ಕಿಚ್ಚನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೆಪಿಎಲ್ 6ನೇ ಸೀಸನ್’​ನಿಂದ ಕಿಚ್ಚ ಸುದೀಪ್ ಅಂಡ್ ಟೀಮ್ ಕಿಕ್ ಔಟ್..!

0
634

ಹೌದು ಕಿಚ್ಚನ ಅಭಿಮಾನಿಗಳಿಗೆ ಇದು ಸಹಿಸಿಕೊಳ್ಳಕೆ ಆಗದ ವಿಚಾರವಾಗಿದೆ. ಪ್ರತಿ ಬಾರಿಯೂ ಕಿಚ್ಚನ ಟೀಮ್ ಕೆಪಿಎಲ್ ನಲ್ಲಿ ಭಾಗವಹಿಸುತಿತ್ತು ಆದ್ರೆ ಈ ಬಾರಿಯ ಸೀಸನ್ ನಲ್ಲಿ ಆಡುವ ಅವಕಾಶ ತಪ್ಪಿದೆ. ಈ ವಿಚಾರವಾಗಿ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

source:youtube

ಕೆಪಿಎಲ್ 6ನೇ ಸೀಸನ್’​ನಿಂದ ನಟ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್​​ ತಂಡ ಹೊರಬಿದ್ದಿದೆ. ಈ ಮೂಲಕ ಸಿನಿಮಾ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಕಳೆದ ಮೂರು ವರ್ಷ ಕೆಪಿಎಲ್’​ನಲ್ಲಿ ಆಡಿ ಮನರಂಜನೆ ನೀಡಿದ್ದ ಚಿತ್ರ ನಟರ ತಂಡ ಈ ಸಲ ಆಡ್ತಿಲ್ಲ. ಕೆಪಿಎಲ್’​ನಲ್ಲಿ ಆಡುವಂತೆ ರಾಕ್​ ಸ್ಟಾರ್ಸ್​ ತಂಡದೊಂದಿಗೆ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

source:youtube

ಅದರಂತೆ ಮೂರು ವರ್ಷ ಆಡಿಸಲಾಗಿತ್ತು. ಈ ಸಲ ಸುದೀಪ್ ತಂಡವನ್ನ ಆಹ್ವಾನಿಸಿಲ್ಲ. ಹೊಸ ಬಿಡ್’​ನೊಂದಿಗೆ ಹೊಸ ತಂಡಗಳನ್ನ ಸಿದ್ದಪಡಿಸಿದ್ದೇವೆ. ಹೀಗಾಗಿ ಈ ಸಲ 7 ತಂಡಗಳು ಕೆಪಿಎಲ್’​ನಲ್ಲಿ ಆಡಲಿವೆ ಎಂದು ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿಕೆ ನೀಡಿದ್ದಾರೆ.

source:youtube

ರಾಕ್ ಸ್ಟಾರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಟೂರ್ನಿಯಿಂದ ಔಟ್ ಆದರೆ, ಕಲ್ಯಾಣಿ ಬ್ಲಾಸ್ಟರ್ಸ್ ಎಂಬ ಹೊಸ ತಂಡವು ಸೇರ್ಪಡೆಯಾಗಿದೆ. ಕಲ್ಯಾಣಿ ಮೋಟಾರ್ಸ್ ಸಂಸ್ಥೆ ಒಡೆತನದ ಕಲ್ಯಾಣಿ ಬ್ಲಾಸ್ಟರ್ಸ್ ತಂಡವು ಈ ಸೀಸನ್’ನಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದೆ.

ಕೆಪಿಎಲ್-7ರಲ್ಲಿ ಆಡುವ ತಂಡಗಳು: 1) ಕಲ್ಯಾಣಿ ಬ್ಲಾಸ್ಟರ್ಸ್ 2) ಬಿಜಾಪುರ ಬುಲ್ಸ್ 3) ಬೆಳಗಾವಿ ಪ್ಯಾಂಥರ್ಸ್ 4) ಬಳ್ಳಾರಿ ಟಸ್ಕರ್ಸ್ 5) ಹುಬ್ಬಳ್ಳಿ ಟೈಗರ್ಸ್ 6) ಮೈಸೂರು ವಾರಿಯರ್ಸ್ 7) ನಮ್ಮ ಶಿವಮೊಗ್ಗ

ಹೊರಗುಳಿದ ತಂಡಗಳು: 1) ರಾಕ್ ಸ್ಟಾರ್ಸ್ 2) ಮಂಗಳೂರು ಯುನೈಟೆಡ್