ರುಚಿಯಾದ ಖಾರದ ಕೋಡುಬಳೆ ಮಾಡುವ ವಿಧಾನ

0
6986

ಬೇಕಾಗುವ ಸಾಮಗ್ರಿ:

ಅಕ್ಕಿಹಿಟ್ಟು-1 ಕಪ್,

ಚಿರೋಟಿ ರವೆ-3 ಕಪ್,

ಕಾಯಿ-1 1/2 ಹೋಳು,

ಒಣಮೆಣಸಿನಕಾಯಿ-ನಿಮ್ಮ ರುಚಿಗೆ ತಕ್ಕಷ್ಟು,

ಅರಿಶಿನ-ಇಂಗು: ಚಿಟಿಕೆ,

ಉಪ್ಪು-ರುಚಿಗೆ ತಕ್ಕಷ್ಟು,

ಎಳ್ಳು (ಬೇಕಿದ್ದರೆ)-1/2 ಚಮಚ.

 

ಕೋಡುಬಳೆ ಮಾಡುವ ವಿಧಾನ
ಕೋಡುಬಳೆ ಮಾಡುವ ವಿಧಾನ :

ಮಿಕ್ಸಿಂಗ್‍ಬೌಲ್‍ನಲ್ಲಿ ಅಕ್ಕಿಹಿಟ್ಟು, ಚಿರೋಟಿರವೆಗಳನ್ನು ಬೆರೆಸಿಕೊಳ್ಳಿ. ಕಾಯಿ ತುರಿದಿಡಿ. ಒಣಮೆಣಸಿನಕಾಯಿಯನ್ನು ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಹುರಿದುಕೊಂಡು ಇಂಗು, ಅರಿಶಿನ, ಕಾಯಿತುರಿಯೊಂದಿಗೆ ನುಣುಪಾಗಿ ರುಬ್ಬಿ ಈ ಮಿಶ್ರಣವನ್ನು ಅಕ್ಕಿ-ಚಿರೋಟಿರವೆಗೆ ಉಪ್ಪು, ಹುರಿದ ಎಳ್ಳು ಸೇರಿಸಿ ಬೆರೆಸಿ ಗಟ್ಟಿಯಾಗಿ ಕಲೆಸಿಕೊಂಡು ಒದ್ದೆಬಟ್ಟೆಯಲ್ಲಿ ಸುತ್ತಿಡಿ. ಇದಕ್ಕೆ ಮೊದಲು ಹಿಟ್ಟನ್ನು ಚೆನ್ನಾಗಿ ನಾದಿ ಸಾಟಿ ಹಾಕಬೇಕು. ಕೋಡುಬಳೆಯ ರುಚಿ ಅವಲಂಬಿಸುವುದು ನೀವು ಹಿಟ್ಟನ್ನು ಎಷ್ಟು ಸಾಟಿ ಹಾಕುತ್ತೀರಿ ಎಂಬುದರ ಮೇಲೆ. ಸ್ವಲ್ಪಸ್ವಲ್ಪ ಹಿಟ್ಟು ತೆಗೆದುಕೊಂಡು ಅದರಲ್ಲಿ ಕೋಡುಬಳೆ ಹೊಸೆದುಕೊಂಡು ಬಿಸಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.