ಬಾಗ್ಲಾದೇಶ ವಿರುದ್ಧ ಕೊಹ್ಲಿ ಭರ್ಜರಿ ದ್ವಿಶತಕ

0
575

ಹೈದರಾಬಾದ್: ಬಾಂಗ್ಲಾದೇಶದ ವಿರುದ್ಧ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆದಿದ್ದು, ನಿನ್ನೆ ಶತಕ ಸಿಡಿಸಿದ್ದ ಕೊಹ್ಲಿ ಇಂದು ಅದನ್ನು ದ್ವಿಶತಕವಾಗಿ ಮಾರ್ಪಡಿಸಿ ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ.

ಬಾಂಗ್ಲಾ ವಿರುದ್ಧ ಹೈದರಾಬಾದ್ ನಲ್ಲಿ 246 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಕೊಹ್ಲಿ ತಮ್ಮ ವೈಯುಕ್ತಿಕ ನಾಲ್ಕನೇ ದ್ವಿಶತಕ ಸಿಡಿಸಿದ್ದು, ಆ ಮೂಲಕ ನಿರಂತರ ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಹಿಂದೆ 2016ರ ಜುಲೈ 21ರಂದು ವಿಂಡೀಸ್ ವಿರುದ್ಧ ಆಯಂಟಿಗುವಾದಲ್ಲಿ ಕೊಹ್ಲಿ ಮೊದಲ ದ್ವಿಶತಕ ಸಿಡಿಸಿದ್ದರು.

ಕೊಹ್ಲಿಗೂ ಮುನ್ನ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಹಾಗೂ ಭಾರತದ ರಾಹುಲ್ ದ್ರಾವಿಡ್ ನಿರಂತರ ಮೂರು ಸರಣಿಗಳಲ್ಲಿ 3 ದ್ವಿಶತಕ ಸಿಡಿಸಿದ್ದರು. ಇದೀಗ ಇವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಅಂತೆಯೇ 2016 ಡಿಸೆಂಬರ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಮುಂಬೈ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 3ನೇ ದ್ವಿಶತಕ ಸಿಡಿಸಿದ್ದರು. ಇದೀಗ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ ನಾಲ್ಕನೇ ದ್ವಿಶತಕ ಸಿಡಿಸುವ ಮೂಲಕ ನಿರಂತರ ಸರಣಿಯಲ್ಲಿ ಸತತ ನಾಲ್ಕು ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.

ಈ ಸರಣಿ ಬೆನ್ನಲ್ಲೇ 2016ರ ಅಕ್ಟೋಬರ್ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ 211 ರನ್ ಗಳಿಸುವ ಮೂಲಕ ತಮ್ಮ ಎರಡನೇ ದ್ವಿಶತಕ ಸಿಡಿಸಿದ್ದರು.

ಸತತ ನಾಲ್ಕು ಸರಣಿಗಳಲ್ಲಿ 4 ದ್ವಿಶತಕ ಸಿಡಿಸಿದ ಏಕೈಕ ಕ್ಯಾಪ್ಟನ್

ಇನ್ನು ಬಾಂಗ್ಲಾದೇಶದ ವಿರುದ್ಧ ವಿಶ್ವದ ಯಾವುದೇ ತಂಡದ ನಾಯಕ ಗಳಿಸಿದ ಅತೀ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲೂ ಕೊಹ್ಲಿ 2ನೇ ಸ್ಥಾನ ಗಳಿಸಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ 204 ರನ್ ಸಿಡಿಸುವ ಮೂಲಕ ಬಾಂಗ್ಲಾದೇಶದ ವಿರುದ್ಧ ಪಂದ್ಯವೊಂದರಲ್ಲಿ ಎದುರಾಳಿ ತಂಡದ ನಾಯಕ ಗಳಿಸಿದ 2ನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್ 2008ರ ಚಿತ್ತಗಾಂಗ್ ಟೆಸ್ಟ್ ಪಂದ್ಯದಲ್ಲಿ 232 ರನ್ ಗಳಿಸಿದ್ದರು. ಇದು ಬಾಂಗ್ಲಾದೇಶದ ವಿರುದ್ದ ತಂಡದ ನಾಯಕನೋರ್ವ ಗಳಿಸಿದ ಗರಿಷ್ಟ ವೈಯುಕ್ತಿಕ ರನ್ ಗಳಿಕೆಯಾಗಿದೆ.