ಎಸ್ ಎಸ್ ಎಲ್ ಸಿ ಪಾಸಾದವರಿಗೆ ಕೆಪಿಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..!

0
833

ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ವಿವಿಧ ಕೇಂದ್ರಗಳಲ್ಲಿ ಖಾಲಿ ಇರುವ 79 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿರುವ ಒಟ್ಟು ಹುದ್ದೆ: 79

ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಅಕ್ಟೋಬರ್ 2017

ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ: karnatakapower.com

ಹುದ್ದೆಗಳ ವಿವರ:

1. ಹುದ್ದೆ: ಅಪರೇಟಿವ್ (70)
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಹಾಗೂ ಲೈಸನ್ಸ್ ಹೊಂದಿರಬೇಕು ಜತೆಗೆ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: 9540 ರಿಂದ 27455 ರು. ತಿಂಗಳಿಗೆ.
ವಯೋಮಿತಿ: ಅಕ್ಟೋಬರ್ 21, 2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.

2. ಸಹಾಯ ಅಪರೇಟಿವ್ ಹುದ್ದೆ(9)
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಹಾಗೂ ಲೈಸನ್ಸ್ ಹೊಂದಿರಬೇಕು ಜತೆಗೆ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: 8390 ರಿಂದ 22845 ರು. ತಿಂಗಳಿಗೆ.
ವಯೋಮಿತಿ: ಅಕ್ಟೋಬರ್ 21, 2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.
ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.