ರಾಜ್ಯದಲ್ಲಿ 15 ವರ್ಷ ಮೀರಿದ ವಾಹನಗಳು ಗುಜರಿಗೆ; ಹಳೆ ವಾಹನಗಳು ರೋಡಿಗೆ ಇಳಿಯದಂತೆ ಸರ್ಕಾರದಿಂದ RTO- ಗಳಿಗೆ ಖಡಕ್‌ ಸೂಚನೆ..

0
3223

ರಾಜ್ಯದಲ್ಲಿ 15 ವರ್ಷಗಳಿಂದ ಜೀವಂತವಾಗಿರುವ ಮುದಿ ವಾಹನಗಳಿಗೆ ಮುಕ್ತಿ ಹೇಳಲು ಸಾರಿಗೆ ಇಲಾಖೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು ಅದರಂತೆ ರಾಜ್ಯ ಸರ್ಕಾರ ಎಲ್ಲ ಆರ್‌ಟಿಓ -ಗಳಿಗೆ ಸೂಚನೆ ನೀಡಿದ್ದು ಇದರಿಂದ ರಾಜ್ಯದಲ್ಲಿ 15 ವರ್ಷ ಮೀರಿದ ಸುಮಾರು 54 ಸಾವಿರ ಪ್ರಯಾಣಿಕ ವಾಹನಗಳು ಗುಜರಿ ಸೇರಲಿವೆ. ಮಾಲಿಕರು ಈ ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕಿ ಬಳಿಕ ಹಳೆ ರಹದಾರಿಯಲ್ಲಿ ಹೊಸ ವಾಹನ ಖರೀದಿಸಿ ಕಾರ್ಯಾಚರಣೆ ಮಾಡಬೇಕು ಎಂದು ತಿಳಿಸಿದೆ.

Also read:

ಗುಜರಿಗೆ ಯಾವ ಯಾವ ವಾಹನಗಳು?

15 ವರ್ಷ ಮೀರಿದ ಸ್ಟೇಜ್‌ ಕ್ಯಾರಿಯೇಜ್‌, ಕಾಂಟ್ರಾಕ್ಟ್ ಕ್ಯಾರಿಯೇಜ್‌ ಬಸ್‌ಗಳು, ಶಾಲಾ-ಕಾಲೇಜು ವಾಹನಗಳು, ಟೆಂಪೋ, ಆಟೋ, ಕಾರು (white board), ಮ್ಯಾಕ್ಸಿಕ್ಯಾಬ್‌ ಮೊದಲಾದ ಪ್ರಯಾಣಿಕ ವಾಹನಗಳ ಕಾರ್ಯಾಚರಣೆಗೆ ಅವಕಾಶವಿಲ್ಲ. ಮೋಟಾರು ವಾಹನಗಳ ಕಾಯ್ದೆ ಹಾಗೂ ನಿಯಮಗಳ ಅನ್ವಯ ರಾಜ್ಯ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಓ)ಗಳಿಂದ ಪ್ರಯಾಣಿಕರ ವಾಹನಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳ ವಯೋಮಿತಿ ಷರತ್ತನ್ನು ಗಂಭೀರವಾಗಿ ಪರಿಗಣಿಸದಿರುವುದು ಕಂಡುಬಂದಿದೆ.

Also read: ಮೋದಿ ಸರ್ಕಾರದ ಹೊಸ ಯೋಜನೆಯಿಂದ ಮಾಲಿನ್ಯ ಕಡಿಮೆಯಾಗಲಿದೆ, ರಾಜ್ಯದಲ್ಲೂ ಬರಲಿವೆ ಎಲೆಕ್ಟ್ರಿಕ್ ಬಸ್-ಗಳು!!

ಈ ಆದೇಶಕ್ಕೆ ಕಾರಣ?

ತಾಂತ್ರಿಕವಾಗಿ ದುರ್ಬಲವಾಗಿರುವ ಮತ್ತು ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಲ್ಲದ ವಾಹನಗಳು ಕೂಡ ರಹದಾರಿ (ಪರ್ಮಿಟ್‌) ಪಡೆದು ಕಾರ್ಯಾಚರಣೆ ಮಾಡುತ್ತಿವೆ. ಇದರಿಂದ ಮಾರಾಣಾಂತಿಕ ಅಪಘಾತಗಳು ಮತ್ತು ಅವಘಡಗಳು ಸಂಭವಿಸುತ್ತಿವೆ. ಇಂತಹ ವಾಹನಗಳಲ್ಲಿ ಪ್ರಯಾಣಿಸುವ ಅಮಾಯಕ ಪ್ರಮಾಣಿಕರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಅದರಂತೆ ಪ್ರತಿನಿತ್ಯವೂ ಅಪಘಾತಗಳು ನಡೆಯುತ್ತಾನೆ ಇವೆ. ಇವುಗಳಿಗೆ ಹಲವು ನಿಯಮಗಳನ್ನು ಜಾರಿಗೆ ತಂದರು ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎನ್ನುವ ಕಾರಣದಿಂದ ಈ ನಿಯಮ ಜಾರಿಯಾಗಿದೆ.

ಮಂಡ್ಯದ ಘಟನೆ ಬಳಿಕ ಎಚ್ಚೆತ್ತ ಸರ್ಕಾರ:

Also read: 80-90 ದಶಕಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿದೆ ಡಬಲ್ ಡೆಕ್ಕರ್ ಬಸ್-ಗಳಿಗೆ ಮತ್ತೆ ಜೀವ ಬಂದಿದೆ!!!

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಕಳೆದ ನವೆಂಬರ್‌ 20ರಂದು ಖಾಸಗಿ ಬಸ್‌ವೊಂದು ನಾಲೆಗೆ ಬಿದ್ದು 30 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಆ ಬಸ್‌ ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ತಾಂತ್ರಿಕವಾಗಿ ದುರ್ಬಲವಾಗಿತ್ತು. ಈ ಘಟನೆ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ 15 ವರ್ಷ ಮೀರಿದ ಪ್ರಯಾಣಿಕ ವಾಹನಗಳ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿರುವ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.’

ವಾಹನ ರಹದಾರಿಯಲ್ಲಿ ಎಡವಟ್ಟು;

ಮೋಟಾರು ವಾಹನಗಳ ಕಾಯ್ದೆ ಹಾಗೂ ನಿಯಮಗಳ ಅನ್ವಯ ರಾಜ್ಯ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಓ)ಗಳಿಂದ ಪ್ರಯಾಣಿಕರ ವಾಹನಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳ ವಯೋಮಿತಿ ಷರತ್ತನ್ನು ಗಂಭೀರವಾಗಿ ಪರಿಗಣಿಸದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನಗಳಿಗೆ ಅದರಲ್ಲೂ ವಿಶೇಷವಾಗಿ ಸಾರ್ವಜನಿಕರು ಹೆಚ್ಚು ಪ್ರಯಾಣಿಸುವ ಸ್ಟೇಜ್‌ ಕ್ಯಾರಿಯೇಜ್‌ ಮತ್ತು ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ ವಾಹನಗಳಿಗೆ ಮೂಲ ದಿನಾಂಕದಿಂದ 15 ವರ್ಷಗಳವರೆಗೆ ವಯೋಮಿತಿ ವಿಧಿಸಿ ರಹದಾರಿ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಂದು ಸರ್ಕಾರದ ಸುತ್ತೋಲೆಯಲ್ಲಿ RTA ಮತ್ತು RTO-ಗಳಿಗೆ ಖಡಕ್‌ ಸೂಚನೆ ನೀಡಲಾಗಿದೆ.