ಸ್ತ್ರೀಯರು ಒತ್ತಡದಿಂದ ದೂರವಿರಲು ಹೀಗೆ ಮಾಡಬಹುದು.

0
514

*ಕುಟುಂಬದ ಹೊಣೆಗಾರಿಕೆಯನ್ನು, ಮನೆ ಕೆಲಸಗಳನ್ನು ಗಂಡ ಮತ್ತು ಮನೆಯ ಇತರ ಸದ್ಸಯರಿಗೂ ಹಂಚಿರಿ.

*ಯಾವಾಗಲಾದರೂ ಮಕ್ಕಳು ಹೋಂವರ್ಕ್ ಮಾಡದಿದ್ದರೆ, ಸರಿಯಾಗಿ ಮಾಡದಿದ್ದರೂ ಕಠಿಣವಾಗಿ ವರ್ತಿಸಬೇಡಿ.

*ಫರ್ ಫೆಕ್ಷನ್ ಗಾಗಿ ನಡೆಸುವ ತಾಪತ್ರಯವು ಒತ್ತಡವನ್ನು ಹೆಚ್ಚಿಸುತ್ತದೆ.

*ನಿಗೆಂದು ಸ್ವಲ್ಪ ಸಮಯವನ್ನು ಮೀಸಲಿರಿಸಿಕೊಳ್ಳಿ. ನಿಮ್ಮ ಅಭಿರುಚಿಗೆ ಆದ್ಯತೆಯನ್ನು ನೀಡಿರಿ.

*ನೀವು ಮಾಡಬೇಕಾದ ಕೆಲಸವನ್ನು ತೃಪ್ತಿಯಿಂದ ಮಾಡಿರಿ. ಸಂತೋಷದಿಂದ ಮಾಡುವುದೂ ಒಳ್ಳೆಯದು. ಮಕ್ಕಳೊಂದಿಗೆ ಕಳೆಯುವ ಸಮಯವೂ ಉಲ್ಲಾಸದಿಂದ ಕೂಡಿರಲಿ.

*ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಯೋಜನಾ ಬದ್ಧವಾಗಿರಬೇಕು. ಇಲ್ಲವಾದರೆ ಗಂಡರ ಗೊಳು ಉಂಟಾಗುವುದು. ಒಂದು ಕೆಲಸಕ್ಕೆ ಬದಲಾಗಿ ಮತ್ತೊಂದು ಕೆಲಸ ಮಾಡುತ್ತೇವೆ. ಇದು ಒತ್ತಡವನ್ನು ಹೆಚ್ಚಿಸುತ್ತದೆ.

*ಹೊಸ ಹೊಣೆಗಾರಿಕೆ ಎದುರಾದಾಗ ಧೈರ್ಯಗುಂದಬಾರದು. ಅದನ್ನು ಯಶಸ್ವಿಯಾಗಿ ಹೇಗೆ ಮಾಡಬೇಕೆಂದು ಆಲೋಚಿಸಬೇಕಾಗಲಿ, ಭಯದಿಂದ ಒತ್ತಡಕ್ಕೆ ಗುರಿಯಾಗಬಾರು.

*ಟೈಮ್ ಮ್ಯಾನೇಜ್ ಮೆಂಟ್’ಗೆ ಆದ್ಯತೆ ಕೊಡುವುದರಿಂದ ಒತ್ತಡವು ದೂರವಾಗುತ್ತದೆ. ನಾಳೆಯ ಕೆಲಸವನ್ನು ಈಗಲೇ ಮಾಡಬೇಕು. ಇಂತಹ ಮಾತುಗಳನ್ನು ನೆನಪಿಸಿಕೊಳ್ಳಿರಿ.

*ನಾವು ಮಾಡುವ ಕೆಲಸ ಯಾವುದಾದರೂ ಅದು ಕಷ್ಟಕರವಾಗಿರದೆ ಖುಷಿಯಾಗಿ ಇರುತ್ತದೆ. ಉತ್ಸಾಹವನ್ನು ನೀಡುತ್ತದೆ.