿಶ್ವದಲ್ಲಿಯೇ ಪ್ರಸಿದ್ದಿ ಗಳಿಸಿರುವ ಕ್ರೋನೊಗ್ರಾಫ್ಸ್ ವಾಚ್ಗಳಲ್ಲಿ ಒಂದು.

ಟೀಮ್ ಇಂಡಿಯಾ ಕ್ರಿಕೆಟ್ ತಾರೆಯ ಡೇಟೋನಾ ವಾಚ್ ಅಂಚಿನ ಮೇಲೆ 36 ಟ್ರೆಪೆಜ್-ಕಟ್ ವಜ್ರಗಳನ್ನು ಒಳಗೊಂಡಿದೆ. ರೋಲೆಕ್ಸ್ನ ಅತ್ಯಂತ ಸುಂದರವಾದ ಮತ್ತು ದುಬಾರಿ ಕೈಗಡಿಯಾರಗಳಲ್ಲಿ ಒಂದಾದ ಅದರಲ್ಲಿ ಒಟ್ಟು 243 ವಜ್ರಗಳಿಂದ ಅಲಂಕರಿಸಿದ್ದಾರೆ. ಅಂದ ಹಾಗೆ ಹಾರ್ದಿಕ್ ಪಾಂಡ್ಯ ಹಾಕಿರುವ ವಾಚ್ ಬೆಲೆ ಸರಿ ಸುಮಾರು 1.01 ಕೋಟಿ ರೂ.ಗಳು. ಸ್ಟಾರ್ ಆಲ್ರೌಂಡರ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ತವರು ಸರಣಿಯ ಬಳಿಕ ಭಾರತ ತಂಡದಿಂದ ದೂರ ಉಳಿದಿದ್ದಾರೆ. ಬೆನ್ನು ನೋವಿನಿಂದ ತಂಡದಿಂದ ಹೊರಗುಳಿದ ಅವರು ಲಂಡನ್ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ನಂತರ ಚೇತರಿಸಿಕೊಂಡಿದ್ದ ಪಾಂಡ್ಯ, ಕಳೆದ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಓಡಿಐ ಸರಣಿಗೆ ಆಯ್ಕೆಯಾಗಿದ್ದರು.