ಪ್ರಯಾಣಿಕರ ಗಮನಕ್ಕೆ: ಪಶ್ಚಿಮ ಹಾಗೂ ಉತ್ತರ ಕರ್ನಾಟಕಕ್ಕೆ ಹೋಗೋ ಬಸ್ಸುಗಳು, ಇನ್ಮೇಲಿಂದ ಮಜೆಸ್ಟಿಕ್ ಬದಲಿಗೆ ಈ ಬಸ್ ನಿಲ್ದಾಣದಿಂದ ಹೊರಡಲಿದೆ!!

0
1394

ಪೀಣ್ಯದಲ್ಲಿ ಬಸವೇಶ್ವರ ಬಸ್ ನಿಲ್ದಾಣ ಆರಂಭವಾಗಿ ಕೆಎಸ್‍ಆರ್‍ಟಿಸಿ ಬಸ್‍ಗಳು ಸ್ಥಳಾಂತರಗೊಂಡು ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಲ್ಲಿ ಸಂತಸ ತಂದಿದೆ. ನಿತ್ಯ ಊರಿಗೆ ತರಳಲು ಪರದಾಡುತ್ತಿದ್ದ ಜನರಿಗೆ ನಿಲ್ಧಾಣ ನಿಮಿ?ಸಿ, ಸಂಚಾರ ಆರಂಭಿಸುವುದು ಬಹಳ ಉಪಯುಕ್ತವಾಗಿದೆ.

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳುವ ಬಸ್ ಗಳ ಪೈಕಿ 52 ಬಸ್ ಗಳನ್ನು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ. ಈ ಬಸ್ ಗಳು ಗುರುವಾರದಿಂದ ಈ ನಿಲ್ದಾಣದಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಈ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಿರ್ಜೀವವಾಗಿದ್ದ ಬಸ್ ನಿಲ್ದಾಣಕ್ಕೆ ಕಳೆ ಬಂದಂತಾಗಿದೆ. ಬಸ್ ಸಂಚಾರ ಆರಂಭಿಸಿ ಎರಡು ದಿನಗಳಷ್ಟೇ ಆಗಿರುವುದರಿಂದ ನಿರೀಕ್ಷೆಯಷ್ಟು ಪ್ರಯಾಣಿಕರು ನಿಲ್ದಾಣದತ್ತ ಬರುತ್ತಿಲ್ಲವಾದರೂ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೀಣ್ಯದಿಂದ ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ, ತುಮಕೂರು, ರಾಯಚೂರು, ಹಾಸನ, ದಾವಣಗೆರೆ, ಬೆಳಗಾವಿ, ಕುಷ್ಟಗಿ, ಸಾಗರ, ಹೊಸದುರ್ಗ, ಬಳ್ಳಾರಿ, ಕೊಪ್ಪಳ, ಕುಂದಾಪುರ ಸೇರಿದಂತೆ ಇನ್ನಿತರೆ ಊರುಗಳಿಗೆ 52 ಬಸ್ಗಳ ಸಂಚಾರ ಆರಂಭವಾಗಿದೆ. ಇದರಿಂದ ಪೀಣ್ಯ ಸುತ್ತಮುತ್ತಲಿನ ಸಾರ್ವಜನಿಕರು ಉತ್ತರ ಕರ್ನಾಟಕದತ್ತ ತೆರಳುವ ಬಸ್ ಗಳಿಗಾಗಿ ಮುಖ್ಯರಸ್ತೆಯಲ್ಲೇ ಕಾದು ನಿಲ್ಲುವುದು ತಪ್ಪಿದೆ.

ಇನ್ನು ಮೆಜೆಸ್ಟಿಕ್ನಿಂದ ಸಂಚರಿಸುವ ಉಳಿದ ಎಲ್ಲ ಸಾಮಾನ್ಯ ಬಸ್ ಗಳು ಪೀಣ್ಯ ನಿಲ್ದಾಣ ಮಾರ್ಗವಾಗಿಯೇ ತೆರಳಬೇಕೆಂದು ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಸೂಚಿಸಲಾಗಿದೆ. ಪೀಣ್ಯ ನಿಲ್ದಾಣಕ್ಕೆ ತೆರಳದೆ ಮುಖ್ಯ ರಸ್ತೆಯಲ್ಲಿಯೇ ಸಂಚರಿಸುವ ಬಸ್ ಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೆಎಸ್ ಆರ್ ಟಿಸಿ, ವಾಯುವ್ಯ, ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯ ಸುಮಾರು 2500 ಬಸ್ ಗಳು ಮೆಜೆಸ್ಟಿಕ್ ನಿಲ್ದಾಣದಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದತ್ತ ಸಂಚರಿಸುತ್ತವೆ. ಈ ಪೈಕಿ 980 ಸಾಮಾನ್ಯ ಬಸ್ ಗಳಿದ್ದು ಇವುಗಳಲ್ಲಿ 52 ವಾಹನಗಳನ್ನು ಪೀಣ್ಯಕ್ಕೆ ಸ್ಥಳಾಂತರಿಸಲಾಗಿದೆ.