ಗುಜರಾತಿನಲ್ಲಿ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅದು ಗೆಲುತ್ತಿತ್ತು: ಕುಮಾರಸ್ವಾಮಿ.. ಕರ್ನಾಟಕದಲ್ಲಿ ಜೆಡಿಎಸ್ ಭವಿಷ್ಯವೇನು?

0
327

ಗುಜುರಾತ್ ಮತ್ತು ಹಿಮಾಚಲ್-ಪ್ರದೇಶದಲ್ಲಿ ಕಮಲ ಅರಳಿಸಿದ ಹಾಗೆ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಪಕ್ಷ ಅಧಿಕಾರಕ್ಕೇರಲು ಪ್ರಯತ್ನಿಸಿದರೆ ಅವರಿಗೆ ನಿರಾಸೆಯಾಗಲಿದೆ ಎಂಬ ಮಾತನ್ನು ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಎರಡು ರಾಷ್ಟೀಯ ಪಕ್ಷಗಳಿಗೂ ಬೇಸರ ಮೂಡಿಸಿದೆ, ಒಂದು ವೇಳೆ ಅಲ್ಲಿಯೂ ಕೂಡ ಒಂದು ಪ್ರಾದೇಶಿಕ ಪಕ್ಷ ಇದ್ದಿದ್ದರೆ ಖಂಡಿತ ಜಯ ಗಳಿಸುತ್ತಿತ್ತು ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಅಷ್ಟು ಸ್ಥಾನಗಳನ್ನು ಗಳಿಸಲು ಮೂರು ಯುವಕರೆ ಕಾರಣ ಅವರಿಲ್ಲದೆ ಹೋಗಿದ್ದಾರೆ ಕಾಂಗ್ರೆಸ್-ಗೆ ಮುಖಭಂಗವಾಗುತ್ತಿತು. ಬಿಜೆಪಿಯವರು ಸಹ ಬಹುಮತ ಗಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಸತತ ಎರಡೂವರೆ ತಿಂಗಳು ಹರಸಾಹಸಪಟ್ಟಿದ್ದಾರೆ ಎಂದರು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳೇ ಅದರಲ್ಲೂ ವಿಶೇಷವಾಗಿ ನರ್ಮದಾ ತೀರದ ಜನರು ಹಾಗು ಸುಮಾರು 6 ಲಕ್ಷ ನೋಟಾ ಮತಗಳೇ ಈ ಎರಡು ಪಕ್ಷಗಳಿಗೆ ನಿರಾಸೆ ಮೂಡಿಸಿವೆ. ಆದರೆ ಒಂದು ವೇಳೆ ಗುಜರಾತ್-ನಲ್ಲಿ ಪ್ರಾದೇಶಿಕ ಪಕ್ಷ ಇದ್ದಿದ್ದರೆ ಖಂಡಿತ ಈ ಸಂಸಸ್ಯೆಗಳನ್ನು ಎದುರಿಸಲು ಪ್ರಯತ್ನಿಸಿ, ಜನರಿಗೆ ಸಾಂತ್ವನ ಹೇಳಿ ಜಯಗಳಿಸುತ್ತಿತ್ತು ಎಂದರು.

ಮುಂದಿನ ಚುನಾವಣೆಯಲ್ಲಿ ಜನ ನಮ್ಮ ಪಕ್ಷಕ್ಕೆ ಬಹುಮತ ನೀಡಲಿದ್ದಾರೆ, ಕರ್ನಾಟಕದಲ್ಲಿ ಬಿಜೆಪಿಯವರ ಸರ್ಕಾರವಿದ್ದಾಗ ನಡೆದ ಹಗರಣಗಳನ್ನು ಜನ ಇನ್ನು ಮರೆತಿಲ್ಲ ಇದಕ್ಕೆ ಜನ ಉತ್ತರನೀಡುತ್ತಾರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಗರಣಗಳಿಂದ ಕೂಡಿದೆ, ಮುಖ್ಯಮಂತ್ರಿಗಳು ಅಭಿವೃದ್ಧಿ ಕಾಮಗಾರಿಗಳ ಕಡೆ ಗಮನ ಹರಿಸದೆ ಬರಿ ಜಾಹಿರಾತಿನಲ್ಲಿ ತಮ್ಮ ಸಮಯ ಕಳೆಯುತ್ತಿದ್ದಾರೆ, ಜನರ ತೆರಿಗೆ ಹಣವನ್ನು ಬಳಸಿ ಇವರು ಪಕ್ಷದ ಪ್ರಚಾರ ಮಾಡಿಕೊಂಡು ಸುತ್ತುತ್ತಿದ್ದಾರೆ, ಇವೆಲ್ಲದಕ್ಕೂ ಜನ ಉತ್ತರ ನೀಡಲಿದ್ದಾರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪಷ್ಟ ಬಹುಮತಗಳೊಂದಿಗೆ ಅಧಿಕಾರಕ್ಕೇರಲಿದೆ ಎಂದರು.