ಇನ್ನು ಮುಂದೆ KSRTC ಬಸ್‍ ನಿಲ್ದಾಣಗಳಲ್ಲಿ ಸಿಗುತ್ತೆ ಉಚಿತ ವೈ-ಫೈ

0
907

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಶೀಘ್ರದಲ್ಲೇ ತನ್ನ ಪ್ರಯಾಣಿಕರಿಗೆ ರಾಜ್ಯದ ಗ್ರಾಮೀಣ ಪ್ರದೇಶದಂತೆ ಎಲ್ಲಾ ಬಸ್‍ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿಕೊಡಲಿದೆ.

ಈಗಾಗಲೇ ರಾಜ್ಯದ 24 ಬಸ್‍ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿದ್ದರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಸ್ಸಾರ್ಟಿಸಿ ಸಂಸ್ಥೆ ಗ್ರಾಮೀಣ ಪ್ರದೇಶದ ಬಸ್‍ ನಿಲ್ದಾಣಗಳು ಹಾಗೂ ಲಕ್ಸುರಿ ಅಲ್ಲದೇ ಸಾಮಾನ್ಯ ಬಸ್‍ಗಳಲ್ಲೂ ಈ ಸೇವೆ ವಿಸ್ತರಿಸಲು ಸಿದ್ಧತೆ ನಡೆಸಿದೆ.

KSRTC, ಉತ್ತರ ಹಾಗೂ ನೈಋತ್ಯ ಬಸ್‍ ನಿಲ್ದಾಣ ಅಲ್ಲದೇ ರಾಜ್ಯದ 18,704 ಬಸ್‍ಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲು ಈಗಾಗಲೇ ಟೆಂಡರ್‍ ಕರೆಯಲಾಗಿದೆ. ಜನವರಿ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಈಗಾಗಲೇ 40 ಕಂಪನಿಗಳು ಅರ್ಜಿ ಸಲ್ಲಿಸಿವೆ.

ಉಚಿತ ವೈ-ಫೈ ಸೇವೆಗೆ ಸಾರಿಗೆ ಸಂಸ್ಥೆ ಯಾವುದೇ ವೆಚ್ಚ ಭರಿಸುತ್ತಿಲ್ಲ. ಬದಲಾಗಿ ಸೇವೆ ನೀಡಿದವರಿಗೆ ಉಚಿತ ಜಾಹೀರಾತು ಪ್ರಕಟಣೆ ಮತ್ತು ಆದಾಯ ಮಾಡಿಕೊಳ್ಳಲು ಅವಕಾಶ ನೀಡಲಿದೆ.

ಪ್ರಸ್ತುತ ಉಚಿತ ವೈ-ಫೈ ಸೇವೆ ಬೆಂಗಳೂರು, ಮೈಸೂರು, ಕೋಲಾರ, ಮಂಡ್ಯ, ಹಾಸನ ಮತ್ತು ಧರ್ಮಸ್ಥಳ ಬಸ್‍ ನಿಲ್ದಾಣಗಳಲ್ಲಿ ಲಭ್ಯವಿದೆ.