ನರೇಂದ್ರ ಮೋದಿಗೆ ಮತ್ತೆ ಗೆಲುವಿನ ಸುವರ್ಣ ಕಿರೀಟ; ಭವಿಷ್ಯ ನುಡಿದ ಕೊಡಿಹಳ್ಳಿ ಮಠದ ಶ್ರೀಗಳು..

0
496

ಚುನಾವಣೆ ಘೋಷಣೆಯಾದರೆ ಸಾಕು ರಾಜಕೀಯ ಬಗ್ಗೆ ಭವಿಷ್ಯಗಳು ಕೇಳಿ ಬರುವುದು ಸಾಮನ್ಯವಾಗಿದೆ. ಇನ್ನೂ ಇಂತಹ ಕೆಲವು ಭವಿಷ್ಯಗಳು ಸತ್ಯವಾದರೆ ಕೆಲವು ಭವಿಷ್ಯಗಳು ಸುಳ್ಳು ಎನ್ನುವುದು ಹಲವು ಬಾರಿ ತಿಳಿದಿದೆ. ಅದರಂತೆ ಈ ಬಾರಿಯೂ ಲೋಕಸಭಾ ಚುನಾವಣಾ ರಂಗೆರಿದ್ದು ಇದರ ಕುರಿತು ಭವಿಷ್ಯ ನುಡಿದಿರುವ ಯಾದಗಿರಿಯ ಅಬ್ಬೆ ತುಮಕೂರಿನ ವಿಶ್ವರಾಧ್ಯ ಮಠದಲ್ಲಿ ಶ್ರೀಗಳು, ರಾಜಕೀಯ ಭವಿಷ್ಯ ನುಡಿದ್ದಿದ್ದಾರೆ.

Also read: ಭಾರತ ಪಾಕ್-ನಲ್ಲಿ ನಡೆಸಿದ ದಾಳಿಯ ಸಾಕ್ಷಿ ನಾಶ ಮಾಡಿದ್ದ ಪಾಕ್, ಈಗ ಹೊರಬಿದ್ದಿದೆ ಸತ್ಯ.. ಇನ್ಮೇಲಾದ್ರೂ ನಮ್ಮ ಯೋಧರ ಮೇಲೆ ಅನುಮಾನ ಪಡೋದು ಬಿಡ್ತಾರಾ??

ಹೌದು ಶ್ರೀ ಗಳ ಭವಿಷ್ಯದಂತೆ ಈ ಸಲವೂ ಮತ್ತೆ ಪ್ರಧಾನಿ ಮೋದಿ ಅವರೇ ಪ್ರಧಾನಿ ಅಗುತ್ತಾರೆಂದು ಭವಿಷ್ಯ ಹೇಳಿದ್ದಾರೆ. “ಕುರುವಂಶ ದೊರೆಗಳು ಬಡಿದಾಡ್ಯಾರು. ಪಾಂಡವರು ಕೌರವರು ಬಡಿದಾಡ್ಯಾರು. ರತ್ನ ಖಚಿತ ಸುವರ್ಣ ಕಿರೀಟ ಸ್ಥಿರವಾದಿತು. ಬೇವು ಬೆಲ್ಲವಾದಿತು ಎಂದು ರಾಜಕೀಯ ಭವಿಷ್ಯ ನುಡಿದ್ದಾರೆ. ಈ ಮಾತಿನ ಅರ್ಥ ಒಂದು ಪಕ್ಷವನ್ನು ಸೋಲಿಸಲು ಹಾವು ಮುಂಗುಸಿಯಂತೆ ಇರುವ ಪಕ್ಷಗಳು ಒಂದಾಗಿವೆ. ಇವುಗಳು ಹರಸಾಹಸ ಮಾಡಿ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿವೆ.
ಯಾವುದೇ ಪಕ್ಷಗಳು ಏನೇ ಮಾಡಿದರು ರತ್ನ ಖಚಿತ ಸುವರ್ಣ ಕಿರೀಟ ಸ್ಥಿರವಾದಿತು. ಬೇವು ಬೆಲ್ಲವಾದಿತು ಎಂದು ರಾಜಕೀಯ ಭವಿಷ್ಯ ನುಡಿದ ಅವರು ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಾರೆ. ರತ್ನ ಖಚಿತ ಸುವರ್ಣ ಕಿರೀಟ ಅವರಿಗೆ ಎಂದು ಭವಿಷ್ಯ ನುಡಿದ್ದಿದ್ದಾರೆ. ಈ ಭವಿಷ್ಯ ಕುರಿತು ದೇಶದೆಲ್ಲಡೆ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದು. ಪ್ರಧಾನಿ ಮೋದಿ ಅಭಿಮಾನಿಗಳು ಸಂತಸದಲ್ಲಿ ಮತ್ತಷ್ಟು ಹಿಗ್ಗಿದ್ದಾರೆ.

ಕೆಲವು ದಿನಗಳ ಹಿಂದೆ ಇದೆ ರೀತಿಯ ಭವಿಷ್ಯವು ಹುಬ್ಬಳ್ಳಿಯಲ್ಲಿ ಕೇಳಿ ಬಂದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಖ್ಯಾತಿಯು ಮಾರ್ಚ್ ನಂತರ ಗಮನಾರ್ಹವಾಗಿ ಹೆಚ್ಚಲಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 285 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೇರಲಿದೆ ಎಂದು ವಿದ್ವಾನ್ ಗಣೇಶ್ ಹೆಗಡೆ ಭವಿಷ್ಯ ನುಡಿದು ಮುಂದಿನ ತಿಂಗಳ ಬಳಿಕ ಎಲ್ಲರೂ ದಂಗಾಗಿ ಹೋಗುವಂತೆ ಪ್ರಧಾನಿ ಜನಪ್ರಿಯತೆ 75%ರಷ್ಟು ಹೆಚ್ಚಲಿದೆ. ಏಪ್ರಿಲ್ 5 ರಿಂದ ಮೇ 15ರೊಳಗೆ ಚುನಾವಣೆ ನಡೆದರೆ ಮೋದಿಯೇ ಮತ್ತೆ ಅಧಿಕಾರ ಹಿಡಿಯಲಿದ್ದಾರೆ ಎಂದು ಹೇಳಿದ್ದಾರೆ..

Also read: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ; whatsapp, facebook, ಟ್ವೀಟ್, ಗಳಲ್ಲಿ ಎಲೆಕ್ಷನ್​​ ಪ್ರಚಾರ ಮಾಡಿದ್ರೆ ಜೈಲು ಪಕ್ಕಾ..

ಅದೇ ವಿದ್ವಾನ್ ಗಣೇಶ್ ಹೆಗಡೆ ರಾಜ್ಯದ ರಾಜಕೀಯ ಬಗ್ಗೆ ಭವಿಷ್ಯ ನುಡಿದು ಮಾರ್ಚ್ 5 ರೊಳಗೆ ಕುಮಾರಸ್ವಾಮಿ ಸರಕಾರ ಬೀಳಲಿದೆ, ರಾಜ್ಯ ಬಿಜೆಪಿ ವರಿಷ್ಠ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಗಳಾಗುತ್ತಾರೆ. ಬಿಎಸ್‌ವೈ ಅವರ ಜಾತಕದ ಪ್ರಕಾರ ಅವರಿಗೆ ಮಾರ್ಚ್ 5ರೊಳಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಇದು ಸುಳ್ಳಾದರೆ ನಾವು ಜ್ಯೋತಿಷ್ಯ ಹೇಳುವ ಕಾಯಕವನ್ನು ಬಿಟ್ಟು ಬಿಡುತ್ತೇವೆ ಎಂದು ಜ್ಯೋತಿಷ್ಯ ಜೋಡಿಗಳಾದ ಹೆಗಡೆ ಮತ್ತು ಪವನ್ ಜೋಶಿ ಹೇಳಿದ ಅವರು
ನಾವು ಈ ಹಿಂದೆ ಹೇಳಿರುವ ಭವಿಷ್ಯ ನಿಜವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ನಾವು ಹೇಳಿದ್ದೆವು. 2008ರಲ್ಲಿ ಬಿಎಸ್‌ವೈ ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದೆವು. ಇದು ಕೂಡ ನಿಜವಾಗಿತ್ತು ಎಂದು ಹೆಗಡೆ ಹೇಳಿಕೊಂಡಿದ್ದರು ಆದರೆ ಅದ್ಯಾವುದು ಸತ್ಯವಾಗಲಿಲ್ಲ. ಇದೇ ರೀತಿ ಮೋದಿಯವರ ಬಗ್ಗೆ ಭವಿಷ್ಯ ಕೇಳಿ ಬಂದಿದ್ದು ಏನಾಗುತ್ತೋ ಅಂತ ಕಾದುನೋಡಬೇಕಿದೆ.