ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ವಿವಿಧ ಹುದ್ದೆಗಳ ಅರ್ಜಿ ಆಹ್ವಾನ..ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು..!!

1
1192

ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅವಶ್ಯವಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟು ಹುದ್ದೆಗಳು 18

ಹೆಚ್ಚಿನ ಮಾಹಿತಿಗಾಗಿ karnatakapower.com

ಹುದ್ದೆಗಳ ವಿವರ:
ಡಿಜಿಎಂ, ಮೆಡಿಕಲ್ ಆಫೀಸರ್, ಅಕೌಂಟ್ಸ್ ಆಫೀಸರ್, ವೆಲ್ಫೇರ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಸೆಪ್ಟೆಂಬರ್ 23

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ನೇಮಕಾತಿ ಹುದ್ದೆಗಳ ವಿವರ

ಡೆಪ್ಯುಟಿ ಜನರಲ್ ಮ್ಯಾನೇಜರ್ (ಸಿಎ & ಸಿಎಸ್)-01 ಹುದ್ದೆ

 • ವೇತನ ಶ್ರೇಣಿ: ರೂ.32725-57575/-
 • ವಿದ್ಯಾರ್ಹತೆ ಕರ್ನಾಟಕದಲ್ಲಿನ ಅಂಗೀಕೃತ ವಿಶ್ವವಿದ್ಯಾಲಯದಿಂದ ಮೊದಲನೇ ದರ್ಜೆಯಲ್ಲಿ ಪದವಿ (ರೆಗ್ಯುಲರ್) ಹೊಂದಿರಬೇಕು.
 • ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರಿಸ್ ಆಫ್ ಇಂಡಿಯಾ ಸಂಸ್ಥೆಯಿಂದ ಅಸೋಸಿಯೇಟ್ ಮೆಂಬರ್ಷಿಪ್ ಸರ್ಟಿಫಿಕೇಟ್ ಹೊಂದಿರಬೇಕು.
 • ಸಾರ್ವಜನಿಕ ವಲಯದ ಸಂಸ್ಥೆಯ ಸೆಕ್ರೆಟರಿಯಲ್ ವಿಭಾಗದಲ್ಲಿ ಕಾರ್ಯನಿರ್ವಾಹಕರಾಗಿ 5 ವರ್ಷಗಳ ಅನುಭವ ಹೊಂದಿರಬೇಕು.

ಫ್ಯಾಕ್ಟರಿ ಮೆಡಿಕಲ್ ಆಫೀಸರ್-06 ಹುದ್ದೆಗಳು

 • ವೇತನ ಶ್ರೇಣಿ: ರೂ.20895-49895/-
 • ವಿದ್ಯಾರ್ಹತೆ ಕರ್ನಾಟಕದಲ್ಲಿನ ಅಂಗೀಕೃತ ವೈದ್ಯಕೀಯ ಸಂಸ್ಥೆ / ಕಾಲೇಜಿನಲ್ಲಿ ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕ ಪದವಿ (ಎಂಬಿಬಿಎಸ್) ಹೊಂದಿರಬೇಕು.
 • ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡಿರುವ ಕೈಗಾರಿಕಾ ಸ್ವಾಸ್ಥ್ಯದಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಹೊಂದಿರಬೇಕು.
 • ಖಾಸಗಿ ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ/ಆರೋಗ್ಯ ಕೇಂದ್ರ ಗಳಲ್ಲಿ ಎರಡು ವರ್ಷಗಳ ಅನುಭವ (ಇಂಟರ್ನಶಿಪ್ ತರಬೇತಿ ಪಡೆದಿರಬೇಕು)

ಅಕೌಂಟ್ಸ್ ಆಫೀಸರ್-02 ಹುದ್ದೆಗಳು

 • ವೇತನ ಶ್ರೇಣಿ: ರೂ.20895-49895/-
 • ವಿದ್ಯಾರ್ಹತೆ ಪ್ರಥಮ ದರ್ಜೆಯಲ್ಲಿ ಪದವಿಯ ಜೊತೆಗೆ ಮೆಂಬರ್ಶಿಪ್ ಆಫ್ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಡಬ್ಲ್ಯುಎ) ಅಥವಾ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ನಲ್ಲಿ ತೇರ್ಗಡೆ ಹೊಂದಿರಬೇಕು.

ವೆಲ್ಫೇರ್ ಆಫೀಸರ್-09 ಹುದ್ದೆಗಳು

 • ವೇತನ ಶ್ರೇಣಿ: ರೂ.19055-43995/-
 • ವಿದ್ಯಾರ್ಹತೆ ಕರ್ನಾಟಕ ಅಂಗೀಕೃತ ವಿಶ್ವವಿದ್ಯಾಲಯದಿಂದ ಸೋಷಿಯಲ್ ವರ್ಕ್ (ಎಂಎಸ್ ಡಬ್ಲ್ಯು) ಸ್ನಾತಕೋತ್ತರ ಪದವಿ ಪಡೆದಿರಬೇಕು.
 • ಹೆಸರಾಂತ ಉದ್ದಿಮೆಗಳಲ್ಲಿ ವೆಲ್ಫೇರ್ ಆಫೀಸರ್ ಹುದ್ದೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/- ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ರೂ.250/-

ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 30-08-2017

ಅರ್ಜಿ ಸಲ್ಲಿಸಲು ಮತ್ತು ಚಲನ್ ಪಡೆಯಲು ಕೊನೆಯ ದಿನಾಂಕ: 23-09-2017

ಅಂಚೆ ಕಛೇರಿ ಮೂಲಕ ಹಣ ಪಾವತಿಸಲು ಕೊನೆಯ ದಿನಾಂಕ: 26-09-2017

ವಯೋಮಿತಿ:
ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ (ಮೀಸಲಾತಿಗೆ ತಕ್ಕಂತೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ)