ಲಾಲ್ ಬಹದ್ದೂರ್ ಶಾಸ್ತ್ರಿರವರ ಬಳಿ ಕಾರ್ ಕೊಳ್ಳಲೂ 5000 ರುಪಾಯಿ ಇರಲಿಲ್ಲ, ಐಷಾರಾಮಿ ಕಾರುಗಳಲ್ಲಿ ತಿರುಗುವ ಇಂದಿನ ರಾಜಕಾರಣಿಗಳಿಗೆ ಅದು ಗೊತ್ತೇ?

0
1482

Kannada News | Karnataka News

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಾಲ್ ಬಹದ್ದೂರ್ ಶಾಸ್ತ್ರಿ, ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಮಂತ್ರಿ. ತಮ್ಮ ಸರಳತೆಯಿಂದಲೇ ಜನರ ಮನೆಮಾತಾಗಿದ್ದವರು. ಅವರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯನ್ನು ಇಂದು ತಿಳಿಸುತ್ತೇವೆ.

ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದ್ದರು. ಮೂವತ್ತು ವರುಷಗಳ ಸಮರ್ಪಣಾ ಸೇವೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಿಂದಿತ್ತು. ಈ ಅವಧಿಯಲ್ಲಿ ಅವರೊಬ್ಬ ಪ್ರಮಾಣಿಕ ಮತ್ತು ಅತ್ಯಂತ ಸಾಮಥ್ರ್ಯವಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.

ಅವರು ಪ್ರಧಾನಿಯಾದ ಮೇಲು ಅವರ ಬಳಿ ಒಂದು ಕಾರು ಸಹ ಇರಲಿಲ್ಲ ಮನೆಯವರು ಮತ್ತು ಬಂದುಗಳ ಒತ್ತಾಯಕ್ಕೆ ಮಣಿದು ಒಂದು ಕಾರನ್ನು ಕೊಳ್ಳಲು ನಿರ್ಧರಿಸಿದರು. ಫಿಯಟ್ ಕಂಪನಿಯ ಕಾರಿನ ಬೆಲೆಯನ್ನು ತಿಳಿದುಕೊಳ್ಳಲು ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚಿಸಿದರು.

ಪ್ರಧಾನಿಯ ಆಪ್ತ ಕಾರ್ಯದರ್ಶಿ ಫಿಯಟ್ ಕಂಪನಿಯ ಕಾರಿನ ಬೆಲೆ 12000 ರೂ. ಎಂದು ತಿಳಿದುಕೊಂಡು ಶಾಸ್ತ್ರಿಯವರಿಗೆ ತಿಳಿಸಿದರು. ಆಗ ತಮ್ಮ ಬ್ಯಾಂಕ್ ಖಾತೆಯಲ್ಲಿ ಕೇವಲ 7000 ರೂ. ಇದೆ ಈಗ ಏನು ಮಾಡುವುದು ಎಂದು ಅವರು ಚಿಂತಿಸತೊಡಗಿದರು.

ಶಾಸ್ತ್ರಿಯವರು ಬೇರೆ ದಾರಿ ಇಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 5000 ರೂ. ಮೊತ್ತಕ್ಕೆ ಲೋನ್ ಅರ್ಜಿಯನ್ನು ಸಲ್ಲಿಸಿದರು. ಇವರ ಲೋನ್ ಅರ್ಜಿಯನ್ನು ಬ್ಯಾಂಕಿನವರು ಕೂಡಲೇ ಮಂಜೂರು ಮಾಡಿದರು. ಆಗ, ಶಾಸ್ತ್ರಿಯವರು ನನ್ನ ಅರ್ಜಿಯ ಹಾಗೆ ಜನ-ಸಾಮಾನ್ಯರ ಅರ್ಜಿಯನ್ನು ಇಷ್ಟೇ ಬೇಗ ಮಂಜೂರು ಮಾಡಿ ಎಂದು ಸಹಲೇ ನೀಡಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ 5000 ಸಾಲ ಮತ್ತು ತಮ್ಮ ಬಳಿ ಇದ್ದ 7000 ರೂ. ಉಳಿತಾಯದ ಹಣವನ್ನು ಬಳಸಿಕೊಂಡು 1965 ರಲ್ಲಿ ಒಂದು ಫಿಯಟ್ ಕಾರನ್ನು ಖರೀದಿಸಿದರು. ಅವರು ಸಾಲವನ್ನು ಮರುಪಾವತಿ ಮಾಡುವ ಮೊದಲು 1966 ರಲ್ಲಿ ತಾಷ್ಕೆಂಟ್ನಲ್ಲಿ ನಿಧನರಾದರು.

ಪತಿ ನೀಡಬೇಕಾದ 5,000 ರೂ. ಸಾಲದ ಮರುಪಾವತಿಗಾಗಿ PNB ಬ್ಯಾಂಕಿನವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿಯವರಿಗೆ ಮನವಿ ಮಾಡಿಕೊಂಡರು. ತನ್ನ ಕುಟುಂಬದ ಪಿಂಚಣಿಯಿಂದ ಕಂತುಗಳಲ್ಲಿ ಮರಳಿ ಪಾವತಿಸುತ್ತೇನೆಂದು ಲಲಿತಾ ಶಾಸ್ತ್ರಿಯವರು ಭರವಸೆ ನೀಡಿದರು. ಅವರು ಪ್ರತಿ ತಿಂಗಳು ಕಂತುಗಳನ್ನು ಕಟ್ಟಿ, ಸಾಲ ಮತ್ತು ಬಡ್ಡಿ ಎರಡನ್ನು ಒಂದು ರೂಪಾಯಿ ಕೂಡ ಉಳಿಸದೆ 5000 ರೂಪಾಯಿಗಳನ್ನು ಮರುಪಾವತಿ ಮಾಡಿದರು.

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಬಳಸಿದ ಫಿಯೆಟ್ ಕಾರು ಈಗಲೂ ಅವರ ನಿವಾಸದಲ್ಲಿ ಇದೆ. ಅಂತಹ ಮಹಾನ್ ವ್ಯಕ್ತಿಯ ಸರಳತೆಯ ಪ್ರತೀಕವಾಗಿ ಈ ಕಾರು ಇನ್ನು ರಾರಾಜಿಸುತ್ತಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also Read: ನೀವು ರಸ್ತೆಯಲ್ಲಿ ಬಿಸಾಡುವ ಪ್ಲಾಸ್ಟಿಕ್ ಹಸುಗಳಿಗೆ ಎಷ್ಟು ಮಾರಕ ಅಂತ ಗೊತ್ತಿದ್ಯಾ? ಈ ಹಸುವಿನ ಹೊಟ್ಟೆಯಲ್ಲಿ ಸಿಕ್ಕಿತು 80 ಕೆಜಿ ಪ್ಲಾಸ್ಟಿಕ್.