ಕಡ್ಡಾಯವಾಗಿ ಕನ್ನಡವನ್ನು ಓದಲು, ಬರೆಯಲು ಬರುವವರಿಗೆ KSCARD Bank ನಲ್ಲಿ ಉದ್ಯೋಗ ಅವಕಾಶ…!!!

0
1583

ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಬೆಂಗಳೂರು, ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಸ್ಟಂ ಇಂಜಿನಿಯರ್, ಸಹಾಯಕ ಅಭಿಯಂತರು (ಸಿವಿಲ್), ಲೆಕ್ಕಾಧಿಕಾರಿಗಳು, ಹಿರಿಯ ಸಹಾಯಕರು, ಸಹಾಯಕರು ಸೇರಿದಂತೆ 120 ಕ್ಕೂ ಹೆಚ್ಚಿನ ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಆನ್-ಲೈನ್ ಮೂಲಕವೇ ಭರ್ತಿ ಮಾಡತಕ್ಕದ್ದು. ಅರ್ಜಿ ಶುಲ್ಕವನ್ನು ಅಂಚೆ ಕಛೇರಿಯ ಕೆಲಸದ ವೇಳೆಯೊಳಗೆ ಕರ್ನಾಟಕ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲ್ಲಿ ಮಾತ್ರ ಸಂದಾಯ ಮಾಡಬಹುದಾಗಿರುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭಧ ದಿನಾಂಕ: 05-10-2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-11-2017
ಶುಲ್ಕ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 09-11-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹುದ್ದೆಗಳ ವಿವರ

ಹುದ್ದೆಯ ಹೆಸರು: ಸಿಸ್ಟಂ ಇಂಜಿನಿಯರ್
ಒಟ್ಟು ಹುದ್ದೆಗಳ ಸಂಖ್ಯೆ- 01
ವೇತನ ಶ್ರೇಣಿ: ರೂ: 26300 – 54200/- +ನಿಯಮಾನುಸಾರ ಇತರೇ ಭತ್ಯೆಗಳು
ಕನಿಷ್ಟ ವಿದ್ಯಾರ್ಹತೆ
ಮಾನ್ಯತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಬಿ.ಇ ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಎಲ್ಲಾ ಐಚ್ಚಿಕ ವಿಷಯ ಹಾಗೂ ಭಾಷ ವಿಷಯ ಮತ್ತು ಎಲ್ಲಾ ಸಾಲು ಸೆಮಿಸ್ಟರನಲ್ಲಿ ಒಟ್ಟು ಕನಿಷ್ಠ ಸರಾಸರಿ 60% ಅಂಕಗಳನ್ನು ಪಡೆದಿರಬೇಕು.

ಹುದ್ದೆಯ ಹೆಸರು: ಸಹಾಯಕ ಅಭಿಯಂತರು(ಸಿವಿಲ್)
ಒಟ್ಟು ಹುದ್ದೆಗಳ ಸಂಖ್ಯೆ- 01
ವೇತನ ಶ್ರೇಣಿ: ರೂ: 26300 – 54200/- +ನಿಯಮಾನುಸಾರ ಇತರೇ ಭತ್ಯೆಗಳು
ಕನಿಷ್ಟ ವಿದ್ಯಾರ್ಹತೆ
ಮಾನ್ಯತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಬಿ.ಇ ಸಿವಿಲ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಎಲ್ಲಾ ವಿಷಯ ಹಾಗೂ ಭಾಷ ವಿಷಯ ಮತ್ತು ಎಲ್ಲಾ ಸಾಲು ಸೆಮಿಸ್ಟರನಲ್ಲಿ ಒಟ್ಟು ಕನಿಷ್ಠ ಸರಾಸರಿ 60% ಅಂಕಗಳನ್ನು ಪಡೆದಿರಬೇಕು.

ಹುದ್ದೆಯ ಹೆಸರು: ಲೆಕ್ಕಾಧಿಕಾರಿಗಳು
ಒಟ್ಟು ಹುದ್ದೆಗಳ ಸಂಖ್ಯೆ- 11
ವೇತನ ಶ್ರೇಣಿ: ರೂ: 24200 – 52950/- +ನಿಯಮಾನುಸಾರ ಇತರೇ ಭತ್ಯೆಗಳು
ಕನಿಷ್ಟ ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದ ವಾಣಿಜ್ಯ /ಸಹಕಾರ/ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವೀಧರರಾಗಿರಬೇಕು
ಗಣಕಯಂತ್ರದ ನಿರ್ವಹಣೆ ಮತ್ತು ತಂತ್ರಾಂಶಗಳ ಬಳಕೆಯ ಜ್ಞಾನದೊಂದಿಗೆ ಟ್ಯಾಲಿ ತಂತ್ರಜ್ಞಾನದ ಸರ್ಟಿಫಿಕೇಟ್ ಪ್ರಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
ಕನ್ನಡವನ್ನು ಓದಲು, ಬರೆಯಲು, ಅರ್ಥೈಸಿಕೊಳ್ಳಲು ಶಕ್ತರಾಗಿರುದರೊಂದಿಗೆ ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಶಕ್ತರಾಗಿರಬೇಕು.

ಹುದ್ದೆಯ ಹೆಸರು: ತಾಂತ್ರಿಕ ಮೇಲ್ವಿಚಾರಕರು
ಒಟ್ಟು ಹುದ್ದೆಗಳ ಸಂಖ್ಯೆ-12
ವೇತನ ಶ್ರೇಣಿ: ರೂ: 19300 – 47950/- +ನಿಯಮಾನುಸಾರ ಇತರೇ ಭತ್ಯೆಗಳು
ಕನಿಷ್ಟ ವಿದ್ಯಾರ್ಹತೆ
ಮಾನ್ಯತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಕೃಷಿ/ಸಿವಿಲ್ ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಬಿಎಸ್ಸಿ ಕೃಷಿ ಪದವಿಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಲ್ಲಾ ಐಚ್ಚಿಕ ವಿಷಯ ಹಾಗೂ ಭಾಷ ವಿಷಯ ಮತ್ತು ಎಲ್ಲಾ ಸಾಲು ಸೆಮಿಸ್ಟರನಲ್ಲಿ ಒಟ್ಟು ಕನಿಷ್ಠ ಸರಾಸರಿ 60% ಅಂಕಗಳನ್ನು ಪಡೆದಿರಬೇಕು.

ಹುದ್ದೆಯ ಹೆಸರು: ಹಿರಿಯ ಸಹಾಯಕರು /ಹಿರಿಯ ಸಹಾಯಕ ಕಂಪ್ಯೂಟರ್
ಒಟ್ಟು ಹುದ್ದೆಗಳ ಸಂಖ್ಯೆ- 58
ವೇತನ ಶ್ರೇಣಿ: ರೂ: 16200 -40450/- +ನಿಯಮಾನುಸಾರ ಇತರೇ ಭತ್ಯೆಗಳು
ಕನಿಷ್ಟ ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದ ಯಾವುದೇ ಪದವಿ.
ಕನ್ನಡವನ್ನು ಓದಲು, ಬರೆಯಲು, ಅರ್ಥೈಸಿಕೊಳ್ಳಲು ಶಕ್ತರಾಗಿರುವುದರೊಂದಿಗೆ ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಶಕ್ತರಾಗಿರಬೇಕು.
ಗಣಕಯಂತ್ರದ ನಿರ್ವಹಣೆ ಮತ್ತು ತಂತ್ರಾಂಶಗಳ ಬಳಕೆಯ ಬಗ್ಗೆ ಜ್ಞಾನ ಇರಬೇಕು.

ಹುದ್ದೆಯ ಹೆಸರು: ಸಹಾಯಕರು
ಒಟ್ಟು ಹುದ್ದೆಗಳ ಸಂಖ್ಯೆ-46
ವೇತನ ಶ್ರೇಣಿ: ರೂ: 13300 – 31950/- +ನಿಯಮಾನುಸಾರ ಇತರೇ ಭತ್ಯೆಗಳು
ಕನಿಷ್ಟ ವಿದ್ಯಾರ್ಹತೆ
ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
ಕನ್ನಡವನ್ನು ಓದಲು, ಬರೆಯಲು, ಅರ್ಥೈಸಿಕೊಳ್ಳಲು ಶಕ್ತರಾಗಿರುದರೊಂದಿಗೆ ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಶಕ್ತರಾಗಿರಬೇಕು.
ಗಣಕಯಂತ್ರದ ನಿರ್ವಹಣೆ ಮತ್ತು ತಂತ್ರಾಂಶಗಳ ಬಳಕೆಯ ಬಗ್ಗೆ ಜ್ಞಾನವಿರಬೇಕು.

ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.500/-+ ಅಂಚೆ ಕಛೇರಿ ಶುಲ್ಕ ರೂ.30/-
ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ರೂ.1000/-+ಅಂಚೆ ಕಛೇರಿ ಶುಲ್ಕ ರೂ.30/-