ಈ ಯಂತ್ರವನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯಗಳು ನೆಲೆಸುತ್ತವೆಯಂತೆ..!

0
2663

ಸೃಷ್ಟಿಯ ವಿವಿಧ ಹಂತಗಳನ್ನು, ಅವುಗಳ ದೇವತೆಗಳನ್ನು ಯಂತ್ರಗಳ ಅಥವಾ ಚಕ್ರಗಳ ವಿನ್ಯಾಸದಲ್ಲಿ ಸೂಚಿಸಿ ಆರಾಧಿಸುವುದು ಬಹು ಹಿಂದಿನಿಂದ ಆಚಾರಿಸುತ್ತ ಬಂದಿರುವ ಒಂದು ಸತ್ಸಂಪ್ರದಾಯವಾಗಿದೆ.

ದೇವತಾ ವಿಗ್ರಹಗಳೂ, ಮಂತ್ರಗಳೂ ವಿವಿಧ ಆಧ್ಯಾತ್ಮಿಕ ಶಕ್ತಿಗಳ ಸಂಜ್ಞೆ ಯಾಗಿರುವಂತೆಯೇ ಕೆಲವು ರೇಖಾಕೃತಿಗಳೂ ಈ ದಿವ್ಯ ಶಕ್ತಿಗಳ ಸಂಕೇತಗಳಾಗಿವೆ.

ಯಂತ್ರ ಪೂಜೆಯಲ್ಲಿ ಯಂತ್ರದಲ್ಲಿ ನಿಶ್ಚಿತ ದೇವತೆಯ ರೂಪವನ್ನು ಭಾವಿಸಿ ಅರ್ಚನೆ ಮಾಡುವುದು, ದೇವರ ಆವಾಹನಾದಿ ಷೋಡಶೋಪಚಾರಗಳಿಂದ ಚಕ್ರಪೂಜೆ ಮಾಡಿದರೆ ಚಕ್ರದ ಸಂಕಲ್ಪಿತವಾದ ದೇವತೆಯನ್ನು ಪೂಜಿಸಿದಂತಾಗುವುದು.

ಲಕ್ಷ್ಮೀಯಂತ್ರವನ್ನು ಪೂಜಿಸುವುದರಿಂದ ಧನಾಕರ್ಷಣೆಯಾಗುವುದು, ಐಶ್ವರ್ಯ ಪ್ರಾಪ್ತಿಯೂ, ದಾರಿದ್ರ್ಯ ನಿವಾರಣೆಯೂ, ಸದಾಕಾಲವೂ ರಕ್ಷೆಯನ್ನು ನೀಡುತ್ತಾ ದುಷ್ಟ ಶಕ್ತಿಗಳನ್ನು ನಿವಾರಣೆ ಮಾಡಿ ಆರಾಧಕರಿಗೆ ತೇಜಸ್ಸು, ಉತ್ತಮ ವ್ಯಾಪಾರ,ವಿಧ್ಯಾ, ಬುದ್ದಿ, ಬೆಳೆಯುವಂತೆ ಮಾಡುತ್ತದೆ.

ಯಾವುದೇ ಯಂತ್ರವನ್ನು ಪೂಜಿಸುವಾಗ ಇದರಿಂದ ನಮ್ಮಲಿರುವ ದೋಷಗಳು ಕೆಟ್ಟತನಗಳು ದಾರಿದ್ರಗಳು ನಿವಾಣೆಯೂ ಆದೀತೆಂಬ ಅಚಲ ವಿಶ್ವಾಸವಿಡಬೇಕು ಮತ್ತು ಸಂಕಲ್ಪ ಮಾಡಬೇಕು.

source: static.drikpanchang.com

ಭಾಗ್ಯಲಕ್ಷ್ಮೀಯಂತ್ರ, ಕುಬೇರಯಂತ್ರ, ಅಷ್ಟಲಕ್ಷ್ಮೀಯಂತ್ರ ಹೀಗೆ ಹಲವಾರು ಬಗೆಯ ಯಂತ್ರಗಳಿವೆ ಇಂತಹ ಚಕ್ರ ಅಥವಾ ಯಂತ್ರದ ಮೂಲಕ ಲಕ್ಷ್ಮೀ ಉಪಾಸನೆ ಮಾಡುವ ಸಾಂಪ್ರದಾಯವೂ ಬಹಳ ಹಿಂದಿನದೆ ಕೆಲವರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ತಾಮ್ರ, ಬೆಳ್ಳಿ, ಬಂಗಾರದ ತಗಡಿನಲ್ಲಿ ಯಂತ್ರಗಳನ್ನು ಉಪಯೋಗಿಸಬಹುದು.