ಲಾವಂಚದ ಆರೋಗ್ಯಕಾರಿ ಗುಣಗಳು ಗೊತ್ತಾಗಿದ್ರಿಂದಾನೆ ನಮ್ಮ ಹಿರಿಯರು ಅದನ್ನ ಕುಡಿಯೋ ನೀರಿನ ಮಡಕೆಯಲ್ಲಿ ಹಾಕ್ತಿದ್ರು ಅನ್ಸುತ್ತೆ… ಯಾಕೆ ಅಂತ ತಿಳ್ಕೊಬೇಕಾದ್ರೆ ಈ ಆರ್ಟಿಕಲ್ ಓದಿ..

0
2284

Kannada News | Health tips in kannada

ಲಾವಂಚ ಹುಲ್ಲಿನ ಜಾತಿಗೆ ಸೇರಿದ, ದಪ್ಪ ದರ್ಬೆಯಂತಿರುವ ಬಹುವಾರ್ಷಿಕ ಸಸ್ಯ. ಉಶೀರಾ ವೆಂಬ ಹೆಸರಿನಿಂದ ಆಯುರ್ವೇದದಲ್ಲಿ ಪ್ರಚಲಿತವಿರುವ ಲಾವಂಚವು ಉತ್ತಮ ಪಿತ್ತಶಾಮಕ. ಬಾಯಾರಿಕೆ, ಜ್ವರ, ಮೈಯುರಿ, ಬೆವರಿನ ವಾಸನೆಗಳನ್ನು ಹೋಗಲಾಡಿಸುವುದಲ್ಲದೆ ರಕ್ತ ಶುದ್ಧಿಯನ್ನು ಮಾಡುತ್ತದೆ.

– ಒಂದು ಕೊಡ ನೀರಿಗೆ ಒಂದೆರಡು ಟೀ ಚಮಚ ಲಾವಂಚದ ಪುಡಿಯನ್ನು ಹಾಕುವುದರಿಂದ ನೀರು ಕುಡಿಯಲು ಹೆಚ್ಚು ಹಿತಕರವಾಗಿರುತ್ತದೆ. ಬಾಯಾರಿಕೆ ಕಡಿಮೆಯಾಗುತ್ತದೆ.

-ಒಂದು ದೊಡ್ಡ ಲೋಟ ನೀರಿಗೆ ಒಂದೆರಡು ಚಮಚ ಲಾವಂಚದ ಪುಡಿ ಸೇರಿಸಿ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಕುಡಿಸಿ ಅರ್ಧ ಲೋಟಕ್ಕೆ ಇಂಗಿಸಬೇಕು. ಹದಿನೈದು ಇಪ್ಪತ್ತು ನಿಮಿಷಗಳು ಪಾತ್ರ್ಯ ಬಾಯಿಯನ್ನು ಮುಚ್ಚಿಟ್ಟ ನಂತರ ಕಷಾಯವನ್ನು ಶೋಧಿಸಿಟ್ಟುಕೊಳ್ಳಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಸಕ್ಕರೆ ಬೆರೆಸಿ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಕುಡಿಯಲು ಕೊಡಬಹುದು. ಈದರಿಂದ ಜ್ವರದ ತಾಪ, ಬಾಯಾರಿಕೆ, ಗಂಟಲು ಉರಿ, ಬಳಲಿಕೆ, ಹೊಟ್ಟೆಯಲ್ಲಿನ ಸಂಕಟ ಮುಂತಾದವುಗಳು ಕಡಿಮೆಯಾಗುತ್ತದೆ.

– ಅಮ್ಮ, ದಢಾರ, ಸರ್ಪಸುತ್ತುಗಳಲ್ಲಿ ಬೆಲ್ಲ, ಸಕ್ಕರೆಗಳನ್ನು ಸೇರಿಸಿದ ಕಷಾಯವನ್ನು ಆಗಾಗ ಸಿಂಪಡಿಸುವುದರಿಂದ ಉರಿ ಕಡಿಮೆಯಾಗುತ್ತದೆ.

– ವಿಷದ ಕೀಟಗಳು ಕಡಿದು ಮೈ ಉರಿದಾಗ ಕಷಾಯವನ್ನು ಆ ಜಾಗದ ಮೇಲೆ ಸಿಂಪಡಿಸಬಹುದು. ಸಕ್ಕರೆ ಸೇರಿಸಿ ಕುಡಿಯಲೂ ಬಹುದು. ಇದರಿಂದ ಉರಿ ಬಹು ಬೇಗ ಕಡಿಮೆಯಾಗುತ್ತದೆ.

Also Watch:

Also Read: ಬ್ರಾಹ್ಮಿ/ ಒಂದೆಲಗ ನೋಡಲು ಪುಟ್ಟದಾದರೂ ಅದರ ಆರೋಗ್ಯಕಾರಿ ಗುಣಗಳು ಬೆಟ್ಟದಷ್ಟಿವೆ ಎಂಬುದು ನಿಮಗೆ ಗೊತ್ತಾ?