KPTCL ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

0
2250

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ.

 

 

1. ಹುದ್ದೆಗಳ ವಿವರ

  • ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್)
  • ಅಸಿಸ್ಟೆಂಟ್ ಇಂಜಿನಿಯರ್ (ಇಲೆಕ್ಟ್ರಿಕಲ್)
  • ಅಸಿಸ್ಟೆಂಟ್ ಇಂಜಿನಿಯರ್ (ಮೆಕಾನಿಕಲ್)
  • ಅಸಿಸ್ಟೆಂಟ್ ಇಂಜಿನಿಯರ್ (ಇನ್ ಸ್ಟ್ರುಮೆಂಟೇಷನ್)
  • ಜೂನಿಯರ್ ಇಂಜಿನಿಯರ್ (ಸಿವಿಲ್)
  • ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್)
  • ಜೂನಿಯರ್ ಇಂಜಿನಿಯರ್ (ಮೆಕಾನಿಕಲ್)
  • ಕೆಮಿಸ್ಟ್
  • ಕೆಮಿಕಲ್ ಸೂಪರ್ ವೈಸರ್

2. ಹುದ್ದೆಗಳ ಮೀಸಲಾತಿ, ವಯೋಮಿತಿ, ವೇತನ ಶ್ರೇಣಿ ಮತ್ತು ಭತ್ಯೆಗಳು ಇತ್ಯಾದಿ ವಿವರಗಳು ನಿಗಮದ ವೆಬ್ ಸೈಟ್ www.karnatakapower.com ನಲ್ಲಿ ದಿನಾಂಕ: ೧೭/೦೭/೨೦೧೭ ರಿಂದ ಲಭ್ಯವಿರುತ್ತದೆ.

3. ಆನ್ ಲೈನ್ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭಿಕ ದಿನಾಂಕ ೧೯/೦೭/೨೦೧೭ ಮತ್ತು ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: ೧೮/೦೮/೨೦೧೭ ಸಂಜೆ ೫ ಗಂಟೆವರೆಗೆ.

4. ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಪಾವತಿಸಲು ಕೊನೆಯ ದಿನಾಂಕ: ೨೨/೦೮/೨೦೧೭ ಮದ್ಯಾಹ್ನ ೩:೦೦ ಗಂಟೆವರೆಗೆ.

5. ಅಂಚೆ/ಕೊರಿಯರ್/ಖುದ್ದಾಗಿ ಅಥವಾ ಇನ್ನಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.