ಕೆ.ಎಸ್.ಆರ್.ಟಿ.ಸಿ. ಬಸ್-ಗಳಲ್ಲಿ ಶೇಕಡಾ 25% ರಿಯಾಯಿತಿ ಪಡೆಯುವುದು ಹೇಗೆ??

0
1002

ಕರ್ನಾಟಕ ಸರ್ಕಾದಿಂದ ಹಿರಿಯ ನಾಗರಿಕರಿಗೆ ನೀಡುವ ಗುರುತಿನ ಚೀಟಿ ಇದ್ದರೆ ಮಾತ್ರ ಕೆಎಸ್ ಆರ್ ಟಿಸಿಯಲ್ಲಿ ರಿಯಾಯಿತಿ ಲಭಿಸುತ್ತಿತ್ತು. ಆದರೆ ಇನ್ನು ಅದೆಲ್ಲಾ ಅವಶ್ಯಕವಿಲ್ಲ. ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಚೀಟಿಯನ್ನು ತೋರಿಸಿ ನಾಗರಿಕರು 25ರಷ್ಟು ರಿಯಾಯಿತಿ ಪಡೆಯಬಹುದು.

ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಹಿರಿಯ ನಾಗರಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೀಡುವ ಚೀಟಿ ತೋರಿಸುವುದು ಕಡ್ಡಾಯವಾಗಿತ್ತು. ಅನಿವಾರ್ಯ ಕಾರಣಗಳಿಂದ ವಯೋವೃದ್ಧರು ಚೀಟಿ ಪಡೆಯದೆ, ರಿಯಾಯಿತಿ ಇಲ್ಲದೆ ಪ್ರಯಾಣ ನಡೆಸುತ್ತಿದ್ದರು. ಆದರೆ ಇನ್ನು ಈ ಚಿಂತೆ ನಾಗರಿಕರಿಗೆ ಕಾಡದು. ನಾಗರಿಕರ ಸಮಸ್ಯೆಯನ್ನು ಮನಗಂಡು ಸರ್ಕಾರ ಕೈ ಗೊಂಡ ಕ್ರಮ ಹಿರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅಧಿಕೃತ ಗುರುತಿನ ಚೀಟಿ ತೋರಿಸಿ ಬಸ್ ಗಳಲ್ಲಿ ಸಂಚರಿಸಿ ರಿಯಾಯಿತಿಯ ಲಾಭ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Related image

ಯಾವ ಯಾವ ಚೀಟಿಗಳನ್ನು ತೋರಿಸಬಹುದು: ಎಲೆಕ್ಷನ್ ಕಾರ್ಡ್, ಪಾಸ್ಪೋಪೊರ್ಟ್, ಆಧಾರ್, ಡ್ರೈವಿಂಗ್ ಲೈನ್ಸನ್, ವಾಸಸ್ಥಳ ಹಾಗೂ ಹುಟ್ಟಿದದಿನಾಂಕ ನಮೂದಿಸಿ ಸಾರ್ವಜನಿಕ ವಲಯ ಘಟಕಗಳಿಂದ(ಪಿಎಸ್‌ಯುಎಸ್‌)ವಿತರಿಸುವ ಗುರುತಿನ ಚೀಟಿ, ಮುಂತಾದ ಚೀಟಿಗಳನ್ನು ತೋರಿಸಿದಲ್ಲಿ ರಿಯಾಯಿತಿ ಲಭಿಸುತ್ತದೆ.

Image result for ksrtc karnataka aadhar

ಕೆಎಸ್ ಆರ್ ಟಿಸಿ ನೀಡುವ ಚೀಟಿಯಲ್ಲಿ ಏನಿದೆ: ಈ ಗುರುತಿನ ಚೀಟಿಯಲ್ಲೂ ವ್ಯಕ್ತಿಯ ಭಾವ ಚಿತ್ರ ಹಾಗೂ ಅವರ ವಯಸ್ಸು ಮತ್ತು ವಿಳಾಸದ ಸಂಪೂರ್ಣ ಮಾಹಿತಿ ಇರುತ್ತದೆ. ಅಲ್ಲದೆ ಇದ್ದಕ್ಕೆ ಒಂದು ನಂಬರ್ ನೀಡಿದ್ದಾರೆ. ಈ ನಂಬರ್ ನಿರ್ವಾಹಕ ಟಿಕೆಟ್ ನೀಡುವ ಸಂದರ್ಭದಲ್ಲಿ ನಮೂದಿಸಿ ನೀಡುತ್ತಾನೆ. ಇದರಿಂದ ಹಿರಿಯ ನಾಗರಿಕೆಗೆ 25 ಪ್ರತಿಷತ ರಿಯಾಯಿತಿ ಲಭಿಸುತ್ತದೆ.