ಕುಜ ಗ್ರಹದ ಕಾರಕತ್ವಗಳು ಮತ್ತು ಕುಜಗ್ರಹ ಶಾಂತಿಗೆ ಸರಳ ಪರಿಹಾರ!!

0
2181

ಕುಜ ಗ್ರಹದ ಕಾರಕತ್ವಗಳು ಮತ್ತು ಕುಜಗ್ರಹ ಶಾಂತಿಗೆ ಸರಳ ಪರಿಹಾರ.

ಕುಜನು ರುದ್ರನ ಬಿಸಿಯಾದ ಬೆವರಿನ ಹನಿಯಿಂದ ಜನನ ಅದ್ದರಿಂದ ಅಗ್ನಿ ಕಾರಕ, ಅಗ್ನಿಯಂತೆ ದೇಹಕಾಂತಿ, ದೇವರ ಸೇವೆಯೆಚ್ಚು, ಸಾಹಸ, ಪರಾಕ್ರಮ, ಧೈರ್ಯ, ಶಾಸ್ತ್ರೀಯ ವಿಷಯದಲ್ಲಿ ಅಭಿರುಚಿ, ಅಭಿಯಾನ, ಸೇನಾಪತಿ, ಸ್ವಾಭಿಮಾನಿ, ಹಿಂದೆ ಮುಂದೆ ನೋಡದೆ ಮುನ್ನುಗ್ಗುವರು, ಕಿರಿಯ ಸಹೋದರ ಸಹೋದರನ ಕಾರಕ, ಸಂಘಟನಾ ಶಕ್ತಿ, ಭೂಮಿ, ಸೇನ ನಾಯಕ, ದಂಡಾಧಿಕಾರಿ, ರಕ್ತ ಕಾರಕ, ಯುದ್ದಕಾರಕ, ಸ್ತ್ರೀಯರಿಗೆ ಪತಿ ಕಾರಕ, ವೈದವ್ಯ ಯೋಗ ಕಾರಕ.

ಕುಜನು ಉಚ್ಚಕ್ಷೇತ್ರ, ಸ್ವಕ್ಷೇತ್ರ ಶುಭ ಸ್ಥಾನದಲ್ಲಿ ಇದ್ದರೆ ಮೇಲೆ ಹೇಳಿರುವ ಕಾರಕದ ಸಂಭಂದಪಟ್ಟಂತೆ ಯಾವುದೇ ತೋಂದರೆಗಳು ಆಗುವುದಿಲ್ಲ.

ಕುಜನು ನೀಚಕ್ಷೇತ್ರ, ಶತೃ ಮನೆಯಲ್ಲಿ ಇದ್ದರೆ ದಶಾಭುಕ್ತಿ ಸಮಯದಲ್ಲಿ ಅಪವಾದಗಳು, ಕೋಪ, ಕಲಹ, ನಷ್ಟ,
ವಾದ, ಶತ್ರುಬಾಧೆ, ಕ್ರಾಂತಿ, ಅಫಘಾತ, ಬೆಂಕಿಯಿಂದ ಅಫಘಾತ,ಮಿದುಳು ಜ್ವರ, ಉರಿ, ಸಿಡುಬು, ಕ್ಯಾನ್ಸರ್, ಖಂಡಗಳ ನೋವು, ರಕ್ತ ಕಡಿಮೆ, ಅಸ್ತಮ, ಹೀಗೆ ಅನೇಕ ತೊಂದರೆಗಳು ಕಾಣುತ್ತದೆ.

ಕುಜನ ಸಂಭಂದಪಟ್ಟಂತೆ ಸುಲಭ ಪರಿಹಾರಗಳು:

1. ಸುಬ್ರಮಣ್ಯ ದೇವರ ಅಷ್ಟೋತರ ಓದಬೇಕು.
2. ಕೆಂಪು ವಸ್ತ್ರವನ್ನು ದಾನಮಾಡಬೇಕು
3. ಮಂಗಳವಾರ ಸುಬ್ರಮಣ್ಯನ ಸೇವೆ ಮಾಡಬೇಕು.
4. ದೇವಸ್ಥಾದ ಅರ್ಚಕರಿಗೆ ತೊಗರಿ ದಾನಮಾಡಬೇಕು.
5. ಹವಳ ವನ್ನು ದರಿಸಿದರೆ ಒಳ್ಳೆಯದು.
6. ಕಪ್ಪು ಇರುವೆಗೆ ಸಕ್ಕರೆ ಹಾಕಿಕೊಂಡು ಬನ್ನಿ.
7. ಸಿಹಿರೊಟ್ಟಿಯನ್ನು ನಾಯಿಗಳಿಗೆ ಹಾಕಿರಿ.
8.ಬೆಳ್ಳಿ ಎತ್ತಿನ ಪ್ರತಿಮೆ ದಾನಮಾಡಿ.
9.ಮತ್ತು ಚಿಕ್ಕ ಮಕ್ಕಳಿಗೆ ಸಿಹಿ ಪದಾರ್ಥ ಕೊಟ್ಟು ಸಂತೋಷ ಪಡಿಸಿ.
10.ಕರ್ನಾಟಕದ ಕುಕ್ಕೆ ಸುಬ್ರಮಣ್ಯಗೆ ಹೋಗಿ ಸೇವೆ ಸಲ್ಲಿಸಿ.