ಪಿಯುಸಿ/ಐಟಿಐ/ಡಿಪ್ಲೊಮಾ ಮತ್ತು ಡಿಗ್ರಿ ಪಾಸ್ ಆದವರಿಗೆ ಸರ್ಕಾರಿ ನೌಕರಿ….. ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು..!!

0
987

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದಾರೆ..ಕೊನೆ ದಿನಾಂಕ ಅಕ್ಟೋಬರ್ 7 ಬೇಗ ಅಪ್ಲೈ ಮಾಡಿ..

ಒಟ್ಟು ಖಾಲಿ ಇರುವ ಹುದ್ದೆಗಳು.

  • ಪ್ರಥಮ ದರ್ಜೆ ಸಹಾಯಕರು – 507
  • ದ್ವಿತೀಯ ದರ್ಜೆ ಸಹಾಯಕರು- 551

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ 1/9/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7/10/2017
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 9/10/2017

ಅರ್ಜಿಯನ್ನು ಆಯೋಗದ ಅಂತರ್ಜಾಲ www.kpsc.kar.nic.in ನಲ್ಲಿ online ಮೂಲಕ ಭರ್ತಿ ಮಾಡಿ, ಪರೀಕ್ಷಾ ಶುಲ್ಕವನ್ನು ಅಂಚೆ ಕಛೇರಿಯ ಕೆಲಸದ ವೇಳೆಯೊಳಗೆ ಕರ್ನಾಟಕ ರಾಜ್ಯದ ಯಾವುದೇ e-payment post office ನಲ್ಲಿ ಪಾವತಿ ಮಾಡಬಹುದು.

ಪರೀಕ್ಷಾ ಶುಲ್ಕ

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 300ರೂ
  • ಪ್ರವರ್ಗ 2a 2b 3a 3b ಗೆ ಸೇರಿದ ಅಭ್ಯರ್ಥಿಗಳಿಗೆ 150ರೂ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಪರೀಕ್ಶಾ ಶುಲ್ಕ ಇರುವುದಿಲ್ಲ

ಶೈಕ್ಷಣಿಕ ಅರ್ಹತೆ

  • ಪ್ರಥಮ ದರ್ಜೆ ಸಹಾಯಕರಿಗೆ ಅರ್ಜಿ ಸಲ್ಲಿಸುವವರು ಡಿಗ್ರಿ ಪಡೆದಿರಬೇಕು
  • ದ್ವಿತೀಯ ದರ್ಜೆ ಸಹಾಯಕರಿಗೆ ಅರ್ಜಿ ಸಲ್ಲಿಸುವವರು ಪಿ ಯು ಸಿ/ ಐಟಿಐ/ ಡಿಪ್ಲೊಮಾ ಉತ್ತೀರ್ಣರಾಗಿರಬೇಕು

ವಯೋಮಿತಿ

ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
ಗರಿಷ್ಠ  ಸಾಮಾನ್ಯ ವರ್ಗ – 35 ವರ್ಷ
2a 2b 3a 3b – 38 ವರ್ಷ
ಪ.ಜಾ, ಪ.ಪಂ, ಪ್ರ1 – 40 ವರ್ಷ

ಅದಿಸೂಚನೆಯನ್ನು www.kpsc.kar.nic.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ..

ಆಲ್ ದಿ ಬೆಸ್ಟ್..ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಉಪಯೋಗವಾದೀತು..