ಕ್ರಿಕೆಟ್‌ ಲೋಕವನ್ನು ಬೆಚ್ಚಿ ಬೀಳಿಸಿದ್ದ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್-ನಲ್ಲಿ ಸಿನಿಮಾದ ಈ ನಟಿಯರಿಂದಲೇ ನಡೆದಿದೆ ಅಂತೆ ಮ್ಯಾಚ್ ಫಿಕ್ಸಿಂಗ್!!

0
259

ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಕ್ರಿಕೆಟ್‌ ಲೋಕವನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ಸಿನಿಮಾ ರಂಗವನ್ನೂ ಪ್ರವೇಶಿಸುವ ಸುಳಿವು ದೊರೆತಿದೆ. ಇದರ ಬೆನ್ನಿಗೆ ತನಿಖೆ ಅಂತ್ಯಗೊಳ್ಳುವವರೆಗೆ ಕೆಪಿಎಲ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಕೆಎಸ್‌ಸಿಎ ಅಧಿಕೃತವಾಗಿ ಹೇಳಿದೆ. ಮ್ಯಾಚ್ ಬಳಿಕ ನಡೆಯುವ ಪಾರ್ಟಿಯಲ್ಲಿ ಚಲನಚಿತ್ರರಂಗದ ಕೆಲ ನಟ-ನಟಿಯರು ಭಾಗವಹಿಸಿದ್ದಾರೆ. ಈ ಮೂಲಕ ಆಟಗಾರರು ಹಾಗೂ ಆಡಳಿತ ಮಂಡಳಿಯ ಜೊತೆ ಸಿನಿಮಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಭಾಸ್ಕರರಾವ್ ಹೇಳಿದ್ದಾರೆ.

Also read: ಕರ್ನಾಟಕ ಕ್ರಿಕೆಟ್-ಗೆ ಕರಾಳ ದಿನ; ಫಿಕ್ಸಿಂಗ್ ಆರೋಪ ಹೊತ್ತು ಸಿ.ಎಂ.ಗೌತಮ್, ಅಬ್ರಾರ್ ಕಾಝಿ ಸೇರಿದಂತೆ ೭ ಜನ ಅರೆಸ್ಟ್!

ಕೆಪಿಎಲ್ ಫಿಕ್ಸಿಂಗ್‌-ನಲ್ಲಿ ನಟಿಯರ ಲಿಂಕ್?

ಹೌದು ಕೆಪಿಎಲ್ ಕೆಪಿಎಲ್ ಸ್ಪಾಟ್‌ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಸೋಮವಾರ ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂದೆ ನಿವಾಸದ ಮೇಲೆ ಸಿಸಿಬಿ ದಾಳಿ ಮಾಡಿತ್ತು.ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ಮಹತ್ವದ ದಾಖಲೆಗಳನ್ನು ಸಿಸಿಬಿ ವಶಪಡಿಸಿಕೊಂಡಿತ್ತು. ಪ್ರಕರಣದ ತನಿಖೆ ಬಗ್ಗೆ ಇವತ್ತು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆಯನ್ನು ನೀಡಿದ್ದಾರೆ. ಸಾಕ್ಷಿಗಳ ಆಧಾರದಲ್ಲಿ ನಿನ್ನೆ ಶಿಂಧೆಯನ್ನು ಬಂಧಿಸಲಾಗಿದೆ ಎಂದು ಕಮಿಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.

ಆದರೆ ಇದರಲ್ಲಿ ಮ್ಯಾಚ್ ಬಳಿಕ ನಡೆಯುವ ಪಾರ್ಟಿಯಲ್ಲಿ ಚಲನಚಿತ್ರರಂಗದ ಕೆಲ ನಟ-ನಟಿಯರು ಭಾಗವಹಿಸಿದ್ದಾರೆ. ಈ ಮೂಲಕ ಆಟಗಾರರು ಹಾಗೂ ಆಡಳಿತ ಮಂಡಳಿಯ ಜೊತೆ ಸಿನಿಮಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ಅವರಿಗೆಲ್ಲ ಹಣದ ಮೂಲ ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ಎರಡು ಸಿನಿಮಾ ಮಾಡಿದ ತಕ್ಷಣ ಅಷ್ಟೊಂದು ಹಣ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಭಾಸ್ಕರರಾವ್ ಅವರು, ಕ್ರಿಕೆಟಿಗರ ಜೊತೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿರುವ ನಟ-ನಟಿಯರನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Also read: ಪಾಕಿಸ್ತಾನಿ ಕ್ರಿಕೆಟಿಗರಿಗೆ ಬಾಡಿಗೆ ಹಣ ಬೇಡವೆಂದ ಭಾರತೀಯ ಟ್ಯಾಕ್ಸಿ ಡ್ರೈವರ್; ಡ್ರೈವರ್ ಅನ್ನು ಕರೆದುಕೊಂಡು ಊಟ ಮಾಡಿದ ಪಾಕಿಸ್ತಾನಿ ಆಟಗಾರರು.!

ಒಂದು ವೇಳೆ ಯಾರಾದರೂ ಆ ರೀತಿ ಇದರಲ್ಲಿ ಭಾಗಿಯಾಗಿದ್ದೇ ಆದರೆ ಅವರು ಪೊಲೀಸರ ಮುಂದೆ ಹಾಜರಾಗಿ ಅಪ್ರೂವರ್ ಆದರೆ ಅವರನ್ನು ಹುಡುಕಿಕೊಂಡು ಪೊಲೀಸರು ಮನೆ ಬಾಗಿಲಿಗೆ ಹೋಗುವುದನ್ನು ತಡೆಯಬಹುದಾಗಿದೆ. ಇಲ್ಲದೆ ಹೋದರೆ ಮನೆ ಬಾಗಿಲಿಗೆ ಪೊಲೀಸರು ಹುಡುಕಿಕೊಂಡು ಹೋಗುವುದು, ಬಂಧಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆಟಗಾರರು ಮುಂದೆ ಬಂದರೆ ಇದನ್ನು ಪರಿಗಣಿಸುತ್ತೇವೆ ಎಂದು ಆಯುಕ್ತರು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರು, ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ತರಬೇತುದಾರ ಸುಧೀಂದ್ರಶಿಂಧೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸುಧೀಂದ್ರ ಶಿಂಧೆ ಅವರು ಬೆಂಗಳೂರಿನ ಜಯನಗರದಲ್ಲಿ ಸೋಶಿಯಲ್ ಕ್ರಿಕೆಟ್ ಕ್ಲಬ್ ನಡೆಸುತ್ತಿದ್ದರು. ಅಶ್ವಕ್‍ಥಾರ್ ಆಲಿ ಆ ಕ್ಲಬ್‍ನಲ್ಲಿ ಆಡುವ ಆಟಗಾರರಿಗೆ ಸಹಾಯ ಮಾಡಿ ಪ್ರಾಯೋಜಕತ್ವ ನೀಡುತ್ತಿದ್ದರು. ಈ ಕ್ಲಬ್‍ನಲ್ಲಿ ತರಬೇತಿ ಪಡೆದ ಬಹಳಷ್ಟು ಮಂದಿ ಆಟಗಾರರು ಕೆಪಿಎಲ್‍ನ ವಿವಿಧ ತಂಡಗಳಲ್ಲಿ ಆಟವಾಡಿದ್ದಾರೆ. ಕ್ಲಬ್ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ಕಳುಹಿಸಿ ಅವರಿಂದ ಮ್ಯಾಚ್ ಫಿಕ್ಸಿಂಗ್ ಮಾಡಿಸಲಾಗುತ್ತಿತ್ತು ಎಂದು ತನಿಖೆ ವೇಳೆ ತಿಳಿದುಬಂದಿರುವುದಾಗಿ ಸಂದೀಪ್ ಪಾಟೀಲ್ ಹೇಳಿದರು. ಆದರೆ ಇದರಲ್ಲಿ ಒಂದು ಪ್ರಶ್ನೆ ಎಂದರೆ ಆಟಗಾರರು ನಟಿಯರ ಮೇಲಿನ ಮೋಹಕ್ಕೆ ಮ್ಯಾಚ್ ಫಿಕ್ಷಿಂಗ್ ಮಾಡಿಕೊಂಡರ? ಇಲ್ಲ ನಟಿಯರೇ ಹಣಕ್ಕಾಗಿ ಆಟಗಾರರ ಹತ್ತಿರ ಸಂಬಂಧ ಬೆಳೆಸಿದ್ರಾ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ.