ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

0
566

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(ಕೆಎಸ್‌ಪಿ)ಯಲ್ಲಿ ಖಾಲಿ ಇರುವ 2013 ಸಿವಿಲ್ ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 17-10-2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3026 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಪೊಲೀಸ್ ಸಿವಿಲ್ ಕಾನ್ಸ್‌ಟೇಬಲ್

ವಿದ್ಯಾರ್ಹತೆ: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಸಂಸ್ಥೆಯಿಂದ ಪಿಯುಸಿ / 10+2 ನೇ ತರಗತಿ ಅಥವಾ ಸಮಾನತೆಯನ್ನು ಪೂರೈಸಿರಬೇಕು.

ವಯೋಮಿತಿ: ಅಭ್ಯರ್ಥಿಗಳು 18 ರಿಂದ 27 ವರ್ಷ ವಯೋಮಿತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ: ಬರಹ ಪರೀಕ್ಷೆ, ಭೌತಿಕ ಸಹಿಷ್ಣು ಪರೀಕ್ಷೆ ಮತ್ತು ದಕ್ಷತೆ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಮತ್ತು ಓಬಿಸಿ (2ಎ,2ಬಿ,3ಎ ಮತ್ತು 3ಬಿ) ಅಭ್ಯರ್ಥಿಗಳು 250/-ರೂ ಮತ್ತು ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ,ಪ್ರವರ್ಗ-1ರ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಜೂನ್ 19-10-2019 ರೊಳಗೆ ಪಾವತಿಸಬಹುದು.

ಜಿಲ್ಲಾವಾರು ಹುದ್ದೆಗಳ ವಿಂಗಡಣೆ: ಜಿಲ್ಲೆಗಳು, ಪುರುಷರು, ಮಹಿಳೆಯರು, ಬೆಂಗಳೂರು ನಗರ: 640-160, ಬೆಳಗಾವಿ: ನಗರ 60- 15, ಹುಬ್ಬಳಿ-ಧಾರವಾಡ ನಗರ: 60-15, ಮಂಗಳೂರು ನಗರ: 60-15, ಬೆಂಗಳೂರು ಜಿಲ್ಲೆ 60-15, ರಾಮನಗರ ಜಿಲ್ಲೆ: 60-15, ಚಾಮರಾಜನಗರ ಜಿಲ್ಲೆ: 60-16, ಉತ್ತರ ಕನ್ನಡ ಜಿಲ್ಲೆ, ಕಾರವಾರ: 61-17, ಮಂಡ್ಯ: 80-20, ಉಡುಪಿ: 80-21, ಹಾಸನ: 60-15, ತುಮಕೂರು: 60-15, ದಕ್ಷಿಣ ಕನ್ನಡ ಜಿಲ್ಲೆ: 60-18, ಮೈಸೂರು ಜಿಲ್ಲೆ: 60-16, ಕೊಡಗು: 63-16,
ಶಿವಮೊಗ್ಗ: 80-20 , ಒಟ್ಟು: ಪುರುಷರಿಗೆ: 1604. ಮಹಿಳೆಯರಿಗೆ: 409

ಹೆಚ್ಚಿನ ಮಾಹಿತಿಗಾಗಿ: https://www.ksp.gov.in/ ಕ್ಲಿಕ್ ಮಾಡಿ.