ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಕ್ಕೆ ವಿರೋಧ ಮಾಡ್ತೀರ, ಈಗ ನಾವು ನಿಮ್ಮ ಡಬ್ಬಿಂಗ್ ಸಿನೆಮಾವನ್ನು ಯಾಕೆ ವಿರೋಧ ಮಾಡಬಾರದು: ತಮಿಳು ಚಿತ್ರೋದ್ಯಮದಿಂದ ಕೆ.ಜಿ.ಎಫ್. ತಂಡಕ್ಕೆ ಪ್ರಶ್ನೆ!!

0
1072

ಬಹು ನಿರೀಕ್ಷಿತ ಕೆ.ಜಿ.ಎಫ್​ ಸಿನಿಮಾ ಬಿಡುಗಡೆಗೆ ದೇಶದೆಲ್ಲೆಡೆ ವಿರೋಧ ಕೇಳಿಬರುತ್ತಿದೆ..

ರಾಕಿಂಗ್​ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆ.ಜಿ.ಎಫ್​ ಸಿನಿಮಾದ ನಾಳೆಯಂದು ದೆಶ್ಯಾದಂತ ಬಿಡುಗಡೆಯಾಗುತ್ತಿದು ಅಭಿಮಾನಿಗಳು ಕಾರುತದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಕೂಡ ಅದ್ಧೂರಿಯಾಗಿ ಮೂಡಿ ಬಂದಿದೆ. ಇದೊಂದು ಕಡೆ ಯಾದರೆ ಈ ಸಿನಿಮಾ ಬಿಡುಗಡೆಗೆ ಹಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ವಿರೋಧ ಕೇಳಿ ಬರುತ್ತಿದೆ. ಇದು ಸಿನಿಮಾ ಪ್ರಿಯರಿಗೆ ಬೇಜಾರಿನ ಸಂಗತಿಯಾದರೂ ವಿರೋಧ ಮಾತ್ರ ಸತ್ಯವಾಗಿದೆ.

ಹೌದು ಕೆ.ಜಿ.ಎಫ್​ ಹವಾ ದೇಶದ ತುಂಬೆಲ್ಲ ಹರಡಿದರು ಅಕ್ಕ ಪಕ್ಕದ ರಾಜ್ಯದ ಜನರು ಈ ಸಿನಿಮಾ ಬಿಡುಗಡೆಗೆ ವಿರೋಧ ಮಾಡುತ್ತಿರುವುದು ಹಲವು ಕಾರಣಗಳಿಂದ ಎಂದು ತಿಳಿದಿದೆ. ಇದಕ್ಕೆ ಮುಖ್ಯಕಾರಣ ಯಶ್ ಅಂತೆ, ಈ ಹಿಂದೆ ಡಬ್ಬಿಂಗ್ ವಿರೋಧಿ ದ್ವನಿಯೆದ್ದಾಗ ಡಬ್ಬಿಂಗ್ ವಿರುದ್ಧ ಹೋರಾಟ ಮಾಡಿದ ರಾಕಿಂಗ್ ಸ್ಟಾರ್ ಯಶ್. ಈಗ ಅದೇ ಅವರ ಪಾಲಿಗೆ ಮುಳುವಾಗಿದೆ. ಇದೆ ಕಾರಣಕ್ಕಾಗಿ `ನಮ್ಮ ಸಿನಿಮಾಗಳು ಡಬ್ಬಿಂಗ್ ಆಗಿ ಬಿಡುಗಡೆಯಾಗಲು ಅಡ್ಡಿ ಮಾಡಿದ ಯಶ್ ನಟಿಸಿರೋ ಡಬ್ಬಿಂಗ್ ಸಿನಿಮಾವನ್ನು ನಾವ್ಯಾಕೆ ನೋಡಬೇಕು’ ಅಂತಾ ಸ್ವತ: ತಮಿಳು ಮತ್ತು ತೆಲುಗು ಸ್ಟಾರ್‌ಗಳು ಪ್ರಶ್ನಿಸುತ್ತಿದ್ದಾರೆ.

ಇಬ್ಬರ ದ್ವೇಷಕ್ಕೆ ಕೆ.ಜಿ.ಎಫ್ ಬಲಿಯಾಯಿತೆ?

ನಿರ್ಮಾಪಕ ವಿಶಾಲ್ ಮತ್ತು ವಿಜಯ್ ಸೇದುಪತಿ ನಡುವೆ ಇರುವ ದ್ವೇಷದ ರಿವೇಂಜ್! ತಿರಿಸಿಕೊಳ್ಳಲು ಕನ್ನಡ ಸಿನಿಮಾ ಬಲಿಯಾಗಿದೆ ಎಂದರೆ ತಪ್ಪಾಗಲಾರದು ಏಕೆಂದರೆ ಈಗ ತಮಿಳಿನ ಸೂಪರ್ ಸ್ಟಾರ್ ಆಗಿರುವ ವಿಜಯ್ ಸೇದುಪತಿ. ಕೆಲ ತಿಂಗಳುಗಳ ಹಿಂದೆ ತಮ್ಮ `96′ ಸಿನಿಮಾ ರಿಲೀಸಾಗಿತ್ತು. ಈ ಸಿನಿಮಾ ನಿರ್ಮಾಪಕರಿಗೆ ವಿಶಾಲ್ ನಾಲ್ಕು ಕೋಟಿ ರುಪಾಯಿ ಫೈನಾನ್ಸ್ ನೀಡಿದ್ದ. ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆದಕೂಡಲೇ ನೀಡಿದ ಹಣ ಕೊಡಬೇಕು ಅಂತ ಸಿನಿಮಾಕ್ಕೆ ತಕರಾರು ಮಾಡಿದ. ಆಗ ಸ್ವತಃ ವಿಜಯ್ ಸೇದುಪತಿ ನಿರ್ಮಾಪಕರ ಸಾಲವನ್ನು ತೀರಿಸಿ ಸಿನಿಮಾವನ್ನು ರಿಲೀಸ್ ಮಾಡಲು ಸಹಾಯ ಮಾಡಿದ್ದ. ಈ ವಿಷಯಕ್ಕೆ ಈಗ ಕನ್ನಡ ಸಿನಿಮಾಕ್ಕೆ ವಿರೋಧ ಮಾಡುತ್ತಿದ್ದಾರೆ.

ಡಬ್ಬಿಂಗ್ ವಿರೋಧ ಕೆ.ಜಿ.ಎಫ್-ಗೆ ಮುಳ್ಳಾ?

ಕರ್ನಾಟಕದ ಮೂಲದ ವಿಶಾಲ್ ತಮಿಳುನಾಡಿನ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದಾರೆ. ಆದಕಾರಣ ವಿಶಾಲ್ `ಕನ್ನಡದಿಂದ ಕೆ.ಜಿ.ಎಫ್ ಸಿನಿಮಾ ಬರ್ತಿದೆ. ದಯವಿಟ್ಟು ನೀವೆಲ್ಲ ಅದಕ್ಕೆ ಜಾಗ ಕೊಡಿ’ ಎಂದು ಕೇಳಿಕೊಳ್ಳುತ್ತಿದ್ದಾನೆ. ಇದು ಕಟ್ಟರ್ ತಮಿಳಿಗರಿಗೆ ಜ್ವಾಲೆ ಎಬ್ಬಿಸಿದೆ. `ನಮ್ಮ ಡಬ್ಬಿಂಗ್ ಸಿನಿಮಾಗಳನ್ನು ರಿಲೀಸ್ ಮಾಡಲು ಅಲ್ಲಿನವರು ಆಸ್ಪದ ಕೊಡುತ್ತಿಲ್ಲ. ತಮಿಳು ಭಾಷೆಯ ಸಿನಿಮಾವನ್ನೇ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದೀವಿ. ಬೇಕಿದ್ದರೆ ಕೆ.ಜಿ.ಎಫ್’ನ ಕನ್ನಡ ಭಾಷೆಯ ಸಿನಿಮಾವನ್ನೇ ತಮಿಳುನಾಡಿನಲ್ಲೂ ರಿಲೀಸ್ ಮಾಡಲಿ. ಆಗ ಎಷ್ಟು ಬೇಕಾದರೂ ಜಾಗ ಮಾಡಿಕೊಡ್ತೀವಿ. ಕನ್ನಡಿಗರು ನಮ್ಮ ಅಣ್ಮಮ್ಮಂದಿರಿದ್ದಂತೆ.’ ಅಂತಾ ಸ್ವತಃ ವಿಜಯ್ ಸೇದುಪತಿ ಹೇಳಿದ್ದಾರೆ, ಇದನ್ನು ನೋಡಿದರೆ ಕನ್ನಡದಲ್ಲಿ ಕನ್ನಡಿಗರು ಹಚ್ಚಿದ ಡಬ್ಬಿಂಗ್ ಕಿಡಿಗೆ ತಾವೇ ಬಲಿಯಾಗುತ್ತಿದ್ದಾರೆ ಅನ್ಸುತೆ.

ಕೆ.ಜಿ.ಎಫ್- ಗೆ ಸವಾಲಾದ ಅನ್ಯ ಭಾಷೆ ಸಿನಿಮಾಗಳು:

ಅದೇ ದಿನಾಂಕದಂದು ವಿಜಯ್ ಸೇದುಪತಿಯ ಸೀತಾಕಾತಿ ಸೇರಿದಂತೆ ಜಯಂರವಿ, ಶಿವಕಾರ್ತಿಕೇಯನ್ ನಟನೆಯ ಸಿನಿಮಾ.. ಇದರ ಜೊತೆಗೇ ರಜನೀಕಾಂತ್ ಅಳಿಯ ಧನುಷ್‌ನ ಮಾರಿ-೨ ಕೂಡಾ ಬಿಡುಗಡೆಯಾಗ್ತಿದೆ. ಹೀಗೆ ನಾಲ್ಕೈದು ದೊಡ್ಡ ಸಿನಿಮಾಗಳು ತಮಿಳುನಾಡಿನಲ್ಲಿ ಇದೇ ಸಂದರ್ಭದಲ್ಲಿ ತೆರೆ ಕಾಣುತ್ತಿದೆ. ಹಾಗೆಯೇ ಹಿಂದಿಯಲ್ಲಿ ಶಾರುಖ್ ಖಾನ್’ನ ಝೀರೋ ಇದೇ ದಿನ ಬಿಡುಗಡೆಯಾಗುತ್ತಿದೆ. ಶಾರುಖ್’ನ ಸಿನಿಮಾ ಬಿಡುಗಡೆ ಅಂದರೆ ಅಲ್ಲೆಲ್ಲಾ ಹಬ್ಬದಂತೆ. ಈಗ ಡಬ್ಬಿಂಗ್ ಸಿನಿಮಾವೊಂದು ಸವಾಲಾಗಿ ಬಂದು ನಿಲ್ಲುತ್ತದೆಂದಾಗ ಹಿಂದಿಯವರಿಗೂ ಮೆಣಸಿನಕಾಯಿ ಇಟ್ಟಂತೆ ಅನುಭವವಾಗುವುದು ಸಾಮಾನ್ಯ. ಇಷ್ಟೆಲ್ಲಾ ಸವಾಲುಗಳ ಮದ್ಯ ಯಶ್ ಅವರ ಕೆ.ಜಿ.ಎಫ್ ಯಶಸ್ವಿಯಾದರೆ ಅದು ನಿಜಕ್ಕೂ ಮೆಚ್ಚುವುದೆ.

Also read: ಕೆ.ಜಿ.ಎಫ್. ಕನ್ನಡದಲ್ಲಿ ಮಾತ್ರವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ.