ಮೋದಿ ಭದ್ರತಾ ತಂಡದಲ್ಲಿ ಮಹಿಳಾ ಕಮಾಂಡೋ ಯಾರು ಅಂತೀರಾ ಈ ವಿಡಿಯೋ ನೋಡಿ…!

0
857
ಪ್ರಪ್ರಥಮ ಬಾರಿಗೆ ಭಾರತದ ಪ್ರಧಾನಮಂತ್ರಿ ಮೋದಿ ಯವರ ಭದ್ರತಾ ತಂಡದಲ್ಲಿ ಮಹಿಳಾ ಎಸ್.ಪಿ.ಜಿ..
ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡೋ ಒಬ್ಬರು ಭಾರತದ ಪ್ರಧಾನಮಂತ್ರಿಯವರ ವಿಶೇಷ ಭದ್ರತಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ..
ಕಳೆದ ಬಾರಿ ಪ್ರಧಾನಿ ಮೋದಿಜಿ ನಮ್ಮ ಸೇನೆಯಲ್ಲಿ ಹೆಚ್ಚು ಹೆಚ್ಚು ನಾರೀ ಶಕ್ತಿಗೆ ಅವಕಾಶ ಕೊಡುವ ಆಶಯ ವ್ಯಕ್ತ ಪಡಿಸಿದ್ದರು. ಅದಾದ ನಂತರ ಮೂವರು ಮಹಿಳಾ ಪೈಲಟ್ ಗಳನ್ನ ಸೇನೆ ನೇಮಕ ಮಾಡಿತ್ತು‌. ಗಣರಾಜ್ಯೋತ್ಸವದಲ್ಲಿ ‘ನಾರೀ ಶಕ್ತಿ’ ಯನ್ನ ಮೊದಲ ಬಾರಿಗೆ ಮೋದಿ ಸರ್ಕಾರ ಅನಾವರಣ ಮಾಡಿತ್ತು. ಬರಾಕ್ ಒಬಾಮ ಭಾರತಕ್ಕೆ ಬಂದಾಗ ಮಹಿಳಾ ಅಧಿಕಾರಿಗೆ ‘ಗಾರ್ಡ್ ಆಫ್ ಹಾನರ್’ ನ ನೇತೃತ್ವ ವಹಿಸಲಾಗಿತ್ತು. ಈಗ ಖುದ್ದು ದೇಶದ ಪ್ರಧಾನಮಂತ್ರಿ ಯವರನ್ನ ರಕ್ಷಿಸುವ ತಂಡದಲ್ಲಿ ಮಹಿಳಾ ಕಮಾಂಡೋರನ್ನ ನೇಮಿಸಲಾಗಿದೆ..