ಸಾಲ ಬಾದೆಗೆ ಕೊಪ್ಪಳದ ಒಂದೇ ರೈತ ಕುಟುಂಬದ 6 ಜನ ಆತ್ಮಹತ್ಯೆ; ರೈತರ ಆತ್ಮಹತ್ಯೆಗೆ ಕೊನೆಯಿಲ್ಲವೇ??

0
541

ಸರ್ಕಾರವೇನೋ ರೈತರ ಸಾಲ ಮನ್ನಾ ಮಾಡಿದೇನೆ ಅಂತ ಹೇಳುತ್ತಿದೆ, ಇಷ್ಟಾದರೂ ಯಾಕೆ ಪ್ರತಿ ದಿನವೂ ರೈತರು ಸಾಯಿತ್ತಿದ್ದಾರೆ? ಇದಕ್ಕೆ ಸರ್ಕಾರದ ವಿಳಂಬ ಕಾರಣವೆ, ಇಲ್ಲ ರೈತರಿಗೆ ಜೀವನವೇ ಬೇಸರವಾಗಿದೆಯೇ ತಿಳಿಯುತ್ತಿಲ. ಆದರೆ ಸತ್ತ 100 ಕ್ಕೂ 100 ರೈತರು ಸಾಲಕ್ಕೆ ಹೆದರಿ ಸಾಯಿತ್ತಿದ್ದಾರೆ ಎಂದು ತಿಳಿಯುತ್ತಿದೆ. ಮೊದಲು ಮನೆಯ ಹಿರಿಯ ರೈತನೋಬ್ಬನೆ ಸಾಯುತ್ತಿದ್ದ ಅವನು ಸತ್ತ ನಂತರ ಮನೆಯಲ್ಲಿ ಹೆಂಡತಿ ಮಕ್ಕಳು ಮತ್ತಷ್ಟು ತೊಂದರೆಗೆ ಸಿಲುಕುವುದು ಅರಿತ ರೈತರು ಈಗ ಕುಟುಂಬ ಸಮೇತವಾಗಿ ಸಾಯಿತ್ತಿದ್ದಾರೆ.


Also read: ಪವಾಡಗಳ ಬಗ್ಗೆ ನಂಬಿಕೆ ಹುಟ್ಟಿಸುವಂಥ ಘಟನೆ; ನಾಲ್ಕನೇ ಮಹಡಿಯಿಂದ ಬಿದ್ದರು ಬದುಕುಳಿದ ಮಗು ಆಶ್ಚರ್ಯ ಮೂಡಿಸಿದೆ..

ಕೊಪ್ಪಳ ತಾಲ್ಲೂಕಿನ ಮೆಟಗಲ ಗ್ರಾಮದಲ್ಲಿ ಇಂದು ಮುಂಜಾನೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಶೇಖರಯ್ಯ ಬೀಡನಾಳ ಪತ್ನಿ ಜಯಮ್ಮ, ಮಕ್ಕಳಾದ ಬಸಮ್ಮ, ಗೌರಮ್ಮ, ಸಾವಿತ್ರಿ, ಪಾರ್ವತಿ ಎಂದು ಗುರುತಿಸಲಾಗಿದೆ. ಈ ರೈತ ಪತ್ನಿ ಮತ್ತು ಪುತ್ರಿಯರಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮತ್ತು ಪುತ್ರಿಯರಿಗೆ ವಿಷವುಣಿಸಿ ಶೇಖರಯ್ಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಶೇಖರಯ್ಯ ಸಾಕಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.


Also read: ಪೆಟ್ರೋಲ್-ಡೀಸೆಲ್ ಬೆಲೆ 80ಕ್ಕಿಂತ ಹೆಚ್ಚು ಹೋದಾಗ ಮೋದಿಗೆ ಬೈದಿದ್ದ ಜನತೆ ಈಗ ಕುಮಾರಸ್ವಾಮಿ ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿ ಮಾಡ್ತಿರೋದಕ್ಕೆ ಏನಂತಾರೆ?

ಈ ರೈತ ಮಕ್ಕಳ ಮದುವೆಗೆ ಮತ್ತು ಕುಟುಂಬದ ನಿರ್ವಹಣೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದಾನೆ. ಅದೇ ಸಾಲಕ್ಕಾಗಿ ಈಗಾಗಲೇ ತನ್ನ ಜಮೀನಿನಲ್ಲಿ ಒಂದಿಷ್ಟು ಜಮೀನು‌ ಮಾರಿದ್ದಾನೆ. ಇನ್ನುಳಿದ ಎರಡು ಎಕರೆ ಜಮೀನು ಮಾರಾಟ‌ ಮಾಡಲು ತಯಾರಿ ನಡೆಸಿದ್ದ ಅದು ಸ್ವಲ್ಪ ವಿಳಂಬವಾದರಿಂದ. ಸಾಲ ಬಾಧೆಯಿಂದ ಹೆಚ್ಚಾಗಿ ಶೇಖರಯ್ಯ ಈ ನಿರ್ಧಾರ ಮಾಡಿದ್ದಾನೆ ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ತಿಳಿಸಿದ್ದು, ಹಿರಿಯ ಮಗಳು ಬಸಮ್ಮ ಹಾಗೂ ಗೌರಮ್ಮ ಅವರನ್ನು ವಿವಾಹವಾಗಿದ್ದು, ಎಳ್ಳ ಅಮವಾಸೆ ನಿಮಿತ್ತ ತವರು ಮನಗೆ ಆಗಮಿಸಿದ್ದರು. ಇವರ ಮದುವೆಗೆ ಗ್ರಾಮದಲ್ಲೂ ಸಾಲ ಮಾಡಿಕೊಂಡಿದ್ದ ಶೇಖರಯ್ಯ, ಮೂರನೆ ಮಗಳ ವಿವಾಹಕ್ಕೆ ಸಿದ್ದತೆ ನಡೆಸಿದ್ದರು. ಹೀಗಾಗಿ ಗ್ರಾಮಸ್ಥರ ಬಳಿ ಸಾಲ ಕೇಳುತ್ತಿದ್ದರು ಎಂದು ಹೇಳಲಾಗುತ್ತಿದೆ.


Also read: ಪಾಲಕರೇ ಹುಷಾರ್; ಇನ್ಮುಂದೆ 1 ರಿಂದ 8ನೇ ತರಗತಿವರೆಗಿನ ನಿಮ್ಮ ಮಕ್ಕಳನ್ನೂ ಫೇಲ್‌ ಮಾಡಬಹುದು..

ಸರ್ಕಾರ ಮಾಡುವ ತಪ್ಪು ಕೆಲಸ ಯಾವುದು ಗೊತ್ತ?

ಈ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಕೃಷಿ ಸಚಿವ ಶಿವಶಂಕರರೆಡ್ಡಿ, ಇದೊಂದು ದಾರುಣ ಘಟನೆ. ಒಂದೇ ಮನೆಯಲ್ಲಿ ಈ ರೀತಿಯ ಘಟನೆ ನಡೆಯ ಬಾರದಿತ್ತು. ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಈ ರೈತ ಕುಟುಂಬಕ್ಕೆ ಕಿರುಕುಳ ನೀಡಿದ ಸಾಲಗಾರರು ಯಾರು ಇವರಿಂದ ಯಾವ ರೀತಿಯ ಸಾಲ ಪಡೆದಿದ್ದರು, ಎಂದು ವಿಚಾರಣೆ ಮಾಡಿ ಸಾಲಗಾರರಿಗೆ ಸರಿಯಾದ ಶಿಕ್ಷೆ ನಿಡುವ ಬಗ್ಗೆ ಎಲ್ಲಿವು ತಿಳಿಸುವುದಿಲ್ಲ. ಸರ್ಕಾರ ಮಾಡುವ ದೊಡ್ಡ ತಪ್ಪು ಇದೆ ಅಂತ ಹೇಳಬಹುದು, ಒಂದು ರೈತ ಆತ್ಮಹತ್ಯೆ ಮಾಡಿಕೊಂಡಾಗೆ ಅವನಿಗೆ ಸಾಲ ಇಡಿದ ಸಾಲಗಾರರನ್ನು ಪತ್ತೆ ಹಚ್ಚಿ ಅವರಿಗೆ ತಕ್ಕ ಪಾಟವನ್ನು ನೀಡಿದರೆ ಇದನ್ನು ತಿಳಿದ ಹಲವಾರು ಜನರು ರೈತರ ತಂಟೆಗೆ ಹೋಗುವುದಿಲ್ಲ ಸರ್ಕಾರ ಮೊದಲು ಈ ಕ್ರಮ ಕೈಗೊಳ್ಳಲಿ ಎಂಬುವುದು ರಾಜ್ಯದ ಎಲ್ಲ ರೈತರ ಅಭಿಪ್ರಾಯವಾಗಿದೆ.