ಮೈತ್ರಿ ಸರ್ಕಾರದಿಂದ ಕರ್ನಾಟಕ ಜನತೆಗೆ ಮತ್ತೊಂದು ಶಾಕ್, ಬಸ್ ಪ್ರಯಾಣ ದರದಲ್ಲಿ ಭಾರಿ ಏರಿಕೆ!! ಮುಂದಿನ ತಿಂಗಳಿಂದ ಶೇ 20ರಷ್ಟು ಹೆಚ್ಚಳ!!

0
315

ಬಸ್ ಪ್ರಯಾಣಿಕರಿಗೆ ಮುಂದಿನ ತಿಂಗಳಿಂದ ಬಸ್ ದರದಲ್ಲಿ ಶೇ 20ರಷ್ಟು ಏರಿಕೆಯಗಲಿದ್ದು ಈಗಿರುವ ದರಕ್ಕಿಂತ ಇನ್ನೂ 20ರಷ್ಟು ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೊರೆ ಹೆಚ್ಚಾಗಲಿದೆ.

Also read: ಇತಿಹಾಸ ಸೃಷ್ಟಿಸಿ ಗೆಲುವು ಸಾಧಿಸಿರುವ ಮೋದಿ ಸರ್ಕಾರ ತಕ್ಷಣ ಜಾರಿಗೊಳಿಸುವ ಯೋಜನೆಗಳೇನು? ಎನ್​ಡಿಎ ಸರ್ಕಾರದ ಮುಂದಿರುವ ದೊಡ್ಡ ಸವಾಲುಗಳು ಯಾವವು??

ಹೌದು ಬಹುದಿನಗಳಿಂದ ನಡೆಯುತ್ತಿರುವ ಬಸ್ ದರದಲ್ಲಿ ಹಚ್ಚಳಕ್ಕೆ ಸಂಬಂಧಪಟ್ಟಂತೆ ಈಗ ಬಿಗ್ ನ್ಯೂಸ್ ಒಂದು ಹೊರ ಬಂದಿದ್ದು, ಕಾರ್ಮಿಕರ ಹಿತದೃಷ್ಟಿಯಿಂದ ಹಾಲಿ ಟಿಕೆಟ್ ದರಕ್ಕಿಂತ ಶೇ 20ರಷ್ಟು ದರವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜ್ ಹೇಳಿದ್ದು, ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕಾಗಿ ಟಿಕೆಟ್ ದರ ಏರಿಕೆ ಮಾಡಬೇಕಿದ. ದರ ಹೆಚ್ಚಳದ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಲೋಕಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಸರ್ಕಾರಿ ಬಸ್ ದರ ಏರಿಕೆಯ ಬಗ್ಗೆ ಚರ್ಚೆಗಳು ಆರಂಭವಾಗಲಿದೆ ಎಂದು ತಿಳಿಸಿದರು ಈಗ ಚುನಾವಣೆ ಮುಗಿದಿದ್ದು ಈ ಚರ್ಚೆ ಆರಂಭವಾಗಿದೆ. ಕಳೆದ ಏಳು ವರ್ಷಗಳಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಿಲ್ಲ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಹೆಚ್ಚಳವಾಗಿವೆ. ಸಾರಿಗೆ ಸಂಸ್ಥೆಗಳ ವೆಚ್ಚ, ಕಾರ್ಮಿಕರ ಸಂಬಳ, ನಿರ್ವಹಣೆ ಮುಂತಾದವುಗಳನ್ನು ನಿಭಾಯಿಸಲು ದರ ಹೆಚ್ಚಳ ಮಾಡುವುದು
ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕಾಗಿ ಟಿಕೆಟ್ ದರ ಏರಿಕೆ ಮಾಡಬೇಕಿದ. ದರ ಹೆಚ್ಚಳದ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ‘ಪ್ರಯಾಣ ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಬೇಕು’ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸುಗಳನ್ನು ನೀಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಮೂರು ತಿಂಗಳಿಗೊಮ್ಮೆ ಪಾಸು ನವೀಕರಣ ಮಾಡಲಾಗುತ್ತದೆ. ಈ ಯೋಜನೆ ಯಶಸ್ವಿಯಾದರೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೂ ಪಾಸು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಬಿಎಂಟಿಸಿ ಪ್ರತಿ ವರ್ಷ 200 ಕೋಟಿ ನಷ್ಟ;

ಬಿಎಂಟಿಸಿ ಪ್ರತಿ ವರ್ಷ 200 ಕೋಟಿ ನಷ್ಟ ಅನುಭವಿಸುತ್ತಿದೆ. ಆಡಳಿತದಲ್ಲಿನ ದೋಷ, ಅವ್ಯವಹಾರದಿಂದಾಗಿ ನಿಗಮ ನಷ್ಟದ ಹಾದಿ ಹಿಡಿದಿದೆ. ದರ ಹೆಚ್ಚಳ ಮಾಡಲು ಅನುಮತಿ ನೀಡದಿದ್ದರೆ ನಷ್ಟದಲ್ಲಿರುವ ಸಂಸ್ಥೆ ನಡೆಸಲು ಆರ್ಥಿಕ ನೆರವು ನೀಡುವಂತೆ ಕೇಳಿದ್ದೇನೆ’ ಲೋಕಸಭಾ ಚುನಾವಣೆಗೆ ಮೊದಲೇ ಬಸ್ ಏರಿಕೆ ಕುರಿತು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿರಲಿಲ್ಲ. ಈಗ ಚುನಾವಣೆ ಮುಗಿದಿದ್ದು, ಇದಕ್ಕೆ ಒಪ್ಪಿಗೆ ಸಿಗಲಿದೆಯೇ ಎನ್ನುವ ನಿರಿಕ್ಷೆಯಲ್ಲಿದೇವೆ. ಎಂದು ಸಚಿವರು ಹೇಳಿದ್ದಾರೆ.

ಹೊಸ ಬಸ್ ಖರೀದಿ, ಬಸ್ ನಿಲ್ದಾಣ ಸ್ಥಾಪನೆ?

3500 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ. ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಬಸ್‌ಗಳ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತದೆ. ಹೊರ ಮತ್ತು ಒಳ ವಿನ್ಯಾಸ, ಬಣ್ಣವನ್ನು ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ. ತಾಲೂಕು ಮಟ್ಟದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ಸಾರಿಗೆ ಇಲಾಖೆ ನಿರ್ಮಾಣ ಮಾಡಲಿದೆ. ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪನೆ ಮಾಡಲು ಅವಕಾಶ ನೀಡಲಾಗುತ್ತದೆ. ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ಇಂತಹ ನಿಲ್ದಾಣ ಸ್ಥಾಪನೆಯಾಗಲಿದೆ. ಇದಕ್ಕಾಗಿ 250 ಕೋಟಿ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಎಂದು ತಿಳಿಸಿದ್ದಾರೆ.

Also read: ಕರ್ನಾಟಕ ಜನತೆಯೇ ಭಾರೀ ತಿರಸ್ಕಾರದ ನಡುವೆಯೂ ಮುಂದುವರೆದ ಮೈತ್ರಿ ಸರ್ಕಾರ!! ಎಚ್.ಡಿ.ಕೆ. ಇನ್ನೂ ನಾಲ್ಕು ವರ್ಷ ಸಿ.ಎಂ. ಆಗಿ ಇರ್ತಾರ??