ದೇಶದಲ್ಲಿಯೇ ಮೊದಲ ಬಾರಿಗೆ ಹೈಟೆಕ್ ಬಸ್ ಆಂಬುಲೆನ್ಸ್ ಹೊರ ತರುತ್ತಿದೆ KSRTC, ಇದರಲ್ಲಿ ಏನೇನು ವ್ಯವಸ್ಥೆ ಇದೆ ಗೊತ್ತಾ…?

0
1332

ಈಗಿನ ದಿನದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್-ನಿಂದ ಹಾಗು ಜನರ ಅಜಾಗರೂಕತೆಯಿಂದ ಅಥವಾ ವಾಹನದ ತೊಂದರೆಯಿಂದ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ಹೆಚ್ಚುತ್ತಿವೆ. ಇನ್ನು ಅಪಘಾತವಾದಾಗ ಗಾಯಗೊಂಡವರನ್ನು ಆ ದೇವರೇ ಕಾಪಾಡಬೇಕು ಎಂಬಂತಿವೆ ನಮ್ಮ ತುರ್ತು ಸೇವಾ ವಾಹನಗಳು ಮತ್ತು ನಗರಗಳ ರಸ್ತೆಗಳು, ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ನೂತನ ವ್ಯವಸ್ಥೆಯನ್ನು ಮಾಡಿದೆ, ಏನದು ಎಂದು ತಿಳಿಯುವ ಕುತೂಹಲ ನಿಮಗಿದ್ದರೆ, ಮುಂದೆ ಓದಿ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬಸ್‌ಗಳು ಅಪಘಾತವಾದ ವೇಳೆ ಗಾಯಾಳುಗಳಿಗೆ ‘ಗೋಲ್ಡನ್ ಹವರ್’ ನಲ್ಲಿ, ಅಂದರೆ ಅಪಘಾತ ನಡೆದ ಮೊದಲ ನಿರ್ಣಾಯಕ ಒಂದು ಗಂಟೆಯೊಳಗೆ ಅತ್ಯಗತ್ಯವಿರುವ ಪ್ರಥಮ ಚಿಕಿತ್ಸೆ ಮತ್ತು ಸೂಚಿತ ವೈದ್ಯಕೀಯ ನೆರವು ನೀಡಲು ಒಂದು ಹೊಸ ವಾಹನವನ್ನು ಹೊರ ತರುತ್ತಿದೆ, ಅದೇ ‘KSRTC ಬಸ್ ಆಂಬ್ಯುಲೆನ್ಸ್’.

ಹೌದು, KSRTC ಬಸ್ ಆಂಬುಲೆನ್ಸ್ ಎಂಬ ಒಂದು ಹೊಸ ಹಾಗು ನವೀನ ತಂತ್ರಜ್ಞಾನದಿಂದ ಕೂಡಿದ ಮತ್ತು ಎಲ್ಲ ರೀತಿಯ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಬಹುದಾದಂತಹ ಒಂದು ಹೈಟೆಕ್ ವಾಹನವನ್ನು ಹೊರತರುತ್ತಿದೆ. ಇದರಲ್ಲೇನಿದೆ ವಿಶೇಷ, ಆಂಬುಲೆನ್ಸ್ ಮಾಡುವ ಕೆಲಸವೇ ಇದು ಮಾಡುತ್ತದೆ ಎಂಬುದನ್ನು ನೀವು ಯೋಚಿಸುತ್ತಿದ್ದರೆ, ನಿಮ್ಮ ಲೆಕ್ಕಾಚಾರ ತಪ್ಪು ಯಾಕೆ ಗೊತ್ತಾ.

KSRTC ಬಸ್ ಆಂಬುಲೆನ್ಸ್, ದೇಶದಲ್ಲೇ ಮೊದಲ ಬಾರಿಗೆ 20 ಕ್ಕೂ ಹೆಚ್ಚು ಗಾಯಾಳುಗಳಿಗೆ ಏಕಕಾಲಕ್ಕೆ‌ ತುರ್ತು ಚಿಕಿತ್ಸೆ ನೀಡುವ ತುರ್ತು ಸೇವಾವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಆಂಬ್ಯುಲೆನ್ಸ್‌ 10 ಸಾಮಾನ್ಯ ಆಂಬ್ಯುಲೆನ್ಸ್-ಗೆ ಸಮವಾಗಿದೆ, 8 ರೋಗಿಗಳಿಗೆ ಮಲಗಿಸಿ ಮತ್ತು 16 ಗಾಯಾಳುಗಳಿಗೆ ಕುಳಿತುಕೊಂಡ ಸ್ಥಿತಿಯಲ್ಲಿ ಚಿಕಿತ್ಸೆ ನೀಡುವ ಸೌಲಭ್ಯವನ್ನು ಈ ಆಂಬ್ಯುಲೆನ್ಸ್ ಹೊಂದಿದೆ.

ಇನ್ನು ಈ ಅಗ್ರಿಮೆಂಟ್ -ಗೆ ಸೈನ್ ಹಾಕಿದ ಸ್ಪರ್ಶ ಆಸ್ಪತ್ರೆಯ ನರರೋಗ ತಜ್ಞ ಡಾ. ಎನ್.ಕೆ. ವೆಂಕಟರಮಣ ಅವರು ಮಾತನಾಡಿ, ಆಂಬುಲೆನ್ಸ್-ನಲ್ಲಿ ಶುಶ್ರೂಷೆ ನೀಡಲು ಬೇಕಾದ ವೈದ್ಯಕೀಯ ಉಪಕರಣ, ನುರಿತ ದಾದಿಯರನ್ನು ನಿಯೋಜಿಸಲಾಗಿದೆ. ಬಸ್ ಅಪಘಾತ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದರು.

ಈ ಬಸ್ ಹೃದಯ ನಿಯಂತ್ರಣ, ಹೃದಯಾಘಾತಕ್ಕೆ ತಕ್ಷಣ ಚಿಕಿತ್ಸೆ, ನಿಯಂತ್ರಣ ಕೊಠಡಿಯಿಂದ ಸಿಬ್ಬಂದಿಗೆ ಅಗತ್ಯ ಸಲಹೆ ನೀಡಲಾಗುತ್ತದೆ. ಸುನಾಮಿ, ನೆರೆ ಇತ್ಯಾದಿ ಅಪಘಾತದ ವೇಳೆ ಈ ಬಸ್ ಆಂಬ್ಯುಲೆನ್ಸ್ ಸಹಕಾರಿಯಾಗಲಿದೆ, ಅಲ್ಲದೆ ಈ ಬಿಸ್ಸಿನಲ್ಲಿ ಗೋಲ್ಡನ್ ಹವರ್ ಕಿಟ್, ವ್ಹೀಲ್ ಚೇರ್ ಮತ್ತು ಮೆಟಲ್ ಕಟರ್ ವ್ಯವಸ್ಥೆ ಇದೆ ಹಾಗು ಎಲ್ಲಾ ಬಸ್‌ಗಳನ್ನು ನೇರವಾಗಿ ಕಂಪ್ಯೂಟರ್‌ಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒಟ್ಟಿನಲ್ಲಿ KSRTC ಹೊರ ತರುತ್ತಿರುವ ದೇಶದ ಮೊದಲ ಹೈಟೆಕ್ ಬಸ್ ಆಂಬುಲೆನ್ಸ್-ನಿಂದ ಜನರಿಗೆ ಹೆಚ್ಚು ಸಹಾಯವಾಗಲಿ ಎಂಬುದೇ ನಮ್ಮ ಆಶಯ…!