ನೆನ್ನೆಯಿಂದ ಶುರುವಾಗಿದೆ ಅಮೋಘ ಕ್ರೀಡಾಕೂಟ ಕೆ.ಪಿ.ಎಲ್. ಶುರು!! ನಿಮ್ಮ ನೆಚ್ಚಿನ ತಂಡ ಯಾವುದು??

0
617

ಕೆ.ಪಿ.ಎಲ್. 2018 ಕ್ರಿಕೆಟ್ ಪ್ರಿಯರಿಗೆ ಸ್ವಾತಂತ್ರ ದಿನದದ್ದು ಬಿಸಿ ಬಿಸಿ KPL ಕ್ರಿಕೆಟ್ಟೂ ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ ಈ ಉದ್ಘಾಟನಾ ಸಮಾರಂಭ 5.30ಕ್ಕೆ ನಡೆಯಲಿದ್ದು, ಕನ್ನಡ ಚಿತ್ರರಂಗವೇ ದಾವಿಸಲಿದೆ ಅದರಂತೆ ನಟಿ ರಾಗಿಣಿ ದ್ವಿವೇದಿ, rapper ಚಂದನ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅವರ ಉಪಸ್ಥಿತಿಯಲ್ಲಿ ಕೆಪಿಎಲ್ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ಉದ್ಘಾಟನಾ ಪಂದ್ಯ 6.45ಕ್ಕೆ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಬೆಂಗಳೂರು ಬ್ಲಾಸ್ಟರ್ಸ್ ಎದುರಿಸಲಿದೆ ಎಂದು KSCA ತಿಳಿಸಿದೆ.

ರಾಜ್ಯದ ಮೂರು ನಗರಗಳಲ್ಲಿ ಕೆಪಿಎಲ್ 7 ನೇ ಆವೃತಿಯ ಪಂದ್ಯಗಳು ನಡೆಯಲಿವೆ ಆ. 15 ರಿಂದ 17 ರ ವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಮೂರು ಪಂದ್ಯಗಳು ಏರ್ಪಾಟಾಗಿವೆ ನಂತರ KLP ಹಬ್ಬ ಹುಬ್ಬಳ್ಳಿಗೆ ಕಾಲಿರಿಸಲಿದ್ದು ಆ. 19 ರಿಂದ 26 ರವರಗೆ ಒಟ್ಟು 11 ಪಂದ್ಯಗಳು ಹುಬ್ಬಳ್ಳಿಯಲ್ಲಿ ರಾಜಾನಗರದಲ್ಲಿರುವ KACA ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಆ ಬಳಿಕ, ಆ 28 ರಿಂದ ಸೆ. 6 ರವರೆಗೆ ಲೀಗ್ ಮತ್ತು ನಾಕ್ ಔಟ್ ಮಾದರಿಯ ಒಟ್ಟು 10 ಪಂದ್ಯಗಳು ಮೈಸೂರುರಿನ SNRW ಕ್ರೀಡಾಂಗಣ ನಡೆಯಲಿವೆ. ಅರಮನೆ ನಗರಿಯಲ್ಲಿ ಈ ಬಾರಿ ಸೆಮಿಫೈನಲ್ಸ್ ಮತ್ತು ಫೈನಲ್ ನೆಡೆಯಿತ್ತಿರುವುದು ವಿಶೇಷ.
ಇನ್ನು ಪ್ರೆಕ್ಷಕರಗಂತೂ ಭರಪೂರ ಮನೋರಂಜನೆ. ಈ ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ‘ಬಿಸಿ ಬಿಸಿ ಕ್ರಿಕೆಟ್ಟೂ’ ಘೋಷವಾಕ್ಯ ದೊಂದಿಗೆ ಬಿಸಿ ಬಿಸಿ ಕಜ್ಜಾಯ ನೀಡುವ ವ್ಯೆಭಾವೊಪೆತ ಹಾಗೂ ವರ್ಣರಂಜಿತವಾಗಿದೆ. ಮತ್ತು ಈ KPL ನಲ್ಲಿ ಆಡುವ ತಂಡಗಳು ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಲಯನ್ಸ್ ಹಾಗ್ ಬೆಂಗಳೂರು ಬ್ಲಾಸ್ಟರ್ಸ್. ಒಟ್ಟು 7 ತಂಡಗಳು ಆಕರ್ಷಕ ಟ್ರೋಫಿಗಾಗಿ ತಮ್ಮ ಸಾಮರ್ಥ್ಯದ ಪ್ರದರ್ಶನ ಮಾಡಲಿವೆ.

ಉದ್ಘಾಟನಾ ಪಂದ್ಯದಲ್ಲಿ ತಂಡಗಳಾದ ಬೆಳಗಾವಿ ಪ್ಯಾಂಥರ್ಸ್, ಬೆಂಗಳೂರು ಬ್ಲಾಸ್ಟರ್ಸ್ ಆಟಗಾರರು ಪರಿಚಯ ಹೀಗಿದೆ.
ಬೆಳಗಾವಿ ಪ್ಯಾಂಥರ್ಸ್
ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ವಿ‍ಷ್ಣು ಪ್ರಿಯನ್, ಅಮನ್ ಖಾನ್, ರಕ್ಷಿತ್ ಎಸ್, ನಿಧೀಶ್ ಎಂ, ನಿಕಿನ್ ಜೋಶ್, ಅಕ್ಷಯ್ ಬಲ್ಲಾಳ್, ಶ್ರೇಯಸ್ ಬಿಎಂ, ಶುಭಾಂಗ್ ಹೆಗ್ಡೆ, ದರ್ಶನ್ ಮಾಚಯ್ಯ, ಸೌರಭ್ ಗೌಡ, ಶರತ್ ಎಚ್.ಎಸ್,
ಬೆಂಗಳೂರು ಬ್ಲಾಸ್ಟರ್ಸ್
ರಾಬಿನ್ ಉತ್ತಪ್ಪ, ವಿಶ್ವನಾಥ್, ಅವಿನಾಶ್, ಕೆಬಿ ಪವನ್, ಗೌರವ್ ಧಿಮಾನ್, ವಿನೀತ್ ಯಾದವ್, ಭರತ್ ದೇವರಾಜ್, ಅರ್ಷ್ ದೀಪ್ ಸಿಂಗ್, ಆನಂದ್ ದೊಡ್ಡಮನಿ, ಮನೋಜ್ ಭಂಡಾಜೆ, ಪಲ್ಲವ್ ಕುಮಾರ್, ಶರಣ್ ಗೌಡ, ಉಳಿಸಿಕೊಂಡ ಆಟಗಾರರು: (ಪೂಲ್ ಎ) ಪವನ್ ದೇಶ್ ಪಾಂಡೆ, ಮಿತ್ರಕಾಂತ್ ಯಾದವ್. (ಪೂಲ್ ಬಿ) ಕೌಶಿಕ್ ವಿ, ಅಭಿಷೇಕ್ ಭಟ್.

ಈ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್‍ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರವಾಗುತ್ತೆ. ಈ ಪದ್ಯಾವಳಿಗೆ, ಮಳೆಯ ಭೀತಿ ಇದ್ದೇ ಇದೆ ಈ ದಿನ ಕೂಡ ಮಳೆಬರುವ ಸಂಭವದ ಕುರಿತಾಗಿ ವರದಿ ಇರುವುದರಿಂದ ಬ್ಲಾಸ್ಟರ್ಸ್ ಮತ್ತು ಪ್ಯಾಂಥರ್ಸ್ ನಡುವಣ ಪದ್ಯಕ್ಕೆ ಅದಚನೆಯಾಗುವ ಸಾಧತ್ಯೆ ಇದೆ ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರು ಇಂಗಿಸುವ ಸೂಪರ್ ವ್ಯವಸ್ಥೆ ಇದ್ದು, ಪಂದ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಕ್ಯೂರೆಟರ್ ನೀಡಿದ್ದಾರೆ.