ಕರ್ನಾಟಕ ಲೋಕ ಸೇವಾ ಆಯೋಗ A ಮತ್ತು B ವೃಂದದ 107 ಟೆಕ್ನಿಕಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
469

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವೆಗಳ ಉಳಿಕೆ ಮೂಲ ವೃಂದದ ಗ್ರೂಪ್ A ಮತ್ತು B ವೃಂದದ ಖಾಲಿ ಇರುವ 107 ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೆಟ್ -ನಲ್ಲಿ ಏಪ್ರಿಲ್ 22,2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವ 590 ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಧಪಟ್ಟ ಮಾಹಿತಿ:

ಹುದ್ದೆಯ ಹೆಸರು: (Name Of The Posts): ಡೆವಲಪ್ಮೆಂಟ್ ಆಫಿಸರ್, ಇಂಜಿನಿಯರ್ (ಸಿವಿಲ್)

ಸಂಸ್ಥೆ (Organisation): ಕರ್ನಾಟಕ ಲೋಕ ಸೇವಾ ಆಯೋಗ

ವಿದ್ಯಾರ್ಹತೆ (Educational Qualification): ಪದವಿ, ಬಿ.ಇ/ ಬಿ.ಟೆಕ್, ಎಂಬಿಬಿಎಸ್

ಉದ್ಯೋಗ ಸ್ಥಳ (Job Location): ಕರ್ನಾಟಕ

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 35 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ್ರವರ್ಗ-2A , 2B ,3A ,3B ಅಭ್ಯರ್ಥಿಗಳು 38 ವರ್ಷಗಳು, ಪ.ಜಾ, ಪ.ಪಂ, ಪ್ರವರ್ಗ-1ರ ಅಭ್ಯರ್ಥಿಗಳು 40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ನೇಮಕಾತಿ ವಿಧಾನ: ಅಭ್ಯರ್ಥಿಗಳನ್ನು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 600/-ರೂ. ಪ್ರವರ್ಗ- 2A, 2B, 3A, 3B ಸೇರಿದ ಅಭ್ಯರ್ಥಿಗಳಿಗೆ 300/-ರೂ

ಹೆಚ್ಚಿನ ಮಾಹಿತಿಗಾಗಿ: http://www.kpsc.kar.nic.in/GROUP%20A%20&%20%20B%20TECHNICAL%20POSTS%20RPC.pdf