ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಊಟ ಸಿಗದಂತೆ ಮಾಡಿ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರಿನಿಂದ ಊಟ ತರಿಸಿದ್ದು ಸರಿಯೇ??

0
480

ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಿಸಿಯೂಟವನ್ನು ನಿರಾಕರಿಸಿತ್ತು.. ಆದರೆ ಈಗ ಅದೇ ಆಢಳಿತಾರೂಢ ಪಕ್ಷ ಕಾಂಗ್ರೆಸ್ ತನ್ನ ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರವನ್ನು ಪಡೆದುಕೊಂಡಿದೆ.. ಇದಕ್ಕೆ ಜನರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಕೊಲ್ಲೂರಿಂದ ಊಟದ ವ್ಯವಸ್ಥೆ ಮಾಡಿದೆ. ಟೆಂಪೋ- ಲಾರಿಗಳಲ್ಲಿ ಊಟ ಸಾಗಾಟ ಮಾಡುವ ದೃಶ್ಯ ವೈರಲ್ ಆಗಿತ್ತು. ಈ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಪೇಚಿಗೆ ಸಿಲುಕಿತ್ತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಸುಮಾರು 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ರೂಪಾಯಿಯೂ ನೀಡಿಲ್ಲ.ಅಕ್ಕಿ, ಬೇಳೆ, ತರಕಾರಿಗೆ ದೇವಸ್ಥಾನದ ದಿನಸಿ ಬಳಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶ್ರೀರಾಮಶಾಲೆಯ ಮಕ್ಕಳಿಂದ ಊಟ ಕಿತ್ತುಕೊಂಡಿದ್ದ ಸರ್ಕಾರ, ಈಗ ಕಾಂಗ್ರೆಸ್ ಕಾರ್ಯಕರ್ತರಿಗೇಕೆ ಊಟ ಕೊಡ್ತೀರಿ? ಎಂದು ಜನ ಪ್ರಶ್ನೆ ಮಾಡಿದ್ದಾರೆ. ವಾಟ್ಸಪ್- ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಊಟ ಎಲ್ಲಿಂದ ಬರುತ್ತಿದೆ ಎಂಬುದು ಗೊತ್ತಿಲ್ಲ. ಬಟ್ ಎಲ್ಲಿಂದ ಸರಬರಾಜಾದರೂ ಅದು ಊಟವೇ ತಾನೆ ಎಂದಿದ್ದಾರೆ. ಅಲ್ಲದೇ ಕಲ್ಲಡ್ಕ ಶಾಲೆಗೆ ಯಾಕೆ ಬಿಸಯೂಟ ಕೊಡಬೇಕು.. ಅದೇನು ಸರ್ಕಾರಿ ಶಾಲೆಯೂ ಅಲ್ಲ, ಅನುದಾನಿತ ಶಾಲೆಯೂ ಅಲ್ಲ ಎಂದು ಹೇಳಿದ್ದಾರೆ.