ಜನ ತಮ್ಮ ಜೀವಕ್ಕೆ ತಾವೇ ಹೇಗೆ ಆಪತ್ತನ್ನು ತಂದುಕೊಳುತ್ತಾರೆ ಎಂಬುದಕ್ಕೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯೇ ಉದಾಹರಣೆ, ಏನದು ನೀವೇ ನೋಡಿ…

0
730

ಜನ ತಮ್ಮ ಜೀವಕ್ಕೆ ತಾವೇ ಹೀಗೆ ಆಪತ್ತನ್ನು ತಂದುಕೊಳುತ್ತಾರೆ ಎಂಬುದಕ್ಕೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4 ರ, ದಾಬಸ್ ಪೇಟೆ ಬಳಿ ನಡೆದಿರುವ ಈ ಘಟನೆಯೇ ಸಾಕ್ಷಿ, ಜನರಿಗೆ ಸ್ವಲ್ಪ ಸಾಮಾನ್ಯ ಜ್ಞಾನ ಇದ್ದಾರೆ ಎಷ್ಟೆಲ್ಲ ಅಪಾಯ ತಪ್ಪಿಸ ಬಹುದೆಂದು ಈ ಘಟನೆಯೇ ಉದಾಹರಣೆ.

ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ KSRTC ಬಸ್ಸಿಗೆ ಬೈಕ್ ಸವಾರನೊಬ್ಬ ಅಡ್ಡ ಬಂದು ಸತತ 15 ಕಿ.ಮೀ ವರೆಗೆ ಸೈಡ್ ಕೊಡದೆ ಬಸ್ಸಿನ ಡ್ರೈವರ್-ನನ್ನ ಕಾಡಿಸಿದ್ದಾನೆ. ಬಸ್ಸಿನ ಮುಂದೆ ಹೋದರು ಪರವಾಗಿಲ್ಲ ಆದರೆ ಈ ವ್ಯಕ್ತಿ ಬೇಕು ಅಂತಾನೆ ಅಡ್ಡ ಬಂದು ನಿಧಾನವಾಗಿ ಬೈಕ್ ಚಲಾಯಿಸಿದ್ದಾನೆ, ಇವನ ಈ ಮೂರ್ಖತನದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ವಿಳಂಬವಾಗಿದೆ.

ಬಸ್ಸಿಗೆ ಅಡ್ಡ ಬಂದು ಎಷ್ಟು ಹಾರ್ನ್ ಹೊಡೆದರು ಸರಿಯಾದ ಈತನನ್ನು ನೋಡಿ ಬುಸ್ಸಿನಲ್ಲಿದ ಕೆಲವರು ಕೂಪದಿಂದ ಶಪಿಸಿದರೆ ಇನ್ನು ಕೆಲವರು ಎಲ್ಲೋ ಹುಚ್ಚ ಇರಬೇಕು ಅಂತ ನಕ್ಕು ಸುಮ್ಮನಾಗಿದ್ದಾರೆ, ಇಂತಹ ಪರಿಸ್ಥಿತಿಯಲ್ಲೂ KSRTC ಬಸ್ ಚಾಲಕ ತಾಳ್ಮೆ ಕಳೆದುಕೊಳ್ಳದೆ ಅವನ ಹಿಂದೆಯೇ ನಿಧಾನವಾಗಿ ಚಲಿಸಿದ್ದಾನೆ, 15 ಕಿ.ಮೀ ನಂತರ ಬೈಕ್ ಸವಾರ ಸೈಡ್ ಕೊಟ್ಟಿದ್ದಾನೆ, ಅವನು ಯಾಕೆ ಹೀಗೆ ಮಾಡಿದನೆಂದು ಇನ್ನು ತಿಳಿದುಬಂದಿಲ್ಲ.

ಒಟ್ಟಿನಲ್ಲಿ ಬಸ್ ಚಾಲಕನ ತಾಳ್ಮೆ ಮತ್ತು ಸಮಯ ಪ್ರಜ್ಞೆಯಿಂದ ಬೈಕ್ ಸವಾರನಿಗೆ ಯಾವುದೇ ಅಪಾಯವಾಗಿಲ್ಲ ಆದರೆ ಅವನ ಈ ಮೂರ್ಖತನ ಎಷ್ಟು ಸರಿ ನೀವೇ ಯೋಚಿಸಿ…!