ಪೊಲೀಸರು ಮಹಿಳೆಯರನ್ನು ಬಂಧಿಸುವ ಸಯಮದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕು.!

0
207

ಹೌದು ಪ್ರತಿಯೊಂದು ನಗರದಲ್ಲಿ ಮಹಿಳಾ ಪೊಲೀಸ್ ಠಾಣೆ ನಡೆಸಲು ಸರ್ಕಾರ ಯೋಜಿಸಿದೆ, ಆದರೆ ಮಹಿಳಾ ಪೊಲೀಸ್ ಸಿಬ್ಬಂದಿಯ ಕೊರತೆಯು ದೇಶಾದ್ಯಂತ ಇರುವುದು ಕಂಡು ಬರುತ್ತಿದೆ. ಅದಕ್ಕಾಗಿ ಮಹಿಳೆಯನ್ನು ಬಂಧಿಸುವಾಗ ಹಲವಾರು ಕಿರುಕುಳ ಮತ್ತು ಮ್ಯಾನ್‌ಹ್ಯಾಂಡ್ಲಿಂಗ್ ಪ್ರಕರಣಗಳು ಕಂಡು ಬರುತ್ತಿದ್ದು, ಆರೋಪಿ ಮಹಿಳೆಯರಾಗಿದ್ದರೂ, ನ್ಯಾಯಯುತವಾಗಿ ಸುರಕ್ಷತೆಯೇ ಮುಖ್ಯವಾಗಿದ್ದು, 2005 ರಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ರ ತಿದ್ದುಪಡಿಗಳು ಮಹಿಳೆಯ ಸುರಕ್ಷತೆಗೆ ಸಂಬಂಧಿಸಿದಂತೆ ಬಹಳ ಮಹತ್ವದ ವಿಷಯವನ್ನು ತಿಳಿಸಿವೆ. ಇಂತಹ ಕಾನೂನಿನ ಬಗ್ಗೆ ತಿಳಿದೇ ಇಲ್ಲ. ಸಾಮಾನ್ಯ ಕಾನೂನು ಹಕ್ಕುಗಳ ಬಗ್ಗೆ ಮಹಿಳೆಯರು ತಿಳಿದುಕೊಂಡರೆ ಎಂತಹ ಕಠಿಣ ಸಮಯದಲ್ಲಿ ನೆರವಿಗೆ ಬರುತ್ತದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ರ ಸೆಕ್ಷನ್ 46 (4) ಪ್ರಕಾರ, ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, “ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯದ ಮೊದಲು ಯಾವುದೇ ಮಹಿಳೆಯನ್ನು ಬಂಧಿಸಲಾಗುವುದಿಲ್ಲ. ಯಾವುದೇ ಅಸಾಧಾರಣ ಸನ್ನಿವೇಶಗಳು ಅಸ್ತಿತ್ವದಲ್ಲಿದ್ದರೆ, ಮಹಿಳಾ ಪೊಲೀಸ್ ಅಧಿಕಾರಿ, ಲಿಖಿತ ವರದಿಯನ್ನು ಮಾಡುವ ಮೂಲಕ, ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಪಡೆಯಬೇಕು, ಅವರ ವ್ಯಾಪ್ತಿಯಲ್ಲಿ ಅಪರಾಧ ಎಸಗಲಾಗಿದೆ ಅಥವಾ ಬಂಧಿಸಬೇಕಾಗುತ್ತದೆ.

ತಿಳಿಸುವ ಹಕ್ಕು:

ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ರ ಸೆಕ್ಷನ್ 50 (1) ರ ಪ್ರಕಾರ. (ಸಿ.ಆರ್.ಪಿ.ಸಿ) ಮಹಿಳೆಯರನ್ನು ಯಾವ ಆಧಾರದ ಮೇಲೆ ಬಂಧಿಸಲಾಗುತ್ತಿದೆ ಎಂಬ ಬಗ್ಗೆ ತಿಳಿಸುವ ಹಕ್ಕಿದೆ. ಆಕೆಯ ಸೂಚನೆಯಂತೆ ಆರೋಪಿ ಮಹಿಳೆಯರ ಸ್ನೇಹಿತರು ಅಥವಾ ಸಂಬಂಧಿಕರಿಗೆ ತಿಳಿಸುವುದು ಮಹಿಳೆಯರನ್ನು ಬಂಧಿಸುವ ಪೊಲೀಸ್ ಅಧಿಕಾರಿಯ ಕರ್ತವ್ಯವಾಗಿದೆ.

ಜಾಮೀನು ನೀಡುವ ಹಕ್ಕು:

Cr.P.C ಯ ಸೆಕ್ಷನ್ 50 ಎ. – ಜಾಮೀನು ರಹಿತ ವಾರಂಟ್‌ಗಳ ಹೊರತಾಗಿ, ಜಾಮೀನು ನೀಡುವ ಸಾಧ್ಯತೆಯ ಬಗ್ಗೆ ಆರೋಪಿಗಳಿಗೆ ತಿಳಿಸುವುದು ಪೊಲೀಸ್ ಅಧಿಕಾರಿಯ ಕರ್ತವ್ಯ. ಬಂಧನಕ್ಕೊಳಗಾದ ಮಹಿಳೆಯರನ್ನು ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ಮುಂದೆ ಕರೆದೊಯ್ಯಬೇಕು. ಆಕೆಯನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸಬಾರದು.

ಇತರೆ ಹಕ್ಕುಗಳು:

  1. ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆರೋಪಿ ಮಹಿಳೆಯನ್ನು ಹುಡುಕಬಹುದು, ಪುರುಷ ಅಧಿಕಾರಿಯು ಮಹಿಳಾ ಅಪರಾಧಿಯನ್ನು ಹುಡುಕುವಂತಿಲ್ಲ.
  2. ಬಂಧನದ ಸಮಯದಲ್ಲಿ ಆರೋಪಿ ಮಹಿಳೆಯನ್ನು ಮ್ಯಾನ್‌ಹ್ಯಾಂಡ್ಲಿಂಗ್ ಮತ್ತು ಕೈಕೋಳ ಹಾಕುವುದು ಕಾನೂನುಬಾಹಿರ.
  3. ಭಾರತೀಯ ದಂಡಸಂಹಿತೆ 160ರ ಪ್ರಕಾರ: ಅಪರಾಧ ನಡವಳಿ ಸಂಹಿತೆಯಂತೆ ಮಹಿಳೆಯೊಬ್ಬಳನ್ನು ವಿಚಾರಣೆಗೆಗಾಗಿ ಪೊಲೀಸ್ ಠಾಣೆಗೆ ಕರೆಸುವಂತಿಲ್ಲ. ಪೊಲೀಸರು ಮಹಿಳೆಯನ್ನು ಮಹಿಳಾ ಕಾನ್ಸ್ ಸ್ಟೇಬಲ್, ಕುಟುಂಬದವರು ಅಥವಾ ಸ್ನೇಹಿತರ ಸಮ್ಮುಖದಲ್ಲಿ ವಿಚಾರಣೆ ಮಾಡಬಹುದು.
  4. ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ: ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ಯಾವುದೇ ಮಹಿಳೆಯನ್ನು ಸೂರ್ಯಾಸ್ತದ ಬಳಿಕ ಮತ್ತು ಸೂರ್ಯೋದಯದ ಮೊದಲು ಬಂಧಿಸುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಮೆಜಿಸ್ಟ್ರೇಟ್ ಅನುಮತಿಯನ್ನು ಪಡೆದುಕೊಂಡು ಮಹಿಳೆಯನ್ನು ಬಂಧಿಸಬಹುದು.
  5. ಎಫ್ ಐಆರ್: ಯಾವುದೇ ಠಾಣೆಯಲ್ಲಿ ಬೇಕಾದರೂ ಝೀರೋ ಎಫ್ ಐಆರ್ ದಾಖಲಿಸಿಕೊಳ್ಳಬಹುದು. ಝೀರೋ ಎಫ್ ಐಆರ್ ಎಂದರೆ ಠಾಣೆಯ ಸರಹದ್ದಿಗೆ ಸಂಬಂಧಿಸಿದ ಪ್ರಕರಣವಲ್ಲದಿದ್ದರೂ ಸಹ ಆ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಬೇಕು.
  6. ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ: ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ನಡೆದು ತುಂಬಾ ಸಮಯವಾಗಿದ್ದರೂ ಮಹಿಳೆ ನೀಡುವಂತಹ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲು ನಿರಾಕರಿಸಬಾರದು. ಇದರಿಂದ ಮಹಿಳೆಯರು ದೂರು ದಾಖಲಿಸಲು ವಿಳಂಬವಾಯಿತೆಂದು ಯಾವತ್ತೂ ಭಾವಿಸಬಾರದು.
  7. ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕನ್ನು….
    ಹೇಳಿಕೆಯನ್ನು ನೀಡುವಾಗ ಮಹಿಳೆಯು ತನ್ನ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ಭಾರತೀಯ ದಂಡಸಂಹಿತೆ 164ರ ಪ್ರಕಾರ ಅಪರಾಧ ನಡವಳಿ ಸಂಹಿತೆಯಂತೆ ಈ ಹಕ್ಕನ್ನು ನೀಡಲಾಗಿದೆ. ಮಹಿಳೆಯು ಯಾರ ಮುಂದೆಯೂ ಹೇಳಿಕೆ ನೀಡುವ ಅಗತ್ಯವಿಲ್ಲ ಮತ್ತು ಹೀಗೆ ಮಾಡಿದರೆ ಆಕೆಯ ಖಾಸಗಿತನಕ್ಕೆ ಧಕ್ಕೆಯಾಗಬಾರದು.