KSRTC ಮುಡಿಗೇರಿತು ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ..

0
640

Kannada News | Karnataka News

ಅಂತರಾಷ್ಟ್ರೀಯ ಬಸ್ ಯೂನಿಯನ್ ಸಾರಿಗೆ ಎಕ್ಸಲೆನ್ಸ್ ರನ್ನರ್ ಅಪ್ ಪ್ರಶಸ್ತಿಯು ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗೆ ಲಭಿಸಿದೆ.. ದೇಶದ ಬೇರೆ ಯಾವ ರಾಜ್ಯದ ಸಾರಿಗೆಗೂ ಸಿಗದ ಪ್ರಶಸ್ತಿಯನ್ನು ನಮ್ಮ KSRTC ಪಡೆದುಕೊಂಡಿದೆ..

ಪ್ರಶಸ್ತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಯದುವೀರ್ ಸಿಂಗ್ ಮಲ್ಲಿಕ್ ರವರು ಮತ್ತು ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ ರವರು KSRTC ಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಆರ್ ಉಮಾಶಂಕರ್ ರವರಿಗೆ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿದ್ದಾರೆ..

ಸಣ್ಣ ಹಾಗೂ ಮಧ್ಯಮ ನಗರಗಳು ಹಾಗೂ ಪಟ್ಟಣಗಳಿಗೆ ನಗರ ಸಾರಿಗೆ ವ್ಯವಸ್ತೆಯನ್ನು ಕಲ್ಪಿಸಿರುವುದರಿಂದ ಈ ಪ್ರಶಸ್ತಿ ಕೆ ಎಸ್ ಆರ್ ಟಿ ಸಿ ಗೆ ಲಭಿಸಿದೆ.. ಜೊತೆಗೆ ಈ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿರಿವುದು ದೇಶದಲ್ಲೇ ಮೊದಲಾಗಿದೆ..

ಒಟ್ಟು 16 ನಗರದಲ್ಲಿ ಈ ರೀತಿಯ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.. ಅಂದಾಜು 4.4 ಲಕ್ಷ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ ಎನ್ನಲಾಗಿದೆ..

ಜಗತ್ತಿನ ಉತ್ತಮ ಉಪಕ್ರಮಗಳನ್ನು ಆಧರಿಸಿ ಅಂತರಾಷ್ಟ್ರೀಯ ಮಟ್ಟದ ತೀರ್ಪುಗಾರರು ಪ್ರಶಸ್ತಿ ವಿಜೇತ ಸಾರಿಗೆಗಳನ್ನು ಆಯ್ಕೆ ಮಾಡಿದ್ದಾರೆ.. ಇದರಲ್ಲಿ ಮೊದಲನೆ ಸ್ಥಾನವನ್ನು ಮಾಲ್ವಾ ದೇಶದ ಸಾರ್ವಜನಿಕ ಸಾರಿಗೆ ಪಡೆದುಕೊಂಡಿದೆ.. ರನ್ನರ್ ಅಪ್ ಪ್ರಶಸ್ತಿ ನಮ್ಮ KSRTC ಗೆ ಲಭಿಸಿದೆ..