ದಿನೇ ದಿನೇ ಕುಮಾರಸ್ವಾಮಿಯವರ ಆಡಳಿತ ವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ಅವರ ಈ ಒಂದು ನಡೆ ಅದಕ್ಕೆ ಉದಾಹರಣೆ!!

0
562

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ -ಯವರಿಗೆ ರಾಜ್ಯದ ಜನರ ಮೇಲೆ ದಿನಕ್ಕೊಂದು ರೀತಿಯಲ್ಲಿ ಪ್ರೀತಿ ಹೆಚ್ಚಾಗುತ್ತಿದೆ, ಇವಾಗ ಏನಾಗಿದೆ ಅಂದ್ರೆ ರಾಜ್ಯದ ಜನರಿಗೆ ತಲುಪುವ ಸರ್ಕಾರದ ಯೋಜನೆಗಳನ್ನು ಜಿಲ್ಲಾಧಿಕಾರಿಗಳು ಮತ್ತು ಪಂಚಾಯಿತಿ CEO-ಗಳು  ದೊಂಬರಾಟ ಮಾಡದೆ ಜನರಿಗೆ ಸೇರಬೇಕಾದ ಯೋಜನೆಗಳನ್ನು ಸಮರ್ಪಕವಾಗಿ ನೀಡಬೇಕು ಅಂತಾ ತಾಕೀತು ಮಾಡಿದ್ರಂತೆ.

Also read: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಜೆಟ್-ನಲ್ಲಿ ಉತ್ತರ ಕರ್ನಾಟಕಕ್ಕೆ ಮೋಸವಾಗಿದೆ ಎಂದು ಆರೋಪಿಸಿ ಪ್ರತ್ಯೇಕ ರಾಜ್ಯಕ್ಕೆ ಹೋರಾಟ!!

ಹೌದು, ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ CEO-ಗಳ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸರ್ಕಾರದ ಯೋಜನೆಗಳನ್ನು ದೂರುಪಯೋಗ ಮಾಡದೆ ರಾಜ್ಯದ ಜನರಿಗೆ ತಲುಪಿಸುವಂತೆ ಏರುದ್ವನಿಯಲ್ಲಿ ತಾಕೀತು ಮಾಡಿ, ನಂತರ ಹೀಗೆ ಮಾತನಾಡಿದರು, “ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬ ಕಲ್ಪನೆಯನ್ನು ತಲೆಯಿಂದ ತೆಗೆದುಹಾಕಿ, ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಆದರಿಂದ ಉತ್ತಮವಾಗಿ ಕೆಲಸ ಮಾಡಿ ರಾಜ್ಯಕೆ ಒಳ್ಳೆಯ ಹೆಸರು ತಂದುಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ”. “4 ದಿನಗಳಲ್ಲಿ ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಬೇಕಿದೆ” ಎಂದು ಹೇಳಿ ಹಾಗೆ ಮುಂದುವರೆಸುತ್ತಾ
ವಿವಿಧ ಜಿಲ್ಲೆಗಳ ಮಳೆ, ಬಿತ್ತನೆ ಪ್ರಗತಿಯ ಮಾಹಿತಿ ಪಡೆದು ಮುಖ್ಯಮಂತ್ರಿಗಳು ಪರಿಹಾರ ಕ್ರಮಗಳನ್ನು NDRF ಮಾರ್ಗಸೂಚಿಗಳನ್ವಯ ಕೈಗೊಳ್ಳುವಂತೆ ಸೂಚಿಸಿದರು. ನಂತರ ಕೆಲವೊಂದು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪರ್ಯಾಯ ಯೋಜನೆಯಿದೆ, ಅದನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

Also read: ತನಗೆ ಗೊತ್ತಿಲದೇ whatsapp ಗ್ರೂಪ್-ನ ಅಡ್ಮಿನ್ ಆದ!! ವಿವಾದಾತ್ಮಕ ಸಂದೇಶದಿಂದ ಐದು ತಿಂಗಳಿನಿಂದ ಜೈಲಿನಲ್ಲಿರುವ ಈತನ ಕಥೆ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ!!

“ರೈತರ ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದುಕೊಳ್ಳಿ, ರೈತರಿಗೆ ಸರ್ಕಾರ ಇಷ್ಟೊಂದು ಬೆಂಬಲ ನೀಡುತ್ತಿದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಏನು? ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡುವಾಗ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ವಿಳಂಬವಾಗುತ್ತಿದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿಗಳ ಮುಖಾಂತರ ಶೀಘ್ರವೇ ವರದಿ ತರಿಸಿಕೊಳ್ಳಲು ಅದಕ್ಕೆ ಕ್ರಮ ಕೈಗೊಳ್ಳಲು ಅವಕಾಶವಿದೆ, ವಿನಾ ಕಾರಣ ರೈತರ ಕುಟುಂಬಕ್ಕೆ ಸಂಕಷ್ಟ ಕೊಡಬೇಡಿ.” ಎಂದು ತಾಕೀತು ಮಾಡಿದರು.

“ರೈತರ ಆತ್ಮಹತ್ಯೆ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ತೀರ್ಮಾನ ಕೈಗೊಂಡು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಶೀಘ್ರವೇ ವರದಿ ತರಿಸಿಕೊಂಡು ಪರಿಹಾರ ವಿತರಿಸಲು ಮಾರ್ಗದರ್ಶನ ನೀಡಿ, ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಈಗಾಗಲೇ ಅವುಗಳನ್ನು ಗುರುತಿಸಲಾಗಿದೆ ಅಲ್ಲಿ ಬರ ಪರಿಸ್ಥಿತಿ ಎದುರಾದರೇ ಕೈಗೊಳ್ಳಬೇಕಾದ ಪರಿಹಾರ ಯೋಜನೆ ರೂಪಿಸುವಂತೆ ಕ್ರಮಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದೆಯೂ ಕೇವಲ 20 ತಿಂಗಳುಗಳ ಆಡಳಿತ ನಡೆಸಿದ್ದಾಗಲು ಕುಮಾರಸ್ವಾಮಿಯವರು ಇಂತಹ ಪ್ರಶಂಸನೀಯ ಆಡಳಿತ ವೈಖರಿಯಿಂದ ಜನರ ಮೆಚ್ಚುಗೆ ಗಳಿಸಿದ್ದನ್ನು ಜನ ಇನ್ನೂ ಮರೆತಿಲ್ಲ, ಕೆಲವು ಅಧಿಕಾರಿಗಳ ದರ್ಪ, ಅದಕ್ಷ ಆಡಳಿತದಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗೆ ಇಂತಹ ಖಡಕ್ ಸೂಚನೆಯಿಂದ ಅಧಿಕಾರಿಗಳ ಮೇಲೆ ನಿಯಂತ್ರಣ ಕಾಯ್ದುಕೊಂಡು ದಕ್ಷ ಆಡಳಿತ ಕೊಟ್ಟರೆ ಜನರು ಕುಮಾರಸ್ವಾಮಿಯವರನ್ನು ಖಂಡಿತ ಮುಂದಿನ ಚುನಾವಣೆಯಲ್ಲಿ ಕೈ ಬಿಡುವುದಿಲ್ಲ ಎಂಬುದು ಕೆಲ ರಾಜಕೀಯ ಪಂಡಿತರ ಅಭಿಪ್ರಾಯ.